»   » ರಂಜಾನ್ ಮುನ್ನ ಸಲ್ಮಾನ್ ಖಾನ್ ಮಹತ್ವದ ನಿರ್ಧಾರ

ರಂಜಾನ್ ಮುನ್ನ ಸಲ್ಮಾನ್ ಖಾನ್ ಮಹತ್ವದ ನಿರ್ಧಾರ

Posted By:
Subscribe to Filmibeat Kannada

ಕಿಕ್ ಚಿತ್ರ ಬಾಕ್ಸಾಫೀಸ್ ನಲ್ಲಿ ಫುಲ್ ಕಿಕ್ ಕೊಡುವ ಗಳಿಕೆ ಕಾಣಿತ್ತಿದ್ದಂತೆಯೇ ಚಿತ್ರದ ನಾಯಕ ಮತ್ತು ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಮಹತ್ವದ ಘೋಷಣೆಯೊಂದನ್ನು ಹೊರಹಾಕಿದ್ದಾರೆ.

ಸಲ್ಮಾನ್ ಸಿನಿಮಾ ವೃತ್ತಿ ಜೀವನ ಆರಂಭವಾದ ನಂತರ ಸಲ್ಲು ಮಿಯಾ ಹೆಸರು ಯಾವುದಾದರೂ ಹುಡುಗಿಯರ ಜೊತೆ ತುಳುಕು ಹಾಕುತ್ತಲ್ಲೇ ಇದ್ದವು. ಇದಕ್ಕೆ ಪೂರಕ ಎನ್ನುವಂತಹ ಸಲ್ಲು ಹೇಳಿಕೆಗಳು ಸುದ್ದಿಗೆ ಮತ್ತಷ್ಟು ರಂಗು ನೀಡುತ್ತಿದ್ದವು.

ಈಗ ಈ ಎಲ್ಲಾ ಸುದ್ದಿಗಳಿಗೆ 49 ವರ್ಷದ ಸಲ್ಮಾನ್ ಖಾನ್ ಪೂರ್ಣವಿರಾಮ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ. ಈದ್ ಹಬ್ಬದ ಮೂರು ದಿನದ ಮುನ್ನ 'ನಾನು ಜೀವನದಲ್ಲಿ ಮದುವೆ ಯಾಗುವುದಿಲ್ಲ' ಎಂದು ಹೇಳಿಕೆ ನೀಡಿ ತನ್ನ ಹಿಂದೆ ಮುಂದೆ ಸುತ್ತುತ್ತಿದ್ದ ಸುದ್ದಿಗಳಿಗೆ ತೇಪೆ ಹಾಕುವ ಕೆಲಸಕ್ಕೆ ಸಲ್ಮಾನ್ ಮುಂದಾಗಿದ್ದಾರೆ.

ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಲ್ಮಾನ್, ನನಗೆ ರಾಜಕೀಯದ ಬಗ್ಗೆ ಆಸಕ್ತಿಯಿಲ್ಲ, ಚಿತ್ರ ನಿರ್ದೇಶನಕ್ಕೆ ಕೈಹಾಕುವುದಿಲ್ಲ ಆದರೆ ಕಲಾವಿದನಾಗಿ ಮುಂದುವರಿಯುತ್ತೇನೆಂದು ಹೇಳಿದ್ದಾರೆ.

ಇದೇ ದೂರದರ್ಶನದ 'ಏಕ್ ಮುಲಾಕಾತ್' ಶೋನಲ್ಲಿ ಅಂದು ದೀಪಿಕಾ ಪಡುಕೋಣೆ, ಸಲ್ಮಾನ್ ಬಗ್ಗೆ ಮಾತನಾಡಿದ್ದರು. ಮುಂದೆ ಓದಿ..

ದೂರದರ್ಶನದ ಶೋನಲ್ಲಿ ದೀಪಿಕಾ

2010ರಲ್ಲಿ ನಡೆದಿದ್ದ ಶೋನಲ್ಲಿ ದೀಪಿಕಾ ಪಡುಕೋಣೆ, ಸಲ್ಮಾನ್ ನಲ್ಲಿ ಉತ್ತಮ ಗುಣಗಳಿವೆ, ಇತರರಿಗೆ ಸ್ಪೂರ್ಥಿಯಾಗುವಂತಹ ಬಹಳಷ್ಟು ಗುಣಗಳಿವೆ. ಆದರೂ ಸಲ್ಮಾನ್ ಒಬ್ಬ 'ಲಫಂಗ' ಎಂದು ಡಿಡಿ ಶೋನಲ್ಲಿ ಹೇಳಿದ್ದರು.

ವಿಭಿನ್ನವಾಗಿ ಗುರುತಿಸಿಕೊಂಡಿರುವ ಸಲ್ಮಾನ್

ಮದ್ಯ, ಮಾಲಿನಿಗಳ ವಿಚಾರದಲ್ಲಿ ಗಂಭೀರತೆ ಕಳೆದುಕೊಂಡಿದ್ದರೂ ಸಲ್ಮಾನ್, ಮಾನವೀಯತೆಯ ವಿಚಾರ ಬಂದಾಗ ಬಲಗೈ ದಾನ ಎಡಗೈಗೆ ಗೊತ್ತಾಗದಂತೆ ತೊಡಗಿಸಿಕೊಂಡವರು.

ಅಪರೂಪಕ್ಕೆ ಎನ್ನುವಂತೆ ಮನಸ್ಸು ಬಿಚ್ಚಿ ಮಾತನಾಡಿದ ಸಲ್ಲು

ದೂರದರ್ಶನದ ವಾಹಿನಿಯಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ ಸಲ್ಲು, ನಾನು ನನ್ನ ಮುಂದಿನ ಜೀವನವನ್ನು ಮಕ್ಕಳ ಜೊತೆ ಬೆರೆಯಲು ಇಷ್ಟ ಪಡುತ್ತೇನೆ. ನನಗೆ ಅದು ಜೀವನದಲ್ಲಿ ಅತ್ಯಂತ ಖುಷಿ ಕೊಡುವ ಸಂಗತಿ ಎಂದಿದ್ದಾರೆ.

ಸಲ್ಮಾನ್ ಟ್ವೀಟ್ ಅಕೌಂಟ್

@beingSalmanKhan ಎಂದು ಟ್ವೀಟ್ ಅಕೌಂಟ್ ಇಟ್ಟುಕೊಂಡಿದ್ದೇನೆ. ನನ್ನ ಮುಂದಿನ ಜೀವನ ಏನಿದ್ದರೂ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಳ್ಳಲು ಎಂದು ಸಲ್ಮಾನ್ ದೂರದರ್ಶನದ ಸಂದರ್ಶನದಲ್ಲಿ ಹೇಳಿದ್ದಾರೆ.

ಗಣೇಶ, ರಾಖಿ ಹಬ್ಬ ಆಚರಿಸುವ ಸಲ್ಮಾನ್

ಗಣೇಶ ಮತ್ತು ರಾಖಿ ಹಬ್ಬವನ್ನು ಮನೆಯಲ್ಲಿ ಸಡಗರದಿಂದ ಆಚರಿಸುವ ಸಲ್ಮಾನ್ ಖಾನ್, ತನ್ನ ನಡುವಳಿಕೆಗಳಿಂದ ತೀವ್ರವಾದಿಗಳ ಕಣ್ಣು ಕೆಂಪು ಮಾಡಿದ್ದೇ ಹೆಚ್ಚು. ಅದಕ್ಕೆಲ್ಲಾ ಕ್ಯಾರೇ ಎನ್ನದ ಸಲ್ಲು ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.

English summary
Bollywood actor Salman Khan announces in a Doordarshan interview he will never marry in life.
Please Wait while comments are loading...