twitter
    For Quick Alerts
    ALLOW NOTIFICATIONS  
    For Daily Alerts

    ಹಿಂದಿ ಚಿತ್ರರಂಗಕ್ಕೆ 100: ಟಾಪ್ ನಾಯಕಿಯರು

    By Mahesh
    |

    ಭಾರತದಲ್ಲಿ ಚಿತ್ರರಂಗ ಹಾಗೂ ಕ್ರಿಕೆಟ್ ಪ್ರತ್ಯೇಕ ಧರ್ಮವಾಗಿ ಬೆಳೆದು ಬಿಟ್ಟಿದೆ. ಕಪ್ಪು ಬಿಳುಪು, ಈಸ್ಟಮನ್ ಕಲರ್, ಸಿನಿಮಾ ಸ್ಕೋಪ್ 70ಎಂಎಂ ಸ್ಕ್ರೀನ್ ಜೊತೆಗೆ 3ಡಿ ಮಾದರಿಯಲ್ಲೂ ಹಿಂದಿ ಚಿತ್ರರಂಗವನ್ನು ಅಭಿಮಾನಿಗಳು ಕಂಡಿದ್ದಾರೆ. ಹಿಂದಿ ಚಿತ್ರರಂಗ ಈಗ ನೂರರ ಸಂಭ್ರಮ ಕಂಡಿದೆ. 1913ರಲ್ಲಿ ಮೊದಲ ಟಾಕಿ ಚಿತ್ರ ತೆರೆ ಕಂಡ ನಂತರ ಹಿಂಚಿ ಚಿತ್ರರಂಗ ಬಾಲಿವುಡ್ ಆಗಿ ಬೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪತಾಕೆ ಹಾರಿಸಿದೆ.

    ಸಮಾಜದ ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದಲಾವಣೆ, ಬೆಳವಣಿಗೆಗೆ ಚಿತ್ರರಂಗ ಕೂಡಾ ಕೈ ಜೋಡಿಸಿದೆ. ಜನರಲ್ಲಿ ಉತ್ಸಾಹ ತುಂಬುವಲ್ಲಿ ಬಾಲಿವುಡ್ ನ ನಾಯಕ ನಾಯಕಿಯರು ಯಶಸ್ವಿಯಾಗಿದ್ದಾರೆ. ಕಲೆ, ಪ್ರತಿಭೆ ಹಾಗೂ ಆರ್ಥಿಕವಾಗಿ ಬೆಳೆದು ನಿಂತಿರುವ ಬಾಲಿವುಡ್ ಜಗತ್ತಿನಲ್ಲಿ ಹಲವಾರು ನಾಯಕಿಯರು ಸಂಚಲನ ಮೂಡಿಸಿದ್ದಾರೆ.

    ಸಾಮಾನ್ಯವಾಗಿ ಪುರುಷ ಪ್ರಧಾನವಾದ ಸಮಾಜದಲ್ಲಿ ನಾಯಕಿಯರಿಗೆ ಚಿತ್ರರಂಗದಲ್ಲೂ ಸಿಗುತ್ತಿದ್ದ ಪ್ರಾಧಾನ್ಯತೆ ಅಷ್ಟ ಕಷ್ಟೆ. ಆದರೆ, ನಾಯಕಿಯರು ತಮ್ಮ ಪ್ರತಿಭೆ, ಗ್ಮಾಮರ್ ಮೂಲಕ ರಸಿಕರ ಹೃದಯ ಗೆದ್ದಿದ್ದಲ್ಲದೆ ಚಿತ್ರರಂಗದ ಬೆಳವಣಿಗೆಗೂ ಕಾರಣರಾಗಿದ್ದಾರೆ. ನಾಯಕನ ಜೊತೆ ಮರ ಸುತ್ತುವ ಪಾತ್ರಗಳ ಕಾಲ ಮುಗಿದ್ದು ನಾಯಕಿ ಪ್ರಧಾನ ಪಾತ್ರಗಳುಳ್ಳ ಕಹಾನಿಯಂಥ ಚಿತ್ರಗಳನ್ನು ಜನ ಮೆಚ್ಚಿ ಒಪ್ಪಿಕೊಂಡಿದ್ದಾರೆ.

