Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾಂಟ್ರವರ್ಸಿ ಕ್ವೀನ್ ಕಂಗನಾ ಮನೆ ಸೇರಿದ ಕಾರು ಬಲು ದುಬಾರಿ?
ಬಾಲಿವುಡ್ ನಟಿ ಕಾಂಟ್ರವರ್ಸಿ ಕ್ಷೀನ್ ಎಂದೇ ಫೇಮಸ್ ಆಗಿರುವ ಕಂಗನಾ ರನೌತ್ ದುಬಾರಿ ಬೆಲೆಯ ಹೊಸ ಕಾರೊಂದನ್ನು ಕೊಂಡುಕೊಂಡಿದ್ದಾರೆ. 3.6 ಕೋಟಿ ರೂಪಾಯಿ ಬೆಲೆಯ ಮರ್ಸಿಡನ್ ಮೇಬ್ಯಾಕ್ ಕಾರನ್ನು ನಟಿ ಕೊಂಡುಕೊಂಡಿದ್ದಾರೆ.
ನಿನ್ನೆ (ಮೇ 19) ಕಂಗನಾ ಅಭಿನಯದ 'ಧಾಕಡ್' ಸಿನಿಮಾದ ಪ್ರಥಮ ಪ್ರದರ್ಶನವನ್ನು ಆಯೋಜಿಸಿದ್ದರು. ಈ ವೇಳೆ ತಮ್ಮ ಹೊಸ ಕಾರನ್ನು ಅನಾವರಣಗೊಳಿಸಿದ್ದಾರೆ. ಕಂಗನಾ ಹಾಗೂ ತಮ್ಮ ಕುಟುಂಬಸ್ಥರೊಂದಿಗೆ ಹೊಸ ಮರ್ಸಿಡನ್ ಮೇಬ್ಯಾಕ್ ಕಾರಿನೊಂದಿಗೆ ಪೋಟೊಗೆ ಪೋಸ್ ಕೊಟ್ಟಿದ್ದಾರೆ.
ಜ್ಞಾನವ್ಯಾಪಿ
ಮಸೀದಿ
ಪ್ರಕರಣದ
ಬಗ್ಗೆ
ನಟಿ
ಕಂಗನಾ
ರನೌತ್
ಹೇಳಿದ್ದೇನು?
ಕಂಗನಾ ಕುಟುಂಬಸ್ಥರಾದ ಸಹೋದರ ರಂಗೋಲಿ ಚಂದೇಲ್ ಮತ್ತು ಅವರ ಪತಿ ಅಜಯ್ ಹಾಗೂ ಪುತ್ರ ಪೃಥ್ವಿರಾಜ್ ಜೊತೆಗೆ ಸಹೋದರ ಅಕ್ಷತ್ ರನೌತ್ ಮತ್ತು ಸೊಸೆ ರಿತು ಸಾಂಗ್ವಾನ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಂದು ಮೇ (20) ಕಂಗನಾ ಅಭಿನಯದ 'ಧಾಕಡ್' ಸಿನಿಮಾ ಅದ್ಧೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗಿದೆ. ನಟಿ ಕಂಗನಾ ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪೈಸ್ ಏಜೆಂಟ್ ಅಗ್ನಿ ಅವತಾರದಲ್ಲಿ ಕಂಗನಾ ಮಿಂಚಿದ್ದು, ಅರ್ಜುನ್ ರಾಂಪಲ್ ಕೂಡ ಸಾಥ್ ನೀಡಿದ್ದಾರೆ. ಸದ್ಯ ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
'ಧಾಕಡ್'
ರಿಲೀಸ್ಗೂ
ಮುನ್ನವೇ
ತಿಮ್ಮಪ್ಪನ
ದರ್ಶನ
ಪಡೆದ
ಕಂಗನಾ
ರನೌತ್
ನಟಿ ಕಂಗನಾ ದುಬಾರಿ ಕಾರು ತೆಗೆದುಕೊಳ್ಳುವದರ ಜೊತೆಗೆ ಸಿನಿಮಾ ಕೂಡ ಸಕ್ಸಸ್ ಆಗಿರುವುದಕ್ಕೆ ಡಬಲ್ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗಷ್ಟೇ ಸಿನಿಮಾ ಸಕಸ್ಸ್ ಕಾಣಲಿ ಎಂದು ನಟಿ ಕಂಗನಾ ಆಂಧ್ರಪ್ರದೇಶದ ಪ್ರಸಿದ್ದ ದೇಗುಲ ತಿರುಪತಿ ತಿಮ್ಮನ ಸನ್ನಿಧಿಗೆ ಹೋಗಿ ಆರ್ಶಿವಾದ ಪಡೆದುಕೊಂಡಿದ್ದರು. ಆದಾದ ಬಳಿಕ ಕಾಶಿ ವಿಶ್ವನಾಥ ದೇಗುಲಕ್ಕೂ ತೆರಳಿ ವಿಶೇಷ ಪೂಜೆ ಸಲ್ಲಿಸಿ 'ಧಾಕಡ್' ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಕಂಗನಾ ರನೌತ್‌ಗೆ 'ಧಾಕಡ್' ಚಿತ್ರರಂಗ ಸಾಥ್ ನೀಡಿತ್ತು.

ಸದ್ಯ ಕಂಗನಾ ಅಭಿನಯದ 'ಧಾಕಡ್' ಸಿನಿಮಾ ಮೊದಲ ದಿನ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈ ಸಿನಿಮಾ ಮೂಲಕವಾದರೂ ಬಾಲಿವುಡ್ ಬಾಕ್ಸಾಫೀಸ್ ಕಲೆಕ್ಷನ್ ಆಗುತ್ತಾ ಅಂತ ಕಾದು ನೋಡಬೇಕಿದೆ.