»   » ಇರ್ಫಾನ್ ಖಾನ್ ಸಾಹೇಬ್ರೇ ಯಾಕ್ಬೇಕಿತ್ತು 'ಈ' ಉಸಾಬರಿ

ಇರ್ಫಾನ್ ಖಾನ್ ಸಾಹೇಬ್ರೇ ಯಾಕ್ಬೇಕಿತ್ತು 'ಈ' ಉಸಾಬರಿ

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಚಿತ್ರರಂಗದಲ್ಲಿ ಒಬ್ಬರಲ್ಲಾ, ಒಬ್ಬರು ವಿವಾದಾತ್ಮಕ ಹೇಳಿಕೆ ಕೊಟ್ಟು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಸುದ್ದಿಯಾಗುತ್ತಲೇ ಇರುತ್ತಾರೆ. ಮೊನ್ನೆ ಮೊನ್ನೆ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಸುದ್ದಿಯಾದ ಬೆನ್ನಲ್ಲೇ ಇದೀಗ ಇರ್ಫಾನ್ ಖಾನ್ ಅವರು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

'ಕುರ್ಬಾನಿ' ಎಂಬ ಹೆಸರಿನಲ್ಲಿ ಆಡು ಅಥವಾ ಮೇಕೆಗಳನ್ನು ಬಲಿ ಕೊಡೋದು ಸರಿಯಲ್ಲ, 'ಕುರ್ಬಾನಿ'ಯ ಅರ್ಥ ಬಲಿದಾನ. ಅದು ದುಡ್ಡು ಕೊಟ್ಟು ಖರೀದಿಸಿ ಬಲಿದಾನ ಮಾಡೋದು ಅಲ್ಲ ಎಂದು ಬಾಲಿವುಡ್ ನ ಖ್ಯಾತ ನಟ ಇರ್ಫಾನ್ ಖಾನ್ ಅವರು ವಿವಾದಾತ್ಮಕ ಹೇಳಿಕೆ ನೀಡಿ ಬಿಟೌನ್ ನಲ್ಲಿ ಸದ್ದು ಮಾಡುತ್ತಿದ್ದಾರೆ.['ರೇಪ್ ಆದ ಮಹಿಳೆ ಪರಿಸ್ಥಿತಿ ನನ್ನದಾಗಿತ್ತು': ಸಲ್ಲು ವಿವಾದಾತ್ಮಕ ಹೇಳಿಕೆ]

Bollywood Actor Irrfan Khan questions Ramzan Fast

ಇಸ್ಲಾಂ ಧರ್ಮದಲ್ಲಿರುವ ಬಲಿದಾನ ಮತ್ತು ಉಪವಾಸ ಕ್ರಮವನ್ನು ಪ್ರಶ್ನಿಸುವ ರೀತಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ನಟ ಇರ್ಫಾನ್ ಖಾನ್ ಅವರು ಮುಸ್ಲಿಂ ಬಾಂಧವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇರ್ಫಾನ್ ಅವರು ತಮ್ಮ ಅಭಿನಯದ 'ಮದಾರಿ' ಚಿತ್ರದ ಪ್ರಚಾರಕ್ಕೆ ಜೈಪುರ ಕ್ಕೆ ಹೋಗಿದ್ದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "ಕುರ್ಬಾನಿಯ ಅರ್ಥ ಬಲಿದಾನ, ಅದು ದುಡ್ಡು ಕೊಟ್ಟು ಖರೀದಿಸಿ ಬಲಿದಾನ ನೀಡಲ್ಪಡುವ ಕುರಿ ಅಥವಾ ಮೇಕೆಗೆ ಸಂಬಂಧಿಸಿದ ವಿಷಯ ಅಲ್ಲ".['ಮದಾರಿ'-'ಕಬಾಲಿ' ಪೋಸ್ಟರ್ ಸೇಮ್: ಕಳ್ಳರು ಯಾರು?]