    ಹಿಂದಿ ಚಿತ್ರರಂಗದಲ್ಲಿ ನರ್ಗೀಸ್, ಸ್ಮ್ತಿತಾ ಪಾಟೀಲ್, ಶಬಾನಾ ಆಜ್ಮಿ, ಮಾಧುರಿ ದೀಕ್ಷಿತ್ ಹಾಗೂ ಇತ್ತೀಚೆಗೆ ವಿದ್ಯಾ ಬಾಲನ್ ಅವರು ಎಲ್ಲಾ ರೀತಿ ಪಾತ್ರಗಳಲ್ಲೂ ಸೈ ಎನಿಸಿಕೊಂಡ ಪ್ರತಿಭೆಗಳು. ಸಿನಿತಾರೆಯರ ಅದ್ಭುತ ಕಲಾವಂತಿಕೆಗೆ ನಮಿಸುತ್ತಾ, ಚಿತ್ರರಂಗದ ಮೇಲೆ ಗಾಢ ಪ್ರಭಾವ ಬೀರಿ ಅಚ್ಚಳಿಯದ ಛಾಪು ಮೂಡಿಸಿದ ನಾಯಕಿಯರ ಝಲಕ್ ಮುಂದಿನ ಚಿತ್ರಸರಣಿಯಲ್ಲಿ ನಿಮಗಾಗಿ...

    ನರ್ಗೀಸ್ ದತ್

    ನರ್ಗೀಸ್ ದತ್

    ಹಿಂದಿ ಚಿತ್ರರಂಗದ ಅದ್ಭುತ ಕಲಾವಿದೆ. ಮದರ್ ಇಂಡಿಯಾ(1957) ಚಿತ್ರದ ರಾಧಾ ಪಾತ್ರ ಹತ್ತು ಹಲವು ಪ್ರಶಸ್ತಿ ತಂದುಕೊಟ್ಟಿದ್ದಲ್ಲದೆ ನರ್ಗೀಸ್ ಪ್ರತಿಭೆಗೆ ಕನ್ನಡಿ ಹಿಡಿಯಿತು.

    ಶೋ ಮ್ಯಾನ್ ರಾಜ್ ಕಪೂರ್ ಜೊತೆ ನಟಿಸಿದ 16 ಚಿತ್ರಗಳು ಮರೆಯುವಂತಿಲ್ಲ.2011 ರಲ್ಲಿ ರಿಡೀಫ್ .ಕಾಂ ಹೊರ ತಂದ ಶತಮಾನದ ನಾಯಕಿಯರ ಪಟ್ಟಿಯಲ್ಲೂ ನರ್ಗೀಸ್ ಗೆ ಅಗ್ರಸ್ಥಾನ ಸಿಕ್ಕಿತ್ತು. ಚಿತ್ರರಂಗದ ಹೊರಗೂ ಒಳಗೂ ತಮ್ಮ ಚಾರ್ಮ್ ಉಳಿಸಿಕೊಂಡು ಉತ್ತಮ ಕಲಾವಿದೆಯಾಗಿ ಹಿಂದಿ ಚಿತ್ರರಂಗದಲ್ಲಿ ಅಜರಾಮರವಾಗಿದ್ದಾರೆ.
    ಸ್ಮಿತಾ ಪಾಟೀಲ್

    ಸ್ಮಿತಾ ಪಾಟೀಲ್

    ಭೂಮಿಕಾ ಹಾಗೂ ಚಕ್ರ ಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಸ್ನಿಗ್ಧ ಸುಂದರಿ ಸ್ಮಿತಾ ಪಾಟೀಲ್ ಅವರ ಸಹಜ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಿಂದಿ ಚಿತ್ರರಂಗದ ಆಫ್ ಬೀಟ್ ಚಿತ್ರಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಉತ್ತಮ ಕಲಾವಿದೆಯಾಗಿ ಮೆರೆದವರು.

    ಶಬನಾ ಆಜ್ಮಿ

    ಶಬನಾ ಆಜ್ಮಿ

    ಐದು ಬಾರಿ ರಾಷ್ಟ್ರ ಪ್ರಶಸ್ತಿ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿರುವ ಶಬನಾ ಆಜ್ಮಿ ಅವರು ಅರ್ಥ್, ಅಂಕೂರ್, ಫೈರ್ ಚಿತ್ರಗಳಲ್ಲಿ ನೀಡಿದ ಅಭಿನಯ ಅವಿಸ್ಮರಣೀಯ. ಅನೇಕ ಬಾರಿ ಇವರ ಪಾತ್ರಗಳು ವಿವಾದ ಸೃಷ್ಟಿಸಿದರೂ ಹೊಸ ಹೊಸ ಚಾಲೆಂಜಿಂಗ್ ಪಾತ್ರಗಳ ಅನ್ವೇಷಣೆಯಲ್ಲಿ ತೊಡಗಿದ ಆಜ್ಮಿ ಅವರ ನಟನೆ, ಪಾತ್ರಗಳು ಚಿತ್ರರಂಗಕ್ಕೆ ಗಟ್ಟಿನೆಲೆ ಒದಗಿಸಿದೆ

