»   » ಟ್ವಿಟ್ಟರ್ ನಲ್ಲಿ ಕೆಂಗಣ್ಣು ಬಿಟ್ಟ ಕರಣ್ ಜೋಹರ್

ಟ್ವಿಟ್ಟರ್ ನಲ್ಲಿ ಕೆಂಗಣ್ಣು ಬಿಟ್ಟ ಕರಣ್ ಜೋಹರ್

Posted By:
Subscribe to Filmibeat Kannada

'ಶೀಘ್ರದಲ್ಲಿ ಕರಣ್ ಜೋಹರ್ ಅಮೇರಿಕದಲ್ಲಿ ಮದುವೆಯಾಗಲಿದ್ದಾರೆ'. ಹಾಗಂತ ಸಿನಿ ಪ್ರಿಯರೊಬ್ಬರು ಟ್ವೀಟ್ ಮಾಡಿದ ತಕ್ಷಣ ಟ್ವಿಟ್ಟರ್ ನಲ್ಲಿ ಭಾರಿ ಚರ್ಚೆ ಆಗುತ್ತಿದೆ.

ಭಾರತದಲ್ಲಿ ಮದುವೆ ಆಗೋದು ಬಿಟ್ಟು ಅಮೇರಿಕದಲ್ಲಿ ಮದುವೆ ಆಗುತ್ತಿರುವುದಕ್ಕೆ ಕಾರಣ 'ಗೇ' ಅಂತ ಟ್ವಿಟ್ಟರ್ ನಲ್ಲಿ ಎಲ್ಲರೂ ಅಪಹಾಸ್ಯ ಮಾಡುತ್ತಿದ್ದಾರೆ.

ಇದನ್ನೆಲ್ಲಾ ಕಂಡ ಕರಣ್ ಜೋಹರ್ ಕಣ್ಣು ಕೆಂಪಗಾಗಿದೆ. ಅದಕ್ಕೆ ಅದೇ ಟ್ವಿಟ್ಟರ್ ನಲ್ಲಿ ಕರಣ್ ಜೋಹರ್, ಮದುವೆ ಗಾಸಿಪ್ ಹಬ್ಬಿಸಿದ ಯುವಕನಿಗೆ ತಿರುಗೇಟು ನೀಡಿದ್ದಾರೆ. ಕರಣ್ ಜೋಹರ್ ಏನು ಹೇಳಿದರು ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಟ್ವಿಟ್ಟರ್ ನಲ್ಲಿ ಕರಣ್ ಜೋಹರ್ ವಿರುದ್ಧ ಅಪಹಾಸ್ಯ

ಕರಣ್ ಜೋಹರ್ ವಿರುದ್ಧ ಟ್ವಿಟ್ಟರ್ ನಲ್ಲಿ ಅಪಹಾಸ್ಯ ನಡೆಯುತ್ತಿದೆ. 'ಅನಿವಾರ್ಯ' ಕಾರಣಗಳಿಂದ ಅಮೇರಿಕದಲ್ಲಿ ಕರಣ್ ಜೋಹರ್ ಮದುವೆ ಆಗುತ್ತಿದ್ದಾರೆ ಅನ್ನುವ ಟ್ವೀಟ್ ವೈರಲ್ ಆಗುತ್ತಿವೆ.

ಬರೀ ಒಂದು ಟ್ವೀಟ್ ಅಲ್ಲ.!

ಬರೀ ಒಬ್ಬರು ಮಾಡಿರುವ ಟ್ವೀಟ್ ಅಲ್ಲ. ಕರಣ್ ಜೋಹರ್ ಮದುವೆ ಬಗ್ಗೆ ಅನೇಕ ಟ್ವೀಟ್ ಗಳು ಹರಿದಾಡುತ್ತಿವೆ.

ಕರಣ್ ಜೋಹರ್ ಉತ್ತರ ಹೇಗಿತ್ತು ಗೊತ್ತಾ?

ಮದುವೆ ಗುಲ್ಲು ಹಬ್ಬಿಸಿದವರಿಗೆ ಕರಣ್ ಜೋಹರ್ ನೇರವಾಗಿ ತಿರುಗೇಟು ನೀಡಿದ್ದಾರೆ.

