Just In
Don't Miss!
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Automobiles
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾವನಮನೆಗೆ (ಜೈಲು) ಹೋಗಿ ಬಂದ ತಾರೆಗಳು
ಶ್ರೀಕೃಷ್ಣ ಪರಮಾತ್ಮನ ಜನ್ಮಸ್ಥಳ ಅನ್ನಿ ಅಥವಾ ಮಾವನ ಮನೆ ಎನ್ನಿ ಒಟ್ಟಿನಲ್ಲಿ ಜೈಲಿಗೆ ನಾನಾ ಪಡೆನುಡಿಗಳಿವೆ. ರಾಜಕಾರಣಿಗಳಿಗೆ ಜೈಲುವಾಸ ಮಾವನ ಮನೆಯಂತಾದರೆ ಸಿನಿಮಾ ತಾರೆಗಳ ಪಾಲಿಗೆ ಸೋದರಮಾವನ ಮನೆ ತರಹ.
ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇಬೇಕು. ತಪ್ಪು ಮಾಡಿ ಜೈಲು ಸೇರುವ ಸಾಮಾನ್ಯರ ಬಗ್ಗೆ ಜನ ಅಷ್ಟಾಗಿ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸಿನಿಮಾ ತಾರೆಗಳು ಜೈಲು ಪಾಲಾದರೆ ಅದೊಂದು ರೀತಿ ಸೆನ್ಸೇಷನ್.
ನಟ ಸಂಜಯ್ ದತ್ ಗೆ ಐದು ವರ್ಷಗಳ ಕಾರಾಗೃಹ ಶಿಕ್ಷೆ ಜಾರಿಯಾಗಿರುವುದು ಬಾಲಿವುಡ್ ನಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯಿಂದ ಬಾಲಿವುಡ್ ಶಾಕ್ ಆಗಿದೆ. ಬಹಳಷ್ಟು ಸ್ಟಾರ್ ಗಳು ತಪ್ಪು ಮಾಡಿ ಕಟಕಟೆಯಲ್ಲಿ ನಿಲ್ಲುವಂತಾಗಿತ್ತು.
ಬಹಳಷ್ಟು ಮಂದಿ ಕಟಕಟೆಗಷ್ಟೇ ಸೀಮಿತವಾಗಿರದೆ ಜೈಲುವಾಸವನ್ನೂ ಅನುಭವಿಸಿ ಬಂದಿದ್ದಾರೆ. ಅವರಲ್ಲಿ ನಟರಾದ ಸಲ್ಮಾನ್ ಖಾನ್, ಸೈಫ್ ಆಲಿ ಖಾನ್, ಶೈನಿ ಅಹುಜಾ, ಮಧುರ್ ಭಂಡಾರ್ಕರ್, ಜಾನ್ ಅಬ್ರಹಾಂ, ಫರ್ದೀನ್ ಖಾನ್, ಮೋನಿಕಾ ಬೇಡಿ, ಮಧುಬಾಲ ಮುಂತಾದವರಿದ್ದಾರೆ.
ಅಷ್ಟೇ ಏಕೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಮಾವನಮನೆಗೆ ಹೋಗಿ ಬಂದವರೆ. ತಾರೆಗಳು ಜೈಲಿಗೆ ಹೋಗುವುದೆಂದರೆ ಅವರ ಅಭಿಮಾನಿಗಳ ಪಾಲಿಗೆ ನೋವಿನ ಸಂಗತಿ. ಆದರೆ ಕಾನೂನು ಎಲ್ಲರಿಗೂ ಒಂದೇ ಅಲ್ಲವೆ. ತಪ್ಪು ಯಾರು ಮಾಡಿದರೂ ತಪ್ಪೇ. ಸ್ಲೈಡ್ ಗಳಲ್ಲಿ ನೋಡಿ ತಾರೆಗಳ ಜೈಲು ಪುರಾಣ.
ಇವರಿಗೆಲ್ಲಾ ಒಂದೇ ಮಾತು ಅನ್ವಯಿಸುತ್ತದೆ. ಅದೇನೆಂದರೆ 'ಮಠ' ಚಿತ್ರದ ಈ ಹಾಡು..."ತಪ್ಪು ಮಾಡದೋರ್ ಯಾರವ್ರೆ? ತಪ್ಪೇ ಮಾಡದೋರ್ ಎಲ್ಲವ್ರೆ? ಅಪ್ಪಿ ತಪ್ಪಿ ತಪ್ಪಾಗುತ್ತೆ ಬೆಳ್ಳಿ ಕೂಡ ಕಪ್ಪಾಗುತ್ತೆ ತಿದ್ಕೊಳ್ಳಕ್ಕೆ ದಾರಿ ಐತೆ..."

ಜೈಲೂಟ ಸವಿದಿದ್ದ ಸಲ್ಮಾನ್ ಖಾನ್
ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕೆಲದಿನಗಳ ಕಾಲ ಜೈಲಿನಲ್ಲಿ ಕಳೆಯಬೇಕಾಯಿತು. ಅಪಘಾತ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದು ಇನ್ನೊಮ್ಮೆ ಜೈಲಿನ ಕದ ತಟ್ಟುವ ಸಾಧ್ಯತೆಗಳಿವೆ.

ಬ್ಯಾಡ್ ಬಾಯ್ ಆದ ಮುನ್ನಾಬಾಯ್
1993ರ ಮುಂಬೈ ಸ್ಫೋಟ ಪ್ರಕರಣಕ್ಕೆ ಸಂಬಂದಿಸಿದಂತೆ ಬಾಲಿವುಡ್ ನಟ ಸಂಜಯ್ ದತ್ (53) ಅವರಿಗೆ ಸುಪ್ರೀಂಕೋರ್ಟ್ 5 ವರ್ಷ ಜೈಲುಶಿಕ್ಷೆ ವಿಧಿಸಿದೆ. ಈ ಹಿಂದೆ ಟಾಡಾ (ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ನಿಯಂತ್ರಣ ಕಾಯಿದೆ ) ವಿಶೇಷ ನ್ಯಾಯಾಲಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 6 ವರ್ಷಗಳ ಶಿಕ್ಷೆ ಪ್ರಕಟಿಸಿತ್ತು.

