For Quick Alerts
  ALLOW NOTIFICATIONS  
  For Daily Alerts

  ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ತಾರಾ ಧೋನಿ?, ಮಹಿಗೆ ಖ್ಯಾತ ವಿಲನ್ ಮನವಿ ಮಾಡಿದ್ದೇನು?

  |

  ಟೀಂ ಇಂಡಿಯಾದ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ ಎಂ.ಎಸ್ ಧೋನಿ ಹೊಸ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ. ತರಹೇವಾರಿ ಹೇರ್ ಸ್ಟೈಲ್ ಮೂಲಕ ಯುವಕರ ಗಮನ ಸೆಳೆಯುವ ಧೋನಿ, ಇತ್ತೀಚಿಗೆ ಮತ್ತೊಂದು ಹೊಸ ಸ್ಟೈಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಧೋನಿ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ.

  ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಗಣ್ಯರು ಸಹ ಧೋನಿ ಹೊಸ ಲುಕ್‌ಗೆ ಫಿದಾ ಆಗಿದ್ದಾರೆ. ಧೋನಿ ಕೇಶವಿನ್ಯಾಸ ಅನೇಕರು ಬೆರಗಾಗುವಂತೆ ಮಾಡಿದೆ. ಅಂದಹಾಗೆ ಧೋನಿ ಹೊಸ ಹೇರ್ ಸ್ಟೈಲ್ ಬಾಲಿವುಡ್‌ನ ಖ್ಯಾತ ವಿಲನ್ ಒಬ್ಬರ ನಿದ್ದೆಗೆಡಿಸಿದೆ. ಧೋನಿ ಫೋಟೋಗೆ ಕಾಮೆಂಟ್ ಮಾಡಿರುವ ಬಾಲಿವುಡ್ ಖ್ಯಾತ ನಟ ಗುಲ್ಶನ್ ಗ್ರೋವರ್ ದಯವಿಟ್ಟು ತನ್ನ ಹೊಟ್ಟೆ ಮೇಲೆ ಹೊಡೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮುಂದೆ ಓದಿ...

  ಡಾನ್ ಪಾತ್ರ ಒಪ್ಪಿಕೊಳ್ಳಬೇಡಿ ಎಂದ ಗುಲ್ಶನ್

  ಡಾನ್ ಪಾತ್ರ ಒಪ್ಪಿಕೊಳ್ಳಬೇಡಿ ಎಂದ ಗುಲ್ಶನ್

  ಧೋನಿ ಹೊಸ ಸ್ಟೈಲ್ ನೋಡಿ ಇಷ್ಟಪಟ್ಟಿರುವ ಖ್ಯಾತ ವಿಲನ್ ಗುಲ್ಶನ್ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಟ್ವೀಟ್ ಮಾಡಿದ್ದಾರೆ. ಈ ರೀತಿಯ ಲುಕ್ ನಲ್ಲಿ ಕಾಣಿಸಿಕೊಂಡು ಯಾವುದೇ ಡಾನ್ ಪಾತ್ರವನ್ನು ಒಪ್ಪಿಕೊಳ್ಳಬೇಡಿ ಎಂದು ಕೇಳಿಕೊಂಡಿದ್ದಾರೆ. "ಮಹೀ ಸಹೋದರ, ಲುಕ್ ಅದ್ಭುತವಾಗಿದೆ. ದಯವಿಟ್ಟು ಯಾವುದೇ ಡಾನ್ ಪಾತ್ರಗಳನ್ನು ಒಪ್ಪಿಕೊಳ್ಳಬೇಡಿ. ನೀವು ಒಪ್ಪಿಕೊಂಡರೆ ನನ್ನ ಹೊಟ್ಟೆ ಮೇಲೆ ಹೊಡೆದಂತೆ ಆಗುತ್ತದೆ. ಈಗಾಗಲೇ ನನ್ನ ಆತ್ಮೀಯ ಸಹೋದರರಾದ ಸುನೀಲ್ ಶೆಟ್ಟಿ, ಸಂಜಯ್ ದತ್, ಜಾಕಿ ಶ್ರಾಫ್ ನನಗೆ ಕೆಲಸ ಇಲ್ಲದಂತೆ ಮಾಡಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

