»   » ರಾಜೇಶ್ ಖನ್ನಾ ಆರೋಗ್ಯದಲ್ಲಿ ಚೇತರಿಕೆ; ಡಿಂಪಲ್

ರಾಜೇಶ್ ಖನ್ನಾ ಆರೋಗ್ಯದಲ್ಲಿ ಚೇತರಿಕೆ; ಡಿಂಪಲ್

Posted By:
Subscribe to Filmibeat Kannada
ಹಿಂದೊಂದು ಕಾಲದ ಬಾಲಿವುಡ್ ಸೂಪರ್ ಸ್ಟಾರ್ ರಾಜೇಶ್ ಖನ್ನಾ, ಮೊನ್ನೆ ಶನಿವಾರ (14 ಜುಲೈ 2012) ದಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ಅನಾರೋಗ್ಯದ ನಿಮಿತ್ತ ದಾಖಲಾಗಿದ್ದರು. ಈಗವರ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆಯಾಗಿದೆ ಎಂದು ಅವರ ಪತ್ನಿ, ಒಂದು ಕಾಲದ ನಟಿ ಡಿಂಪಲ್ ಕಪಾಡಿಯಾ ತಿಳಿಸಿದ್ದಾರೆ.

"ಈಗ ಅವರ ಆರೋಗ್ಯದಲ್ಲಿ ಹೆಚ್ಚಿನ ಏರುಪೇರಿಲ್ಲ. ಸಾಕಷ್ಟು ಸುಧಾರಣೆಯಾಗಿದೆ. ಅವರ ದೇಹ ಚಿಕಿತ್ಸೆಗೆ ವೇಗವಾಗಿ ಸ್ಪಂದಿಸುತ್ತಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಲಿದ್ದೇವೆ" ಎಂದು ರಾಜೇಶ್ ಖನ್ನಾ ಪತ್ನಿ ಡಿಂಪಲ್ ಕಪಾಡಿಯಾ ಮಾದ್ಯಮಕ್ಕೆ ತಿಳಿಸಿದ್ದಾರೆ. ಹೀಗೆ ಅಸಂಖ್ಯಾತ ಅಭಿಮಾನಿಗಳ ಹರಕೆ, ಹಾರೈಕೆ ಫಲಿಸಿದಂತಾಗಿದೆ.

ಕಳೆದ ಏಪ್ರಿಲ್ ನಲ್ಲಿ ಮೊದಲ ಬಾರಿಗೆ ಅವರು ಆರೋಗ್ಯದಲ್ಲಿ ಕಂಡ ಸಮಸ್ಯೆಯಿಂದ ಆಸ್ಪತ್ರೆ ಕಡೆ ಹೆಜ್ಜೆ ಹಾಕಿದ್ದರು. ಟಿವಿ ಜಾಹೀರಾತೊಂದಕ್ಕೆ ರೂಪದರ್ಶಿಯಾಗಿದ್ದ ರಾಜೇಶ್ ಖನ್ನಾ, ಅನಾರೋಗ್ಯದಿಂದ ಕೆಲವು ದಿನಗಳು ಆಸ್ಪತ್ರೆ ವಾಸಿ ಆಗಿದ್ದರು. ನಂತರ ಸುಧಾರಿಸಿಕೊಂಡಿದ್ದ ಈ ನಟ, ತಮ್ಮ ಬಂಗಲೆಯ ಬಾಲ್ಕನಿಯಿಂದಲೇ "ನನಗೇನೂ ಈಗ ತೊಂದರೆಯಿಲ್ಲ, ಆರೋಗ್ಯವಾಗಿದ್ದೇನೆ" ಎಂದು ಮಾಧ್ಯಮದ ಮಂದಿ ಕಡೆ ಕೈಬೀಸಿ ಹೇಳಿದ್ದರು.

ತಮ್ಮ ಅಮೋಘ ನಟನೆ ನಟನೆ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಈ ನಟ 'ಆರಾಧನಾ' ಚಿತ್ರದ ನಟನೆಯಿಂದ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಏಪ್ರಿಲ್ ನಿಂದ ಆಗಾಗ ಆಸ್ಪತ್ರೆಗೆ ದಾಖಲಾಗುತ್ತಿದ್ದ ಇವರು ಆರೋಗ್ಯ ಸಮಸ್ಯೆಯಿಂದ ಬಳಲತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಎನ್ನುವಂತಾಗಿದೆ.

ಈಗಂತೂ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸ್ವತಃ ಅವರ ಪತ್ನಿಯಿಂದಲೇ ವ್ಯಕ್ತವಾಗಿದ್ದು ಎಲ್ಲರಿಗೂ ಸಂತೋಷದ ವಿಷಯ. ನಟ ರಾಜೇಶ್ ಖನ್ನಾ ನೂರಾರು ವರ್ಷ ಆರೋಗ್ಯವಾಗಿ ಬದುಕಿ ಬಾಳಲಿ ಎಂಬುದು ಎಲ್ಲರ ಹೃದಯಾಂತರಾಳದ ಹಾರೈಕೆ. (ಏಜೆನ್ಸೀಸ್)

English summary
Superstar Rajesh Khanna health condition is recovering fast and he will be discharged from hospital after three days, says estranged wife Dimple Kapadia.
 
Please Wait while comments are loading...