Bollywood Actor Irrfan Khan questions Ramzan Fast

"ನಾವು ಯಾವುದನ್ನೋ ತ್ಯಜಿಸುತ್ತೇವೆಯೋ ಅದರೊಂದಿಗೆ ನಮಗೆ ನೇರವಾದ ಭಾವನಾತ್ಮಕ ಸಂಬಂಧ ಇರಬೇಕು. ಬಲಿದಾನದ ಹೆಸರಿನಲ್ಲಿ ಮೂಕಪ್ರಾಣಿಗಳಾದ ಆಡು ಅಥವಾ ಕುರಿಯನ್ನು ಕೊಲ್ಲುವುದು ಬರೀ ಪ್ರಾಣಿ ಹಿಂಸೆ" ಎಂದು ಇರ್ಫಾನ್ ಖಾನ್ ಅವರು ತಮಗೆ ತೋಚಿದಂತೆ ಮಾತನಾಡಿ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

"ನಾವು ಮುಸ್ಲಿಂ ಬಾಂಧವರು 'ಮೊಹರಂ'ನ್ನು ಅಣಕು ಮಾಡುತ್ತಿದ್ದೇವೆ. ನಿಜವಾಗಿಯೂ 'ಮೊಹರಂ' ಸಂದರ್ಭದಲ್ಲಿ ಮಾಡಬೇಕಿರುವುದು ಶೋಕಾಚರಣೆ. ಆದರೆ ನಾವು ಮಾಡುತ್ತಿರುವುದು ಧಾರ್ಮಿಕ ಮೆರವಣಿಗೆ" ಎಂದು ಹೇಳುವ ಮೂಲಕ ಇರ್ಫಾನ್ ಖಾನ್ ವಿವಾದ ಸೃಷ್ಟಿಸಿಕೊಂಡಿದ್ದಾರೆ.

Bollywood Actor Irrfan Khan questions Ramzan Fast

"ಮಾತ್ರವಲ್ಲದೇ ಇಂದಿನ ದಿನಗಳಲ್ಲಿ ನಾವು ಧಾರ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಸ್ತುತತೆಯನ್ನೇ ಕಳೆದುಕೊಂಡಿದ್ದೇವೆ. ಮತ್ತು ಧಾರ್ಮಿಕ ರೀತಿ, ರಿವಾಜು, ಕಟ್ಟುಕಟ್ಟಳೆ ಮುಂತಾದವುಗಳ ಮೂಲ ಅರ್ಥವನ್ನೇ ಮರೆತು ಬಿಟ್ಟಿದ್ದೇವೆ". ಎಂದು ಇರ್ಫಾನ್ ಖಾನ್ ಹೇಳಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮುಸ್ಲಿಂ ಬಾಂಧವರ ಉಪವಾಸ ವೃತದ ಬಗ್ಗೆ ಕೂಡ ಕಾಮೆಂಟ್ ಮಾಡಿದ ಇರ್ಫಾನ್ ಖಾನ್ ಅವರು 'ರಂಜಾನ್ ಸಂದರ್ಭದಲ್ಲಿ ಉಪವಾಸ ಮಾಡುವುದಕ್ಕಿಂತ ಆತ್ಮಾವಲೋಕನ ಮಾಡುವುದು ಸೂಕ್ತ' ಎಂದು ಹೇಳಿದ್ದಾರೆ.

Bollywood Actor Irrfan Khan questions Ramzan Fast

ಒಟ್ನಲ್ಲಿ ಸಿನಿಮಾ ಪ್ರಚಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಇಲ್ಲ-ಸಲ್ಲದ ವಿಚಾರಗಳ ಬಗ್ಗೆ ಮಾತಾಡಿರುವ ಇರ್ಫಾನ್ ಖಾನ್ ಅವರು ಮುಸ್ಲಿಂ ಬಾಂಧವರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಇರ್ಫಾನ್ ಖಾನ್ ಅವರೇ ಬೇಕಿತ್ತಾ ನಿಮಗೆ ಈ ಉಸಾಬರಿ ಅಂತಿದ್ದಾರೆ ಬಿಟೌನ್ ಮಂದಿ

English summary
Bollywood Actor Irrfan Khan has courted controversy by questioning the practice of sacrifice and fasting in Islam. Talking on the sidelines of the promotion of his upcoming movie 'Madaari' in Jaipur.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada