»   » ಗರ್ಭಿಣಿ ಅಂತ ಸುಮ್ ಸುಮ್ನೆ ಗಾಸಿಪ್ ಹಬ್ಬಿಸುವವರ ವಿರುದ್ಧ ಬಿಪಾಶಾ ಸಿಡಿಮಿಡಿ!

ಗರ್ಭಿಣಿ ಅಂತ ಸುಮ್ ಸುಮ್ನೆ ಗಾಸಿಪ್ ಹಬ್ಬಿಸುವವರ ವಿರುದ್ಧ ಬಿಪಾಶಾ ಸಿಡಿಮಿಡಿ!

Posted By:
Subscribe to Filmibeat Kannada

ನಟಿ ಬಿಪಾಶಾ ಬಸು ಕಿರಿಕಿರಿಗೊಂಡಿದ್ದಾರೆ. 'ಬಿಪಾಶಾ ಬಸು ಗರ್ಭವತಿ' ಎಂಬ ಗಾಸಿಪ್ ಪದೇ ಪದೇ ಕೇಳಿಬರುತ್ತಿರುವುದರಿಂದ, ಬಿಪಾಶಾ ಸಿಡಿಮಿಡಿಗೊಂಡಿದ್ದಾರೆ. ಸುಮ್ ಸುಮ್ನೆ ಗಾಳಿ ಸುದ್ದಿ ಹಬ್ಬಿಸುವವರ ವಿರುದ್ಧ ಬಿಪಾಶಾ ಮುನಿಸಿಕೊಂಡಿದ್ದಾರೆ.

ಅಷ್ಟಕ್ಕೂ, ಇದೆಲ್ಲ ಶುರುವಾಗಿದ್ದು ಕಳೆದ ವರ್ಷ. ಅನಾರೋಗ್ಯದ ಕಾರಣ ಬಿಪಾಶಾ ಹಾಗೂ ಪತಿ ಕರಣ್ ಸಿಂಗ್ ಗ್ರೋವರ್ ಮುಂಬೈನ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದರು. ಇಷ್ಟಕ್ಕೆ, ಬಿಪಾಶಾ ಗರ್ಭಿಣಿ ಎಂಬ ಗುಸು ಗುಸು ಬಾಲಿವುಡ್ ತುಂಬಾ ಕೇಳಿಬಂದಿತ್ತು. ಅದು ಬಿಪಾಶಾ ಕಿವಿಗೂ ಬಿದ್ಮೇಲೆ, ''ಶುದ್ಧ ಸುಳ್ಳು'' ಎಂದು ಸ್ಪಷ್ಟನೆ ನೀಡಿದ್ದರು.

ಒಂದು ಬಾರಿ ಹೀಗೆ ಆದರೆ ಪರ್ವಾಗಿಲ್ಲ. ಆದ್ರೆ, ಪದೇ ಪದೇ ಅದೇ ವಿಚಾರವಾಗಿ ಬ್ರೇಕಿಂಗ್ ನ್ಯೂಸ್ ಮಾಡ್ತಿರೋದು ಬಿಪಾಶಾಗೆ ಕೋಪ ತರಿಸಿದೆ. ಹೀಗಾಗಿ, 'ಮದುವೆಯಾದ ಮಾತ್ರಕ್ಕೆ ಮಕ್ಕಳು ಹೆರಲೇಬೇಕೆಂಬ ನಿಯಮ ಇಲ್ಲ' ಎಂದು ಮುಖ ಗಂಟು ಮಾಡಿಕೊಂಡು ಪ್ರತಿಕ್ರಿಯೆ ಕೊಟ್ಟಿದ್ದಾರೆ ಬಾಲಿವುಡ್ ನಟಿ ಬಿಪಾಶಾ ಬಸು. ಮುಂದೆ ಓದಿರಿ....

ಬಿಪಾಶಾ ತೀಕ್ಷ್ಣ ಪ್ರತಿಕ್ರಿಯೆ

''ಮಕ್ಕಳನ್ನ ಹೆರುವುದು ಅದ್ಭುತವಾದ ಅನುಭವ. ಆದ್ರೆ, ಪ್ರತಿಯೊಬ್ಬ ಮಹಿಳೆಗೂ ಅದಕ್ಕೂ ಮೀರಿದ ವಿಷಯಗಳಿರುತ್ತವೆ. ಮದುವೆಯಾದ ಮಾತ್ರಕ್ಕೆ ಮಕ್ಕಳನ್ನು ಹೆರಬೇಕು ಎಂಬ ನಿಬಂಧನೆಯೇನೂ ಇಲ್ಲ'' ಎಂದು ಹೇಳ್ತಾ ತಾನು ಗರ್ಭವತಿ ಎಂಬ ಸುದ್ದಿಯನ್ನ ಬಿಪಾಶಾ ಬಸು ನಿರಾಕರಿಸಿದ್ದಾರೆ.

ಬಿಪಾಶ ಪ್ರೆಗ್ನೆಂಟ್ ಅಂತೆ.! ಶುಭಾಶಯ ಹೇಳುವುದಕ್ಕು ಮುಂಚೆ ಈ ಸ್ಟೋರಿ ಓದಿ

ಬ್ಯಾಗ್ ಹಿಡಿದುಕೊಂಡಿದ್ದಕ್ಕೆ ಸುದ್ದಿ ಆಗಿತ್ತು

ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ, ಪತಿ ಜೊತೆ ಕಾರಿನಲ್ಲಿ ಹೋಗುತ್ತಿರುವಾಗ, ಕೈಯಲ್ಲಿದ್ದ ಬ್ಯಾಗ್ ನ ಮಡಿಲಲ್ಲಿ ಬಿಪಾಶಾ ಹಿಡಿದುಕೊಂಡಿದ್ದರು. ಅದನ್ನ ನೋಡಿ ಕೆಲ ಪತ್ರಿಕೆಗಳು 'ಬಿಪಾಶಾ ಗರ್ಭಿಣಿ' ಎಂದು ಸುದ್ದಿ ಮಾಡಿದ್ದವು. ಇದು ಬಿಪಾಶಾಗೆ ಕಿರಿಕಿರಿ ಉಂಟು ಮಾಡಿತ್ತು.

ಕರಣ್ ಕೆಂಡಾಮಂಡಲ

''ಬಿಪಾಶಾ ಗರ್ಭಿಣಿಯಾದರೆ ಮೊದಲು ನನಗೆ ಗೊತ್ತಾಗುತ್ತದೆ. ನಿಮಗಲ್ಲ'' ಎಂದು ಬಿಪಾಶಾ ಪತಿ ಕರಣ್ ಸಿಂಗ್ ಗ್ರೋವರ್ ಕೂಡ ಸಿಟ್ಟಿನಿಂದ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಎರಡು ವರ್ಷಗಳ ಹಿಂದೆ ಮದುವೆ ಆದ ಬಿಪಾಶಾ-ಕರಣ್

ಎರಡು ವರ್ಷಗಳ ಹಿಂದೆ, ಅಂದ್ರೆ 2016 ರಲ್ಲಿ ಬಿಪಾಶಾ-ಕರಣ್ ವಿವಾಹ ಮಹೋತ್ಸವ ಅದ್ಧೂರಿ ನಡೆದಿತ್ತು. ಬಿಪಾಶಾ ಬಸು ಅವರಿಗಿಂತ ಪತಿ ಕರಣ್ ಮೂರು ವರ್ಷ ಚಿಕ್ಕವರು. ಅದಾಗಲೇ ಎರಡು ಬಾರಿ ಮದುವೆ ಆಗಿ ವಿಚ್ಛೇದನ ಪಡೆದಿರುವ 'ಅನುಭವಿ' ಕರಣ್.

English summary
Bollywood Actress Bipasha Basu blasts her pregnancy rumours.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X