»   » ಪ್ರಿಯಕರನ ಜೊತೆ ಬಿಪಾಶಾ ಮದುವೆಗೆ ಗಟ್ಟಿಮೇಳ

ಪ್ರಿಯಕರನ ಜೊತೆ ಬಿಪಾಶಾ ಮದುವೆಗೆ ಗಟ್ಟಿಮೇಳ

By: ಉದಯರವಿ
Subscribe to Filmibeat Kannada

ಕಡೆಗೂ ಬಾಲಿವುಡ್ ಬಿಂದಾಸ್ ಬೆಡಗಿ ಬಿಪಾಶಾ ಬಸು ಮದುವೆಗೆ ಮುಹೂರ್ತ ಕೂಡಿಬಂದಿದೆ. ಹಸೆಮಣೆ ಏರಲು ಬಿಪಾಶಾ ಸಿದ್ಧರಾಗುತ್ತಿದ್ದಾರೆ. ಬಾಲಿವುಡ್ ಹೀರೋ ಹಾಗೂ ಹೊಸ ಬಾಯ್ ಫ್ರೆಂಡ್ ಹರ್ಮನ್ ಬವೇಜಾ ಜೊತೆಗಿನ ಲವ್ ಸ್ಟೋರಿಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.

ಇವರಿಬ್ಬರೂ ಈಗ ಮದುವೆ ಮೂಲಕ ಇಬ್ಬರನ್ನೂ ಒಂದಾಗುತ್ತಿದ್ದಾರೆ. ಬಾಲಿವುಡ್ ಮಸಲ್ ಮ್ಯಾನ್ ಜಾನ್ ಅಬ್ರಹಾಂ ಜೊತೆಗಿನ ಸಂಬಂಧ ಮುರಿದುಬಿದ್ದ ಬಳಿಕ ಹರ್ಮಾನ್ ಗೆ ಬಿಪಾಶಾ ಹತ್ತಿರವಾಗಿದ್ದರು. ಇವರಿಬ್ಬರ ಬಗ್ಗೆ ಆಗಾಗ ಹರಿದಾಡುತ್ತಿದ್ದ ಗಾಸಿಪ್ ಸುದ್ದಿಗಳಿಗೆ ಸ್ವತಃ ಬಿಪಾಶಾ ಟ್ವಿಟ್ಟರ್ ಮೂಲಕ ಉತ್ತರಿಸುತ್ತಿದ್ದರು. [ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸಿ ಸಿಕ್ಕಿಬಿದ್ದ ತಾರೆಗಳು]


ತಮ್ಮಿಬ್ಬರ ನಡುವೆ ಪ್ಯಾರ್ ಮೊಹಬ್ಬತ್ ಇಷ್ಕ್ ಇದೆ ಎಂದು ಒಪ್ಪಿಕೊಂಡಿದ್ದರು. ಬಿಪಾಶಾ ಟ್ವೀಟ್ ಮಾಡುತ್ತಾ, "ನಾನೂ ಹರ್ಮಾನ್ ಇಬ್ಬರೂ ಮದುವೆಯಾಗಬೇಕೆಂದಿದ್ದೇವೆ. ಕಡೆಗೂ ಒಬ್ಬ ಗುಣವಂತನನ್ನು ಪರಿಚಯಿಸುವ ಮೂಲಕ ಆ ದೇವರೇ ನನಗೆ ಆಶೀರ್ವಾದ ಮಾಡಿದ್ದಾನೆ" ಎಂದಿದ್ದರು.

ಸದ್ಯಕ್ಕೆ ಹರ್ಮಾನ್ ಅವರು ಡಿಷ್ಕಿಯಾನ್ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ತನ್ನ ಪತಿ ರಾಜ್ ಕುಂದ್ರಾ ಜೊತೆಗೆ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಈ ಚಿತ್ರದ ಬಳಿಕ ಹರ್ಮಾನ್ ಹಾಗೂ ಬಿಪಾಶಾ ನಿಶ್ಚಿತಾರ್ಥ ನಡೆಯಲಿದೆ.

ಈ ಮದುವೆಗೆ ಬಿಪಾಶಾ ಹಾಗೂ ಹರ್ಮಾನ್ ಇಬ್ಬರ ತಂದೆತಾಯಿ ಒಪ್ಪಿಗೆ ಇದೆಯಂತೆ. ಇದೇ ಧೈರ್ಯದ ಮೇಲೆ ಇಬ್ಬರೂ ತಮ್ಮ ಮದುವೆ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ನಿಶ್ಚಿತಾರ್ಥದ ಬಳಿಕ ಶೀಘ್ರದಲ್ಲೇ ಮದುವೆ ಮಾಡಿಕೊಳ್ಳಲು ಇಬ್ಬರೂ ತೀರ್ಮಾನಿಸಿದ್ದಾರೆ ಎಂಬುದು ಬಾಲಿವುಡ್ ಸಮಾಚಾರ. (ಏಜೆನ್ಸೀಸ್)

English summary
Bollywood actor Harman Baweja has finally confessed about his relationship with Bipasha Basu. After months of speculations and being spotted together, Harman has disclosed his love for the "Jism" actress. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada