For Quick Alerts
  ALLOW NOTIFICATIONS  
  For Daily Alerts

  'ಕೊರೊನಾ' ವೈರಸ್ ನಾಶಮಾಡಲು ಔಷಧಿ ಹಿಡಿದು ಚೀನಾಗೆ ಹೋದ ನಟಿ ರಾಖಿ

  |
  ಕೊರೊನಾ ನಾಶ ಮಾಡಲು ಚೀನಾಕ್ಕೆ ಹೊರಟ ರಾಖಿ | Rakshi Sawanth | China | Corona virus | Oneindia Kannada

  ಬಾಲಿವುಡ್ ನ ಡ್ರಾಮ ಕ್ವೀನ್ ಅಂತನೆ ಖ್ಯಾತಿ ಗಳಿಸಿರುವ ನಟಿ ರಾಖಿ ಸಾವಂತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ವಿಶ್ವದಾದ್ಯಂತ ಭಯ ಹುಟ್ಟಿಸಿರುವ ಕೊರೊನಾ ವೈರಸ್ ನಾಶ ಮಾಡುತ್ತೇನೆ ಎಂದು ರಾಖಿ ಚೀನಾದಲ್ಲಿ ಬೀಡುಬಿಟ್ಟಿದ್ದಾರೆ. ರಾಖಿ ಚೀನಾಗೆ ಹೋಗುತ್ತಿರುವ ವಿಡಿಯೋ ಮತ್ತು ಚೀನದಲ್ಲಿ ಇರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಕೊರೊನಾ ವೈರಸ್ ಚೀನಾದಲ್ಲಿ ಸಾಕಷ್ಟು ಮಂದಿಯನ್ನು ಬಲಿತೆಗೆದುಕೊಂಡಿದೆ. 20 ಸಾವಿರಕ್ಕು ಅಧಿಕ ಮಂದಿಗೆ ಸೋಂಕು ತಗುಲಿದ್ದು, ವಿಶ್ವದೆಲ್ಲೆಡೆ ಹರಡುತ್ತಿದೆ. ಮಾರಕ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು ಕೇರಳದಲ್ಲಿ ಮೂರು ಮಂದಿಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.

  ಅತ್ಯಾಚಾರಿಗಳ ಮರ್ಮಾಂಗವನ್ನು ಕತ್ತರಿಸಿ: ಗುಟುರು ಹಾಕಿದ ರಾಖಿ ಸಾವಂತ್ಅತ್ಯಾಚಾರಿಗಳ ಮರ್ಮಾಂಗವನ್ನು ಕತ್ತರಿಸಿ: ಗುಟುರು ಹಾಕಿದ ರಾಖಿ ಸಾವಂತ್

  ಹೀಗಿರುವಾಗ ರಾಖಿ ಸಾವಂತ್ ಚೀನಾಗೆ ಹೋಗಿ ಅಚ್ಚರಿ ಮೂಡಿಸಿದ್ದಾರೆ. "ನನ್ನ ಬಳಿ ಕೊರೊನಾ ವೈರಸ್ ಅನ್ನು ನಾಶ ಮಾಡಲು ಔಷಧಿ ಇದೆ. ಕೊರೊನಾ ವೈರಸ್ ಅನ್ನು ನಾನು ಕಲ್ಲುತೇನೆ ಎಂದು ರಾಖಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

  ವಿಡಿಯೋದಲ್ಲಿ ಮೋದಿ ಹೆಸರನ್ನು ಹೇಳಿದ್ದಾರೆ. "ಮೋದಿಜಿ ನಾನು ಚೀನಾಗೆ ಹೋಗುತ್ತಿದ್ದೀನಿ. ಕೊರೊನಾ ವೈರಸ್ ಅನ್ನು ನಾಶ ಮಾಡುತ್ತೇನೆ. ನಾನು ಕ್ಷೇಮವಾಗಿ ವಾಪಸ್ ಬರಲಿ ಅಂತ ಎಲ್ಲರು ಪ್ರಾರ್ಥಿಸಿ. ನಾನು ನಾಸಾದಿಂದ ಕೊರೊನಾ ವೈರಸ್ ಅನ್ನು ನಾಶ ಮಾಡಲು ಔಷದಿ ತಂದಿದ್ದೇನೆ" ಎಂದು ಹೇಳಿದ್ದಾರೆ.

  ಈ ಮತ್ತೊಂದು ವಿಡಿಯೋ ಮಾಡಿದ್ದು, "ಪ್ರಧಾನಿ ಮೋದಿ ನನಗೆ ಚೀನಾಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಹಾಗೆಯೇ ಈ ವೈರಸ್‌ನ್ನು ಕೊಲ್ಲಲು ನಿನ್ನಿಂದ ಮಾತ್ರ ಸಾಧ್ಯ ಎಂದು ನನ್ನ ಮೇಲೆ ಭರವಸೆ ಇಟ್ಟಿದ್ದಾರೆ ಹಾಗಾಗಿ ನಾನು ಚೀನಾಕ್ಕೆ ಬಂದಿದ್ದೇನೆ" ಎಂದು ಹೇಳಿಕೊಂಡಿದ್ದಾರೆ. ರಾಖಿಯ ಈ ವಿಡಿಯೋವನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ರಾಖಿ ಸಾವಂತ್ ಬಳಿ ಔಷಧಿ ಇದಿಯಾ ಎಂದು ಎಲ್ಲರು ಅಚ್ಚರಿಪಡುತ್ತಿದ್ದಾರೆ.

  English summary
  Bollywood actress Rakhi Sawant in China to kill coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X