    ಮಧುಬಾಲಾ

    ಮಧುಬಾಲಾ

    ಹಾಲಿವುಡ್ ನ ಮರ್ಲಿನ್ ಮನ್ರೋ ಜೊತೆ ಹೋಲಿಸಬಲ್ಲ ಅದ್ಭುತ ಪ್ರತಿಭೆ ಮಧು ಬಾಲಾ. ಆಕೆ ನಗುವಿಗೆ ಮನ ಸೋಲದ ನಾಯಕರೇ ಇಲ್ಲ. ತನ್ನ ನಟನೆ ಮೂಲಕ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿ ಇಂದಿನ ನಾಯಕಿಯರಿಗೆ ಮಾದರಿಯಾಗಬಲ್ಲ ನಾಯಕಿ ನಟಿ ಮಧು ಬಾಲಾ

    ಹೇಮಮಾಲಿನಿ

    ಹೇಮಮಾಲಿನಿ

    ಡ್ರೀಮ್ ಗರ್ಲ್ ಹೇಮಮಾಲಿನಿ ಅವರು ಸುಮಾರು 150 ಚಿತ್ರಗಳಲ್ಲಿ ನಟಿಸಿದ್ದಲ್ಲದೆ 40 ವರ್ಷಗಳ ಕಾಲ ಚಿತ್ರರಂಗದಲ್ಲಿ ಉಳಿದ ನಾಯಕಿ. ಕಮರ್ಷಿಯಲ್ ಹಾಗೂ ಆರ್ಟ್ ಸಿನಿಮಾ ಎರಡರಲ್ಲೂ ತಮ್ಮ ಅಭಿನಯದ ಮೂಲಕ ಗಮನ ಸೆಳೆದವರು. ಸಿನಿ ರಸಿಕರ ಪಾಲಿನ ಎವರ್ ಗ್ರೀನ್ ಕನಸಿನ ಕನ್ಯೆ

    ಶ್ರೀದೇವಿ

    ಶ್ರೀದೇವಿ

    ಹಿಂದಿ ಚಿತ್ರರಂಗಕ್ಕೆ ಹೊಸ ಆಯಾಯ ತಂದುಕೊಟ್ಟ ದಕ್ಷಿಣ ಭಾರತದ ಅದ್ಭುತ ಪ್ರತಿಭೆ ಶ್ರೀದೇವಿ. ಸದ್ಮಾ(1983) ನಗೀನಾ(1986) ಮಿ. ಇಂಡಿಯಾ(1987) ಚಾಂದಿನಿ(1989), ಚಾಲ್ ಬಾಜ್(1989), ಖುದಾ ಗವಾ(1992) ಚಿತ್ರಗಳು ಇಂದಿಗೂ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇತ್ತೀಚೆಗೆ ಇಂಗ್ಲೀಷ್ ವಿಂಗ್ಲೀಷ್ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡು ಗೆದ್ದಿದ್ದಾರೆ.

    ರೇಖಾ

    ರೇಖಾ

    ಹಿಂದಿ ಚಿತ್ರರಂಗದ ಚಿರಯೌವನೆ ಎಂಬ ಪಟ್ಟಧರಿಸಿರುವ ಕೃಷ್ಣ ಸುಂದರಿ ರೇಖಾ ಅವರು ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಆರ್ಟ್ ಚಿತ್ರಗಳಲ್ಲೂ ಅದ್ಭುತವಾಗಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್ ಜೋಡಿ ಕಮರ್ಷಿಯಲ್ ಚಿತ್ರಗಳಲ್ಲಿ ಸರಿ ಸಮಾನನಾಗಿ ಕಾಣಿಸಿಕೊಂಡಿದ್ದಾರೆ.