ಕಂಬಿಎಣಿಸಿದ್ದ ನಟ ಸೈಫ್ ಆಲಿ ಖಾನ್
ಮುಂಬೈನ ತಾಜ್ ಹೋಟೆಲ್ ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಕೈಮಾಡಿ ಅರೆಸ್ಟ್ ಆಗಿದ್ದ ಸೈಫ್ ಆಲಿ ಖಾನ್. ಸ್ವಲ್ಪ ಸಮಯ ಜೈಲಿನಲ್ಲಿ ಕಳೆಯಬೇಕಾಯಿತು. ಬಳಿಕ ಜಾಮೀನಿನ ಮೇಲ ಬಿಡುಗಡೆಯಾದರು.

ರೇಪ್ ಕೇಸಲ್ಲಿ ಜೈಲು ಪಾಲಾದ ನಟ
ಕೆಲಸದಾಕೆಯ ಮೇಲೆ ಅತ್ಯಾಚಾರವೆಸಗಿದ ಕೇಸಲ್ಲಿ ಬಾಲಿವುಡ್ ನಟ ಶೈನಿ ಅಹುಜಾ ಫಿಟ್ ಆಗಿದ್ದ. ಜೈಲು ಪಾಲು ಆಗಿದ್ದ. ಬಳಿಕ ಕೆಲಸದಾಕೆ ಕೇಸನ್ನು ವಾಪಸ್ ಪಡೆದ ಬಳಿಕ ಬಿಡುಗಡೆಯಾಗಿ ಮಾವನಮನೆಯಿಂದ ಮನೆಗೆ ಬಂದಿದ್ದ.

ಬೇಡಿ ತೊಟ್ಟಿದ್ದ ಮೋನಿಕಾ ಬೇಡಿ
ಭೂಗತಪಾತಕಿ ಅಬೂ ಸಲೇಂ ಗರ್ಲ್ ಫ್ರೆಂಡ್ ಮೋನಿಕಾ ಬೇಡಿ ನಕಲಿ ಪಾಸ್ ಪೋರ್ಟ್ ಕೇಸಲ್ಲಿ ಜೈಲು ಸೇರಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಕಟಕಟೆವರೆಗೂ ಹೋಗಿಬಂದ ಮಧುರ್
ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಮಧುರ್ ಬಂಡಾರ್ಕರ್. 2006ರಲ್ಲಿ ಅವರ ಮೇಲೆ ಅತ್ಯಾಚಾರ ಆರೋಪ ಮಾಡಲಾಗಿತ್ತು. ಸಿನಿಮಾದಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ನಂಬಿಸಿ ಅತ್ಯಾಚಾರ ಮಾಡಿದರು ಎಂದು ಆರೋಪಿಸಿ ಪ್ರತಿ ಜೈನ್ ಎಂಬುವವರು ಕೋರ್ಟ್ ಮೆಟ್ಟಿಲೇದಿದ್ದರು. ಆದರೆ ಆರೋಪಗಳು ಸಾಬೀತಾಗದೆ ಕಟಕಟೆವರೆಗೂ ಹೋಗಿಬಂದರು.

ಮಧುಬಾಲಾ ಸಹ ಜೈಲು ಹಕ್ಕಿಯಾಗಿದ್ದರು
ಒಂದು ಕಾಲದ ಮೋಹಕ ತಾರೆ ಮಧುಬಾಲಾ ಸಹ ಅಷ್ಟೇ ಜೈಲು ಕದ ತಟ್ಟಿ ಬಂದವರೆ. ನಿರ್ದೇಶಕ ಬಿ.ಆರ್.ಛೋಪ್ರಾ ಅವರಿಂದ ಅಡ್ವಾನ್ಸ್ ಹಣ ತೆಗೆದುಕೊಂಡು ನಟಿಸಲು ನಿರಾಕರಿಸಿದ ಕಾರಣ ಅವರು ಜೈಲಿಗೆ ಹೋಗಿಬಂದಿದ್ದರು.

ಮಾವನ ಮನೆಗೆ ಹೋಗಿಬಂದಿದ್ದ ಜಾನ್ ಅಬ್ರಹಾಂ
ಬೈಕ್ ರೈಡಿಂಗ್ ಎಂದರೆ ಕಾಲೇಜು ಹುಡುಗನಂತಾಗುವ ನಟ ಜಾನ್ ಅಬ್ರಹಾಂ. ಅತಿವೇಗವಾಗಿ ತನ್ನ ಸ್ಫೋರ್ಟ್ಸ್ ಬೈಕ್ ಓಡಿಸಿ ಇಬ್ಬರನ್ನು ಗಾಯಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳ ಕಾಲ ಜೈಲು ಸೇರಿದ್ದರು.

ಕಂಬಿ ಹಿಂದೆ ಹೋಗಿಬಂದಿದ್ದ ಪರ್ದೀನ್ ಖಾನ್
ಬಾಲಿವುಡ್ ನ ಮತ್ತೊಬ್ಬ ನಟ ಪರ್ದೀನ್ ಖಾನ್ ಮಾದಕದ್ರವ್ಯ ಕೋಕೈನ್ ಸೇವಿಸಿದ ಕಾರಣ 2001ರಲ್ಲಿ ಆತನನ್ನು ಬಂಧಿಸಲಾಗಿತ್ತು.