ಮದುವೆ ಬಗ್ಗೆ ಕರಣ್ ಜೋಹರ್ ಹೇಳುವುದೇನು?

ಕರಣ್ ಜೋಹರ್ ಮದುವೆ ಬಗ್ಗೆ ಆಗಾಗ ಬಾಲಿವುಡ್ ನಲ್ಲಿ ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ನಡೆದ 'ಬಾಹುಬಲಿ' ಪ್ರಮೋಷನ್ ಸಂದರ್ಭದಲ್ಲಿ ಕರಣ್ ಜೋಹರ್ ಮದುವೆ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಕರಣ್ ಜೋಹರ್ ಕೊಟ್ಟ ಉತ್ತರ ಹೀಗಿತ್ತು - ''ನಾನು ನನ್ನ ಕಂಪನಿ ಮತ್ತು ಸಿನಿಮಾಗಳೊಂದಿಗೆ ಮದುವೆ ಆಗಿದ್ದೇನೆ'' ಅಂತ ಹೇಳಿ ಎಲ್ಲಾ ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದರು.

ಬಾಲಿವುಡ್ ನಲ್ಲಿ ಎಲ್ಲರಿಗೂ ಕರಣ್ ಜೋಹರ್ ಅತ್ಯಾಪ್ತ

ದೀಪಿಕಾ ಪಡುಕೋಣೆ, ಆಲಿಯಾ ಭಟ್, ಸಲ್ಮಾನ್ ಖಾನ್, ಕರೀನಾ ಕಪೂರ್, ಶಾರುಖ್ ಖಾನ್ ಸೇರಿದಂತೆ ಇಡೀ ಖಾನ್ ಖಾನ್ದಾನ್ ಗೆ ಕರಣ್ ಜೋಹರ್ ಅತ್ಯಾಪ್ತ. ಇಂತಿಪ್ಪ ಕರಣ್ ಆಗಾಗ, ಬಾಲಿವುಡ್ ಸಿನಿ ಪ್ರಿಯರಿಂದ ಅಪಹಾಸ್ಯಕ್ಕೀಡಾಗುತ್ತಿರುತ್ತಾರೆ.

ವಯಸ್ಸಾದ್ರೂ ಮದುವೆ ಯಾಕೆ ಆಗಿಲ್ಲ!

ಕರಣ್ ಜೋಹರ್ ವಯಸ್ಸು 43. ಆದ್ರೂ, ಅವರಿನ್ನೂ ಮದುವೆ ಆಗಿಲ್ಲ. ಇದಕ್ಕೆ ಕಾರಣ 'ಸಲಿಂಗ ಕಾಮ' ಅಂತ ಬಾಲಿವುಡ್ ನಲ್ಲಿ ಗುಲ್ಲೆದ್ದಿದೆ. ಇದೇ ವಿಚಾರಕ್ಕೆ ಟ್ವಿಟ್ಟರ್ ನಲ್ಲಿ ಕೆಲವರು ಆಗಾಗ ಕರಣ್ ಜೋಹರ್ ಕಾಲೆಳೆಯುತ್ತಿರುತ್ತಾರೆ.

ಕರಣ್ ಜೋಹರ್ ಹಿನ್ನಲೆ

'ಕುಚ್ ಕುಚ್ ಹೋತಾ ಹೈ', 'ಕಭೀ ಖುಷಿ ಕಭೀ ಘಮ್', ಕಭೀ ಅಲ್ವಿದಾ ನಾ ಕೆಹನಾ', 'ಮೈ ನೇಮ್ ಈಸ್ ಖಾನ್' ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಕರಣ್ ಜೋಹರ್. ನಿರ್ದೇಶನದ ಜೊತೆಗೆ ನಿರ್ಮಾಪಕನಾಗಿರುವ ಕರಣ್ ಜೋಹರ್, 'ಕಾಫಿ ವಿತ್ ಕರಣ್' ಕಾರ್ಯಕ್ರಮದಿಂದ ಜನಪ್ರಿಯತೆಯ ಉತ್ತುಂಗಕ್ಕೇರಿದರು.

English summary
Bollywood Director Karan Johar slams a twitter user for making a Gay Comment. Read the article to know what Karan Johar reacted on the Gay Comment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada