»   » ಗೋವಾಕ್ಕೆ ಹಾರಲಿರುವ ಅಮಿತಾಬ್ -ರಜನಿಕಾಂತ್

ಗೋವಾಕ್ಕೆ ಹಾರಲಿರುವ ಅಮಿತಾಬ್ -ರಜನಿಕಾಂತ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಭಾರತೀಯ ಚಲನಚಿತ್ರ ಕ್ಷೇತ್ರದ ಎರಡು ತಾರೆಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನ ಮೇರುನಟ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುಂದಿನ ವಾರ ಗೋವಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ಚೆನ್ನೈನಲ್ಲಿ ಅಮಿತಾಬ್ ಹಾಗೂ ರಜನಿಕಾಂತ್ ಅವರು ಸಚಿನ್ ಜೊತೆ ಸೇರಿ ಐಎಸ್ ಎಲ್ ಫುಟ್ಬಾಲ್ ಪಂದ್ಯ ವೀಕ್ಷಿಸಿದ್ದರು. ಮುಂದಿನ ವಾರ ಗೋವಾದಲ್ಲಿ ರಜನಿ ಹಾಗೂ ಬಿಗ್ ಬಿ ಒಟ್ಟಿಗೆ ಸೇರಲಿದ್ದು ನಂತರ ಬೆಂಗಳೂರಿಗೂ ಆಗಮಿಸಲಿದ್ದಾರೆ.

ಗೋವಾದಲ್ಲಿ ನ.20 ರಿಂದ 30ರ ತನಕ ನಡೆಯಲಿರುವ 45ನೇ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ(IFFI)ದಲ್ಲಿ ಈ ಇಬ್ಬರು ದಿಗ್ಗಜರು ಪಾಲ್ಗೊಳ್ಳುತ್ತಿದ್ದಾರೆ.

Amitabh Bachchan

ಈ ಚಲನಚಿತ್ರೋತ್ಸವವನ್ನು ಅಮಿತಾಬ್ ಬಚ್ಚನ್ ಅವರು ಉದ್ಘಾಟಿಸಲಿದ್ದಾರೆ ಹಾಗೂ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.

ರಜನಿಗೆ ಸನ್ಮಾನ: ವರ್ಷದ ಸಿನಿಮಾ ವ್ಯಕ್ತಿ ಎಂದು ಶತಮಾನೋತ್ಸವ ಸಂಭ್ರಮದ ಪ್ರಶಸ್ತಿಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಆಯ್ಕೆ ಮಾಡಲಾಗಿದ್ದು, ಐಎಫ್ಎಫ್ ಐ 2014ರಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಗುವುದು ಎಂದು ಸಚಿವ ರಾಥೋಡ್ ಹೇಳಿದ್ದಾರೆ.

63 ವರ್ಷ ವಯಸ್ಸಿನ ಪದ್ಮಭೂಷಣ ರಜನಿಕಾಂತ್ ಅವರು ಕೆ ಬಾಲಚಂದರ್ ಅವರ 'ಅಪೂರ್ವ ರಾಗಂಗಳ್' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಬೆಂಗಳೂರಿನಲ್ಲಿ ಕಂಡೆಕ್ಟರ್ ಆಗಿ ವೃತ್ತಿ ಬದುಕು ಆರಂಭಿಸಿದ ರಜನಿ ಈಗ ದೇಶ ವಿದೇಶಗಳಲ್ಲಿ ಅಭಿಮಾನಿಗಳ ಆರಾಧ್ಯದೈವವಾಗಿ ಬೆಳೆದಿದ್ದಾರೆ.

Rajinikanth to receive centenary award

ವೈವಿಧ್ಯಮಯ ಸಿನಿಮಾಗಳು: ಈ ಸಿನಿಮಾ ಹಬ್ಬದಲ್ಲಿ 75 ದೇಶಗಳಿಂದ ಬಂದಿರುವ 179 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ ಇಂಡಿಯನ್ ಪನೋರಮಾ ವಿಭಾಗದಲ್ಲಿ 41 ಚಲನಚಿತ್ರಗಳು ಸಿನಿಮಾಸಕ್ತರನ್ನು ರಂಜಿಸಲಿದೆ.

ಇದೇ ಸಂದರ್ಭದಲ್ಲಿ ಸಾಹಿತಿ ಗುಲ್ಜಾರ್, ಜಾಹ್ನು ಬರುವಾ, ರಿಚರ್ಡ್ ಅಟೆನ್ ಬರೋ, ರಾಬಿನ್ ವಿಲಿಯಮ್ಸ್, ಜೊಹ್ರಾ ಸೆಹ್ಗಲ್, ಸುಚಿತ್ರಾ ಸೇನ್, ಫರೂಖ್ ಶೇಖ್ ಅವರ ಬದುಕು ಸಿನಿಮಾ ವೃತ್ತಿ ಬಗ್ಗೆ ವಿಶೇಷ ಕಿರುಚಿತ್ರ ಹಾಗೂ ಚಿತ್ರ ಪ್ರದರ್ಶನಗಳನ್ನು ಏರ್ಪಡಿಸಿರುವುದು ಈ ಬಾರಿಯ ವಿಶೇಷ.

ಈ ನಡುವೆ ಬೆಂಗಳೂರಿನಲ್ಲಿ ವರನಟ ಡಾ. ರಾಜ್‌ಕುಮಾರ್ ಸ್ಮಾರಕವನ್ನು ನವೆಂಬರ್ 29ರಂದು ಲೋಕಾರ್ಪಣೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೂಮುಖ್ಯ ಅತಿಥಿಗಳಾಗಿ ಅಮಿತಾಬ್ ಬಚ್ಚನ್, ರಜನೀಕಾಂತ್ ರನ್ನು ಆಹ್ವಾನಿಸಲಾಗಿದೆ.[ಈ ಬಗ್ಗೆ ವಿವರ ಇಲ್ಲಿದೆ]

English summary
Two legends of Indian cinema - megastar Amitabh Bachchan and superstar Rajinikanth - will share the dais at the opening ceremony of the 45th International Film Festival of India (IFFI) to be held at Goa November 20-30.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada