For Quick Alerts
  ALLOW NOTIFICATIONS  
  For Daily Alerts

  'ಹ್ಯಾಂಡ್ ಇನ್ ಹ್ಯಾಂಡ್' ರಾಯಭಾರಿಯಾದ ಬಾಲಿವುಡ್ ನಟಿ ಯಾಮಿ ಗೌತಮ್

  |

  ದೇಶದ ಪ್ರಮುಖ ಎಫ್‍ಎಂಜಿಸಿ ಬ್ರಾಂಡ್ ವನೇಸಾ ಕೇರ್ ಪ್ರೈವೇಟ್ ಲಿಮಿಟೆಡ್‍ನ "ಹ್ಯಾಂಡ್ ಇನ್ ಹ್ಯಾಂಡ್" ಆರೋಗ್ಯ ಮತ್ತು ನೈರ್ಮಲ್ಯ ಉತ್ಪನ್ನ ಶ್ರೇಣಿಯ ಪ್ರಚಾರ ರಾಯಭಾರಿಯನ್ನಾಗಿ ಬಾಲಿವುಡ್ ಚೆಲುವೆ, ಸ್ಟೈಲ್ ಐಕಾನ್ ಯಾಮಿ ಗೌತಮ್ ಆಯ್ಕೆಯಾಗಿದ್ದಾರೆ.

  Upendra ಅಭಿನಯದ ಬ್ರಹ್ಮ ಚಿತ್ರ ತಯಾರಾದ ಕ್ಷಣಗಳು | FILMIBEAT KANNADA

  ಮಾರುಕಟ್ಟೆಯಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಉತ್ಪನ್ನಗಳು ಪ್ರವಾಹದೋಪಾದಿಯಲ್ಲಿ ಬಂದಿರುವ ನಡುವೆಯೇ, ಯಾಮಿ ಗೌತಮ್ ಅವರನ್ನು "ಹ್ಯಾಂಡ್ ಇನ್ ಹ್ಯಾಂಡ್" ಆರೋಗ್ಯ ಮತ್ತು ನೈರ್ಮಲ್ಯ ಉತ್ಪನ್ನ ಶ್ರೇಣಿಯ ಪ್ರಚಾರ ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವುದು ಆರೋಗ್ಯ ಮತ್ತು ನೈರ್ಮಲ್ಯ ಪ್ರಿಯರಲ್ಲಿ ಬ್ರಾಂಡ್ ಜಾಗೃತಿ ಹೆಚ್ಚಲು ನೆರವಾಗಲಿದೆ.

  ಬೋಳು ತಲೆ ಹುಡುಗ ಸಿಕ್ಕರೂ ಮದುವೆ ಆಗುವೆ ಎಂದ ಯಾಮಿ ಗೌತಮ್ಬೋಳು ತಲೆ ಹುಡುಗ ಸಿಕ್ಕರೂ ಮದುವೆ ಆಗುವೆ ಎಂದ ಯಾಮಿ ಗೌತಮ್

  ಈ ಬಗ್ಗೆ ಅಧಿಕೃತ ಘೋಷಣೆ ಮಾಡಿ ಮಾತನಾಡಿದ ವನೇಸಾ ಕೇರ್ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕ ಸೌರಭ್ ಗುಪ್ತಾ, "ಯಾಮಿ ಗೌತಮ್ ಸೌಂದರ್ಯ ಮತ್ತು ಅಪಾರ ಬುದ್ಧಿಮತ್ತೆಯ ಜೀವಂತ ನಿದರ್ಶನವಾಗಿದ್ದು, ಹ್ಯಾಂಡ್ ಇನ್ ಹ್ಯಾಂಡ್‍ನ ಎಲ್ಲ ಗುಣಗಳನ್ನು ಒಳಗೊಂಡಿದ್ದಾರೆ. ಹ್ಯಾಂಡ್ ಇನ್ ಹ್ಯಾಂಡ್‍ನ ಎಲ್ಲ ಹೊಳಹುಗಳಿಗೆ ಯಾಮಿ ನಿಜವಾಗಿಯೂ ಹೊಂದಾಣಿಕೆಯಾಗುತ್ತಾರೆ ಹಾಗೂ ಅವರ ಜತೆಗಿನ ಸಹಭಾಗಿತ್ವವು, ಅವರ ಅಪಾರ ಜನಪ್ರಿಯತೆಯ ಹಿನ್ನೆಲೆಯಲ್ಲಿ ನಮ್ಮ ಅಂತರರಾಷ್ಟ್ರೀಯ ಗುಣಮಟ್ಟದ ಉತ್ಪನ್ನದ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಲಿದೆ" ಎಂದು ಬಣ್ಣಿಸಿದರು.

  ಯಾಮಿ ಗೌತಮ್ ಮಾತನಾಡಿ, "ಕೀಟಗಳ ಕಾರಣದಿಂದ ಬರುವ ಗಂಭೀರ ಅಸ್ವಸ್ಥತೆ ವಿರುದ್ಧ ರಕ್ಷಣೆ ನೀಡುವ ಹ್ಯಾಂಡ್ ಇನ್ ಹ್ಯಾಂಡ್ ಉತ್ಪನ್ನಗಳು ಇಂದಿನ ಅಗತ್ಯತೆಗಳೆನಿಸಿವೆ. ಈ ಉತ್ಪನ್ನ ಶ್ರೇಣಿಗಳು ನನ್ನ ವ್ಯಾನಿಟಿ ಹಾಗೂ ಮನೆಯ ಪರಿಪೂರ್ಣ ಸಂಗಾತಿಯಾಗಿದ್ದು, ಈ ಸರ್ವಾಂಗೀಣ ಪಾಲುದಾರ ಉತ್ಪನ್ನ ಎನಿಸಿದ ಹ್ಯಾಂಡ್ ಇನ್ ಹ್ಯಾಂಡ್ ಇಲ್ಲದೇ ಮನೆಯಿಂದ ಹೊರಗೆ ಹೆಜ್ಜೆ ಇಡುವುದನ್ನು ಕೂಡಾ ಕಲ್ಪಿಸಿಕೊಳ್ಳಲಾರೆ. ನಾನು ನಂಬಿಕೆ ಇಟ್ಟಿರುವ ಬ್ರಾಂಡ್‍ನ ಭಾಗವಾಗುವುದು ಹೆಚ್ಚು ಅನುಕೂಲಕರ. ಈ ಕಠಿಣ ಕಾಲಘಟ್ಟದಲ್ಲಿ ನಮ್ಮ ಸುಕ್ಷೇಮ ಮತ್ತು ಮಾನಸಿಕ ನೆಮ್ಮದಿಯನ್ನು ಖಾತರಿಪಡಿಸಿಕೊಳ್ಳಬೇಕಾದ್ದು ಅಗತ್ಯ. ಆದ್ದರಿಂದ ಹ್ಯಾಂಡ್‍ಇನ್ ಹ್ಯಾಂಡ್‍ನ ಜತೆಗೆ ಈ ಸವಾಲುದಾಯಕ ಕಾಲಘಟ್ಟದಲ್ಲಿ ಮುಂದಡಿ ಇಡುವುದು ಅಗತ್ಯ" ಎಂದು ವಿವರಿಸಿದರು.

  ಹ್ಯಾಂಡ್ ಇನ್ ಹ್ಯಾಂಡ್ ಉತ್ಪನ್ನ ಶ್ರೇಣಿಯಲ್ಲಿ ಹೊಸ ಆರೋಗ್ಯ ಹಾಗೂ ನೈರ್ಮಲ್ಯ ಉತ್ಪನ್ನಗಳನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ಯೋಜನೆ ಇದೆ. ಇದರ ವಿಸ್ತರಿತ ಶ್ರೇಣಿಯಲ್ಲಿ ಕೀಟಗಳನ್ನು ಕೊಲ್ಲುವ ಸ್ಪ್ರೇ, ಹ್ಯಾಂಡ್ ಸ್ಯಾನಿಟೈಸರ್ ಮತ್ತು ಹ್ಯಾಂಡ್‍ಕೇರ್ ಜೆರ್ಮ್ ಪ್ರೊಟೆಕ್ಷನ್ ವೈಪ್‍ಗಳು ಸೇರಿವೆ. ಹ್ಯಾಂಡ್ ಇನ್ ಹ್ಯಾಂಡ್ ನಿಯತವಾಗಿ ಏಣಿಯನ್ನು ಏರುತ್ತಲೇ ಇದೆ. ಯಾಮಿ ಗೌತಮ್ ಜತೆಗಿನ ಸಹಭಾಗಿತ್ವದಿಂದಾಗಿ, ಬ್ರಾಂಡ್ ದೇಶಾದ್ಯಂತ ತನ್ನ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸುವ ಹಂತವನ್ನು ತಲುಪಲು ನೆರವಾಗಲಿದೆ.

  English summary
  Bollywood actress Yami Gautam appointed Hand in Hand’s brand ambassador.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X