For Quick Alerts
  ALLOW NOTIFICATIONS  
  For Daily Alerts

  ಸಮಯದ ಜೊತೆ ಸರಸವಾಡುವ ಸಮಯದ ಗೊಂಬೆ

  By Rajendra
  |

  ಕೃಷ್ಣ ಸುಂದರಿ ತಾರೆ ಬಿಪಾಶಾ ಬಸು ಫಿಟ್‌ನೆಸ್ ವಿಚಾರದಲ್ಲಿ ಬಹಳ ಕಟ್ಟುನಿಟ್ಟು. ಒಂದೇ ಒಂದು ದಿನವೂ ಆಕೆ ವ್ಯಾಯಾಮಕ್ಕೆ ಬ್ರೇಕ್ ಹಾಕಿಲ್ಲ. ಅದು ಚಿತ್ರೀಕರಣವೇ ಇರಲಿ ಊರು, ದೇಶ ಯಾವುದೇ ಆಗಿರಲಿ ಜೊತೆಗೆ ತಮ್ಮ ಫಿಟ್‌ನೆಸ್ ಟ್ರೈನರ್‌ರನ್ನು ಕರೆದುಕೊಂಡು ಹೋಗುತ್ತಾರೆ.

  ಬಳುಕುವ ಬಳ್ಳಿಯಂತಿರುವ ಅವರ ಸೌಂದರ್ಯ ರಹಸ್ಯ ಇದೇ. ಈಗ ಬಿಪಾಶಾ ಬಸು ಫಿಟ್‌ನೆಸ್ ಡಿವಿಡಿಯನ್ನೂ ಹೊರತರುತ್ತಿದ್ದಾರೆ. ಬಿಪಾಸಾ ಹೊರತರುತ್ತಿರುವ ಎರಡನೇ ಫಿಟ್‌ನೆಸ್ ಡಿವಿಡಿ ಇದಾಗಿದೆ. ಮೊದಲ ಡಿವಿಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಹೊರಬರುತ್ತಿರುವ ಎರಡನೇ ಡಿವಿಡಿಗಾಗಿ ಸಾಕಷ್ಟು ಕಸರತ್ತನ್ನೂ ಬಿಪಾಶಾ ಮಾಡಿದ್ದಾರೆ.

  ಇದಕ್ಕಾಗಿ ದಿನದ 12 ಗಂಟೆ ಸಮಯ ಮೀಸಲಿಟ್ಟಿದ್ದಾರಂತೆ ಬಿಪಾಶಾ. ಉಳಿದರ್ಧ ದಿನ ಶೂಟಿಂಗ್ ಹಾಗೂ ಉಳಿದ ಚಟುವಟಿಕೆಗಳಿಗೆ ಮೀಸಲು. ಹಾಗಾಗಿ ಯಾವಾಗ ತಿನ್ನುತ್ತಾರೋ, ಯಾವಾಗ ಮಲಗುತ್ತಾರೋ ಒಂದೂ ಗೊತ್ತಾಗದಂತಹ ಪರಿಸ್ಥಿತಿ ಬಿಪಾಶಾಗೆ ಉದ್ಭವವಾಗಿದೆ.

  ಈ ಒತ್ತಡದಲ್ಲೇ ಬಿಪಾಶಾ ಈಗ ಡಬಲ್ ಟ್ರಬಲ್‌ಗೆ ಸಿಕ್ಕಿಬಿದ್ದಿದ್ದಾರೆ. ಈಗ ಆಕೆ ಡಿವಿಡಿ ಮುಗಿಸುವುದರ ಜೊತೆಗೆ ಒಪ್ಪಿಕೊಂಡ ಚಿತ್ರಗಳನ್ನು ಜರೂರಾಗಿ ಮುಗಿಸಬೇಕಾಗಿದೆ. ಈ ಹಿಂದೆ 'ಲವ್ ಯುವರ್ ಸೆಲ್ಫ್' ಎಂಬ ಫಿಟ್‌ನೆಸ್ ಡಿವಿಡಿಯನ್ನು ಬಿಪಾಶಾ ಬಿಡುಗಡೆ ಮಾಡಿದ್ದರು.

  ಈ ರೀತಿ ಕಸರತ್ತು ಮಾಡಿ ಮಾಡಿ ತಮ್ಮ ದೇಹವನ್ನು ತೆಳ್ಳಗೆ ಬಳುಕುವ ಬಳ್ಳಿಯಂತೆ ಮಾಡಿಕೊಂಡು ಬಿಕಿನಿಗೆ ಹೇಳಿ ಮಾಡಿಸಿದಂತಿದ್ದಾರೆ. ಕೆಲ ದಿನಗಳ ಹಿಂದೆ ಸಪೂರ ದೇಹಕ್ಕಾಗಿ ಬಿಪಾಶಾ ಸಿಹಿ ತಿನ್ನುವುದನ್ನು ನಿಲ್ಲಿಸಿದ್ದರು. ಸದ್ಯಕ್ಕೆ ಸಿಹಿಯಿಂದ ದೂರ ಇರುವ ಬಿಪಾಶಾ, ಉಪ್ಪು, ಹುಳಿ, ಖಾರದ ಬಗ್ಗೆ ಚಕಾರವೆತ್ತುತ್ತಿಲ್ಲ.

  ಇಷ್ಟಕ್ಕೂ ತಾವು ಯಾವ ಘನಂಧಾರಿ ಕಾರ್ಯಕ್ಕಾಗಿ ಸಿಹಿ ತಿನ್ನುವುದನ್ನು ಬಿಟ್ಟಿದ್ದರು ಬಿಪಾಸಾ ಎಂದರೆ, ಇದೆಲ್ಲಾ ತಮ್ಮ ಮುಂದಿನ ಚಿತ್ರ 'ಪ್ಲೇಯರ್‌'ಗಾಗಿ ಕಸರತ್ತು ಎಂದಿದ್ದಾರೆ ಬಿಂಕದ ಬಂಗಾರಿ. ಚಿತ್ರದಲ್ಲಿ ಈಕೆ ಬಿಕಿನಿ ಬಾಡಿಗಾಗಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಒಟ್ಟು ಆರು ವಾರಗಳ ಕಾಲ ಸಿಹಿಯಿಂದ ಕಿಲೋ ಮೀಟರ್‌ಗಳಷ್ಟು ದೂರ ಸರಿದಿದ್ದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್)

  English summary
  Bollywood actress Bipasha Basu currently busy in her second fitness DVD. She is apparently stretching herself to the limit to squeeze in time for her DVD. The dusky babe has been rehearsing for 12 hours a day for her DVD shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X