»   » ಬಾಲಿವುಡ್ ಗೆ ಅಮೀರ್ ಖಾನ್ ಮಗಳ ಎಂಟ್ರಿ?

ಬಾಲಿವುಡ್ ಗೆ ಅಮೀರ್ ಖಾನ್ ಮಗಳ ಎಂಟ್ರಿ?

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಹೊಸ ವಿಷಯವೇನು ಅಲ್ಲ. ಆದ್ರೆ ಈಗ ಅಮೀರ್ ಖಾನ್ ಮಗಳು ಬಾಲಿವುಡ್ ಗೆ ಅಂಗಳಕ್ಕೆ ಕಾಲಿಡುತ್ತಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ.
.['ದಂಗಲ್' ನಂತರ ಹೊಸ ಸಾಹಸಕ್ಕೆ ರೆಡಿಯಾದ ಅಮೀರ್ ಖಾನ್]

ಇತ್ತೀಚೆಗೆ ಶಾರುಖ್ ಖಾನ್ ಮಗಳು, ಸುಹಾನಾ ಖಾನ್ ಅಭಿನಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ಅಮೀರ್ ಖಾನ್ ಮಗಳು ಚಿತ್ರರಂಗಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿ ಒಂದು ರೀತಿಯ ಸೆನ್ಸೇಷನ್ ಹುಟ್ಟುಹಾಕಿದೆ.

ಬಾಲಿವುಡ್ ಗೆ ಇರಾ ಎಂಟ್ರಿ

ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮಗಳು ಇರಾ ಅವರು ಸದ್ಯದಲ್ಲೇ ಬೆಳ್ಳಿಪರದೆಗೆ ಕಾಲಿಡುತ್ತಿದ್ದಾರೆ. ಆದರೆ ಅವರು ಸ್ಟಾರ್ ಆಗುವುದಿಲ್ಲ.
['ಅಮೀರ್ ಖಾನ್ ಭಾರತದ ಮೋಸ್ಟ್ ಇಂಟೆಲಿಜೆಂಟ್ ಆಕ್ಟರ್': ಹೇಳಿದ್ದು ಯಾರು?]

ಇರಾ ಬಣ್ಣ ಹಚ್ಚೋದಿಲ್ಲವಂತೆ

ಅಮೀರ್ ಖಾನ್ ಮಗಳು ಸ್ಟಾರ್ ಆಗುವ ಬದಲು, ಪರದೆ ಹಿಂದಿನ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮನಸ್ಸು ಮಾಡಿದ್ದಾರೆ.

ಕ್ರಿಯೇಟಿವ್ ಫೀಲ್ಡ್ ಗೆ ಇರಾ ಎಂಟ್ರಿ

ಅಂದಹಾಗೆ ಅಮೀರ್ ಖಾನ್ ಮಗಳು ಇರಾ ಚಿಕ್ಕಂದಿನಿಂದಲೂ ಸಂಗೀತ ಪ್ರೇಮಿ. ಹೀಗಾಗಿ, ಕ್ರಿಯೇಟಿವ್ ಫೀಲ್ಡ್ ಮ್ಯೂಸಿಕ್ ನಲ್ಲಿ ಟ್ರ್ಯಾಕ್ಸ್ ಕಂಪೋಸಿಂಗ್, ರೆಕಾರ್ಡಿಂಗ್ ಮತ್ತು ಪ್ರೊಡಕ್ಷನ್ ವಿಭಾಗದಲ್ಲಿ ತಮ್ಮ ಪ್ರತಿಭೆಯನ್ನು ಹೊರಹಾಕಲಿದ್ದಾರೆ.

ರಾಮ್ ಸಂಪತ್ ಗೆ ಇರಾ ಅಸಿಸ್ಟಂಟ್

ಇರಾ, ಬಾಲಿವುಡ್ ಸಂಗೀತ ನಿರ್ದೇಶಕ ರಾಮ್ ಸಂಪತ್ ಅವರಿಗೆ ಅಸಿಸ್ಟಂಟ್ ಆಗಿ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ.

ಇರಾ ಬಾಲಿವುಡ್ ಎಂಟ್ರಿ ಬಗ್ಗೆ ಅಮೀರ್ ಹೇಳಿದ್ದೇನು?

ಅಂದಹಾಗೆ ತಮ್ಮ ಮಗಳು ಇರಾ ಸಿನಿಮಾ ರಂಗಕ್ಕೆ ಕಾಲಿಡುವ ಸುದ್ದಿ ಬಗ್ಗೆ ಅಮೀರ್ ಖಾನ್ ಇನ್ನೂ ಕನ್ ಫರ್ಮ್ ಮಾಡಿಲ್ಲ.

English summary
Aamir Khan's daughter Ira might enter Bollywood as an assistant to music director Ram Sampath. Ira is keen in learning the aspects of music production.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada