For Quick Alerts
  ALLOW NOTIFICATIONS  
  For Daily Alerts

  ಬಿಜೆಪಿ ಕೇಂದ್ರ ಸಚಿವರ ಮಗಳು ಬಾಲಿವುಡ್‌ಗೆ ಪಾದಾರ್ಪಣೆ

  |

  ರಾಜಕಾರಣಿಗಳ ಮಕ್ಕಳು ಸಿನಿಮಾಗಳಲ್ಲಿ ನಟಿಸುವುದು ಹೊಸತೇನು ಅಲ್ಲ. ಆದರೆ ರಾಜಕಾರಣಿಗಳ ಹೆಣ್ಣು ಮಕ್ಕಳು ಸಿನಿಮಾ ನಾಯಕಿಯಾಗುವುದು ತುಸು ಕಡಿಮೆ. ಈಗ ಬಿಜೆಪಿಯ ಕೇಂದ್ರ ಸಚಿವರೊಬ್ಬರ ಮಗಳು ಬಾಲಿವುಡ್‌ಗೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

  ಬಿಜೆಪಿ, ಆರ್‌ಎಸ್‌ಎಸ್‌ನ ಹಿರಿಯ ಮುಖಂಡ, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಟ್ರಿಯಾಲ್ ಅವರ ಪುತ್ರಿ ಆರುಶಿ ನಿಶಾಂಕ್ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದು, ಅವರ ನಟನೆಯ ಮೊದಲ ಸಿನಿಮಾ ಸೆಟ್ಟೇರಿದೆ.

  ಆರುಶಿ ನಿಶಾಂಕ್ ಅವರು ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಲಿದ್ದು ಸಿನಿಮಾಕ್ಕೆ 'ತಾರಿಣಿ' ಎಂದು ಹೆಸರಿಡಲಾಗಿದೆ. ಸಿನಿಮಾದಲ್ಲಿ ನೌಕಾದಳದ ಅಧಿಕಾರಿಯಾಗಿ ಆರುಶಿ ನಿಶಾಂಕ್ ನಟಿಸಿದ್ದಾರೆ.

  ಭರತನಾಟ್ಯ ನೃತ್ಯಪಟುವೂ ಆಗಿರುವ ಆರುಶಿ ಗೆ ಇದು ಮೊದಲ ಸಿನಿಮಾ. ಆರುಶಿ ಅವರು 2015 ರಲ್ಲಿಯೇ ವಿವಾಹವಾಗಿದ್ದರು. ಈಗ ಅವಕಾಶ ದೊರಕಿದ ಕಾರಣ ಸಿನಿಮಾಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಅನ್ನು ಮಹಿಳಾ ದಿನಾಚರಣೆಯಂದು ಆರುಶಿ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

  Recommended Video

  4ವರ್ಷಾದ ಮಗುವಾಗಿದ್ದಾಗಲೇ ಹಾರ್ಮೋನಿಯಂ‌ ನುಡಿಸಿದ ಶ್ರೆಯಾ ಘೋಶಾಲ್ | Filmibeat Kannada

  ಆರು ಮಂದಿ ಮಹಿಳಾ ನೌಕಾದಳದ ಸೇನಾ ಸಿಬ್ಬಂದಿ 55 ಅಡಿಯ ಸಣ್ಣ ದೋಣಿಯಲ್ಲಿ ಸಮುದ್ರದಲ್ಲಿ ಕಳೆದುಹೋಗಿ, ಎಲ್ಲ ಸವಾಲುಗಳನ್ನು ಎದುರಿಸಿ ವಾಪಸ್ ಬರುವ ನಿಜವಾದ ಕತೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ.

  English summary
  BJP union minister's daughter Arushi Nishank acting in her first bollywood movie.
  Wednesday, March 10, 2021, 11:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X