For Quick Alerts
  ALLOW NOTIFICATIONS  
  For Daily Alerts

  ಬಿಕಿನಿ ತೊಟ್ಟಿರುವ ಮಲೈಕಾಗೆ ಇನ್ಸ್ಟಾಗ್ರಾಮ್ ನಲ್ಲಿ ಶೇಮ್ ಶೇಮ್.!

  By Harshitha
  |
  ಈ ವಯಸ್ಸಲ್ಲಿ ಬಿಕಿನಿ ತೊಡೋದು ಬೇಕಿತ್ತಾ ಈ ನಟಿಗೆ..!!! | Filmibeat kannada

  'ಮುನ್ನಿ ಬದ್ನಾಮ್...', 'ಕಾಲ್ ಧಮಾಲ್..', 'ಚೈಯ್ಯ ಚೈಯ್ಯ..' ಸೇರಿದಂತೆ ಬಾಲಿವುಡ್ ನ ಹಲವು ಹಿಟ್ ನಂಬರ್ ಗಳಲ್ಲಿ ಝಬರ್ದಸ್ತ್ ಡ್ಯಾನ್ಸ್ ಮಾಡಿರುವ ಚೆಲುವೆ ಮಲೈಕಾ ಅರೋರ.

  ಸಲ್ಮಾನ್ ಸಹೋದರ ಅರ್ಬಾಝ್ ಖಾನ್ ರಿಂದ ವಿಚ್ಛೇದನ ಪಡೆದ್ಮೇಲೆ, ಬೇಡದ ವಿಚಾರಕ್ಕೆ ಮಲೈಕಾ ಅರೋರ ಹೆಚ್ಚು ಸುದ್ದಿ ಆಗುತ್ತಿದ್ದಾರೆ. ನಟ ಅರ್ಜುನ್ ಕಪೂರ್ ಜೊತೆಗಿನ ಬಾಂಧವ್ಯದಿಂದಾಗಿ ಗಾಸಿಪ್ ಕಾಲಂನಲ್ಲಿ ಸದ್ದು ಮಾಡಿದ್ದ ಮಲೈಕಾ ಅರೋರ ಇದೀಗ ಕೆಲ ಸಂಪ್ರದಾಯಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ಶುಕ್ರವಾರ ದಿನವಾದ ಇಂದು ಹಳೇ ನೆನಪುಗಳಿಗೆ ಜಾರಿದ ನಟಿ ಮಲೈಕಾ, ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಕಡಲ ಕಿನಾರೆಯಲ್ಲಿ ಬಿಕಿನಿ ತೊಟ್ಟು ನಲಿದಾಡಿದ ಹಳೆಯ ಚಿತ್ರಗಳನ್ನ ಶೇರ್ ಮಾಡಿದರು.

  ಒಂದು ಮಗುವಿನ ತಾಯಿಯಾಗಿ ಹೀಗಾ ಬಟ್ಟೆ ಹಾಕೊಳ್ಳೋದು.? ಟ್ರೋಲ್ ಆದ ಮಲೈಕಾ.!ಒಂದು ಮಗುವಿನ ತಾಯಿಯಾಗಿ ಹೀಗಾ ಬಟ್ಟೆ ಹಾಕೊಳ್ಳೋದು.? ಟ್ರೋಲ್ ಆದ ಮಲೈಕಾ.!

  Summer lovin...take me backkk #fridayflashback #sun#sea#surf

  A post shared by Malaika Arora Khan (@malaikaarorakhanofficial) on

  ಬಿಕಿನಿ ತೊಟ್ಟಿರುವ ಮಲೈಕಾ ರವರ ಫೋಟೋಗಳು ಇದೀಗ ಹಲವರ ಕೋಪಕ್ಕೆ ಕಾರಣವಾಗಿದೆ. ''ಒಂದು ಮಗುವಿನ ತಾಯಿಯಾಗಿ ನಟಿ ಮಲೈಕಾ ಈ ರೀತಿ ಬಟ್ಟೆ ತೊಡುವುದು ಸರಿಯಲ್ಲ. ಮಲೈಕಾ ಈ ರೀತಿ ಇರುವುದಕ್ಕೆ ವಿಚ್ಛೇದನ ಸಿಕ್ಕಿರುವುದು. ಆಕೆಗೆ ಸ್ವಲ್ಪ ಕೂಡ ನಾಚಿಕೆ ಇಲ್ಲ'' ಅಂತೆಲ್ಲ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

  ನಟಿ ಮಲೈಕಾ ಅರೋರ ಉಡುಗೆ ವಿಚಾರವಾಗಿ ಇನ್ಸ್ಟಾಗ್ರಾಮ್ ನಲ್ಲಿ ಆಕ್ಷೇಪಾರ್ಹ ಕಾಮೆಂಟ್ ಗಳೇ ಹೆಚ್ಚಾಗಿವೆ. ಆದರೂ ಅದರ ಬಗ್ಗೆ ಮಲೈಕಾ ಕೇರ್ ಮಾಡಿಲ್ಲ. ಯಾರಿಗೂ ಉತ್ತರ ಕೊಡುವ ಗೋಜಿಗೂ ಹೋಗಿಲ್ಲ. ಉಡುಗೆ-ತೊಡುಗೆ ವಿಚಾರದಲ್ಲಿ ನಟಿ ಮಲೈಕಾ ಟ್ರೋಲ್ ಆಗಿರುವುದು ಇದೇ ಮೊದಲೇನಲ್ಲ.

  English summary
  Bollywood Actress Malaika Arora gets trolled for wearing Bikini.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X