    ಮಾಧುರಿ ದೀಕ್ಷಿತ್

    ಮಾಧುರಿ ದೀಕ್ಷಿತ್

    ಕಿಲ್ಲರ್ ಸ್ಮೈಲ್ ಮೂಲಕ ಎಲ್ಲರ ಮನ ಗೆದ್ದ ಮಾಧುರಿ ದೀಕ್ಷಿತ್ ಅವರು ಹಿಂದಿ ಚಿತ್ರರಂಗಕ್ಕೆ ಕುಣಿಯುವುದನ್ನು ಕಲಿಸಿಕೊಟ್ಟ ನಾಯಕಿ. ನೃತ್ಯ ಹಾಗೂ ಅಭಿನಯದ ಮೂಲಕ ಹಂತ ಹಂತವಾಗಿ ಬೆಳೆದ ಮಾಧುರಿ ಎಲ್ಲರ ಹೃದಯ ಗೆದ್ದ ಚೋರಿಯಾಗಿಬಿಟ್ಟರು. ಎಂಎಫ್ ಹುಸೇನ್ ರಂಥ ಕಲಾವಿದರಿಗೆ ಸ್ಪೂರ್ತಿ ತಂದ ಮಾಧುರಿ ಚಾರ್ಮ್ ಅವಿನಾಶಿಯಾಗಿದೆ.

    ಐಶ್ವರ್ಯಾ ರೈ

    ಐಶ್ವರ್ಯಾ ರೈ

    ನಟನೆಯ ಗಂಧ ಗಾಳಿ ಇಲ್ಲದ ಮಾಡೆಲ್ ಜಗತ್ತಿನಿಂದ ಬಂದ ಸುಂದರಿ ಐಶ್ವರ್ಯಾ ರೈ ಚಿತ್ರರಂಗದಲ್ಲಿ ತನ್ನದೆ ಆದ ಪ್ರಭಾವ ಬೀರಲು ಹಲವು ವರ್ಷಗಳೇ ಬೇಕಾಯಿತು.

    ಹಮ್ ದಿಲ್ ದೇ ಚುಕೆ ಸನಮ್, ತಾಲ್, ದೇವದಾಸ್ ಚಿತ್ರಗಳ ಮೂಲಕ ನಟನೆಯಲ್ಲೂ ಸೈ ಎನಿಸಿಕೊಂಡರು. ಐಶ್ವರ್ಯಾ ಸೌಂದರ್ಯ, ಕಣ್ಣಿನ ಸೆಳೆತಕ್ಕೆ ಚಿತ್ರರಸಿಕರು ಸಿಲುಕಿ ಮೈಮರೆತರು. ಅಂತಾರಾಷ್ಟ್ರೀಯ ಮಟ್ಟಕ್ಕೆ ಚಿತ್ರರಂಗವನ್ನು ಕೊಂಡೊಯ್ದ ನಾಯಕಿಯಾಗಿ ಬೆಳೆದರು.
    ವಿದ್ಯಾ ಬಾಲನ್

    ವಿದ್ಯಾ ಬಾಲನ್

    ರೇಖಾ ಅವರನ್ನು ಗುರುವಂತೆ ಕಾಣುವ ವಿದ್ಯಾ ಬಾಲನ್, ಇಂದಿನ ಕಮರ್ಷಿಯಲ್ ಸಿನಿಮಾಗಳ ಯುಗದಲ್ಲಿ ನಾಯಕಿ ಪ್ರಧಾನ ಪಾತ್ರಗಳಿಗೆ ಬೆಲೆ ತಂದುಕೊಟ್ಟವರು. ತಮ್ಮ ಪಾತ್ರ, ಅಭಿನಯವನ್ನು ಸಮರ್ಥಿಸಿಕೊಂಡು ಜನಮನ ಗೆದ್ದವರು. ದಿ ಡರ್ಟಿ ಪಿಕ್ಚರ್ ಹಾಗೂ ಕಹಾನಿ ಚಿತ್ರಗಳ ಮೂಲ ಮನೆ ಮಾತಾದವರು. ಬಾಲಿವುಡ್ ನ ಟಾಪ್ ಲೀಗ್ ನಾಯಕಿಯರ ಪಟ್ಟಿಗೆ ಲೇಟೇಸ್ಟ್ ಎಂಟ್ರಿ

    English summary
    Our most loved Bollywood industry completes 100 years of successful journey. The Indian film industry has always produced male-oriented films barring a few exceptions. Actresses like Nargis, Smita Patil, Shabana Azmi, Madhuri Dixit, Vidya Balan have changed perceptions and ruled cinema in their own way.
    Monday, May 13, 2013, 12:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X