For Quick Alerts
  ALLOW NOTIFICATIONS  
  For Daily Alerts

  ಕೇಂದ್ರ ಸರ್ಕಾರದ 'ಕೌಶಲ ಭಾರತ'ಕ್ಕೆ ಪ್ರಿಯಾಂಕ ರಾಯಭಾರಿ

  By Suneel
  |

  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಶೀಘ್ರದಲ್ಲೇ 'ಕೌಶಲ ಭಾರತ' ಕಾರ್ಯಕ್ರಮದ ರಾಯಭಾರಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

  'ಕೌಶಲ ಭಾರತ' ಕಾರ್ಯಕ್ರಮ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ರವರು ಈ ಯೋಜನೆಗೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದ ಪ್ರಚಾರ ಕಾರ್ಯ ಸದ್ಯದಲ್ಲೇ ಆರಂಭಗೊಳ್ಳಲಿದ್ದು, ಪ್ರಿಯಾಂಕ ಚೋಪ್ರಾ ಪ್ರಚಾರ ಕಾರ್ಯದ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು 'ರಾಷ್ಟ್ರೀಯ ಕೌಶಲ ಅಭಿವೃದ್ದಿ ನಿಗಮ'ದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮನೀಶ್ ಕುಮಾರ್ ಈ ವಿಷಯ ತಿಳಿಸಿದ್ದಾರೆ.

  ಪ್ರಿಯಾಂಕಳಿಂದ ಮತ್ತೆ ಕಾಲು ಪ್ರದರ್ಶನ! ಫೋಟೋ ವೈರಲ್

  ಕೇಂದ್ರ ಸರ್ಕಾರದ 'ಕೌಶಲ ಭಾರತ' ಕಾರ್ಯಕ್ರಮದ ಅಡಿಯಲ್ಲಿ 2022 ರ ವೇಳೆಗೆ ದೇಶದ 40 ಕೋಟಿ ಯುವಕರಿಗೆ ಕೌಶಲ ತರಬೇತಿ ನೀಡುವ ಮುಖ್ಯ ಗುರಿ ಹೊಂದಲಾಗಿದೆ. ಅಂದಹಾಗೆ ಪ್ರಿಯಾಂಕ ಚೋಪ್ರಾ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರ್ಲಿನ್ ನಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಪಿಗ್ಗಿ ಧರಿಸಿದ್ದ ಉಡುಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾಗಿ ವಿವಾದಕ್ಕೀಡಾಗಿತ್ತು.

  ಸದ್ಯದಲ್ಲಿ ಪಿಗ್ಗಿ ಕ್ಯಾಲಿಪೋರ್ನಿಯಾದ ಮಲಿಬು ಪ್ರವಾಸದಲ್ಲಿದ್ದಾರೆ. ಹಾಲಿವುಡ್ ನಲ್ಲಿ ಎರಡನೇ ಚಿತ್ರಕ್ಕೆ ಸಜ್ಜಾಗಿರುವ ಪಿಗ್ಗಿ 'ಎ ಕಿಡ್ ಲೈಕ್ ಜೇಕ್' ಎಂಬ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ.

  English summary
  Bollywood Actress Priyanka Chopra will soon be seen endorsing government's flagship Skill India campaign, with the National Skill Development Corporation roping in the Bollywood celebrity as an ambassador for the initiative.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X