  ಬಾಲಿವುಡ್‌ನ ಖ್ಯಾತ ವಿಲನ್ ಗುಲ್ಶನ್

  ಬಾಲಿವುಡ್‌ನ ಖ್ಯಾತ ವಿಲನ್ ಗುಲ್ಶನ್

  ಗುಲ್ಶನ್ ಮಾಡಿರುವ ಫನ್ನಿ ಟ್ವೀಟ್ ಈಗ ವೈರಲ್ ಆಗಿದೆ. ಬಾಲಿವುಡ್ ನಲ್ಲಿ ಖ್ಯಾತ ವಿಲನ್ ಆಗಿರುವ ಗುಲ್ಶನ್ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇತ್ತೀಚಿಗೆ ಸಂಜಯ್ ದತ್ ಮತ್ತು ಸುನಿಲ್ ಶೆಟ್ಟಿ ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಹಾಗಾಗಿ ಧೋನಿ ಹೇರ್ ಸ್ಟೈಲ್ ನೋಡಿ ಗುಲ್ಶನ್ ಡಾನ್ ಪಾತ್ರ ಮಾಡಬೇಡಿ ಎಂದು ಕಾಲೆಳೆದಿದ್ದಾರೆ. ಗುಲ್ಶನ್ ಟ್ವೀಟ್‌ಗೆ ಧೋನಿ ಕಡೆಯಿಂದ ಏನು ಪ್ರತಿಕ್ರಿಯೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

  ಸಾಲು ಸಾಲು ಸಿನಿಮಾಗಳಲ್ಲಿ ಗುಲ್ಶನ್ ಬ್ಯುಸಿ

  ಸಾಲು ಸಾಲು ಸಿನಿಮಾಗಳಲ್ಲಿ ಗುಲ್ಶನ್ ಬ್ಯುಸಿ

  ಗುಲ್ಶನ್ ಸದ್ಯ ಬಾಲಿವುಡ್‌ನ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಡಕ್-2 ಮೂಲಕ ಒಟಿಟಿ ಅಭಿಮಾನಿಗಳ ಮುಂದೆ ಬಂದಿದ್ದ ಗುಲ್ಶನ್ ಸದ್ಯ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ, ಇಂಡಿಯನ್-2 ಸೇರಿದಂತೆ ಅನೇಕ ಸಿನಿಮಾಗಳಿವೆ.

  ಧೋನಿ ಸ್ಟೈಲ್ ಹಿಂದಿದ್ದಾರೆ ಆಲಿಮ್ ಹಕಿಮ್

  ಧೋನಿ ಸ್ಟೈಲ್ ಹಿಂದಿದ್ದಾರೆ ಆಲಿಮ್ ಹಕಿಮ್

  ಇನ್ನು ಧೋನಿ ಹೇರ್ ಸ್ಟೈಲ್ ಬಗ್ಗೆ ಹೇಳುವುದಾದರೆ ಈ ಹೊಸ ಲುಕ್ ನ ಹಿಂದಿದ್ದಾರೆ ಖ್ಯಾತ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕಿಮ್. ಸಿನಿಮಾ ಮತ್ತು ಕ್ರೀಡಾ ತಾರೆಯರ ನೆಚ್ಚಿನ ಹೇರ್ ಸ್ಟೈಲಿಸ್ಟ್ ಆಲಿಮ್ ಹಾಕಿಮ್. ಸ್ಟಾರ್ ಕಲಾವಿದರ ಲುಕ್ ಬದಲಾಯಿಸುವ ಆಲಿಮ್ ಕೇಶವಿನ್ಯಾಸಕ್ಕೆ ಫಿದಾ ಆಗದ ಅಭಿಮಾನಿಗಳಿಲ್ಲ.

  ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್

  ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್

  ವಿಭಿನ್ನ ಸ್ಟೈಲ್‌ಗಳಲ್ಲಿ ತಾರೆಯರು ಮಿಂಚುವಂತೆ ಮಾಡುವ ಆಲಿಮ್ ಇತ್ತೀಚಿಗಷ್ಟೆ ನಟ ಅಜಯ್ ದೇವಗನ್ ಅವರಿಗೆ ಹೊಸ ಲುಕ್ ಕೊಡುವ ಮೂಲಕ ಗಮನ ಸೆಳೆದಿದ್ದರು. ಕೇವಲ ಬಾಲಿವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರಿಗೂ ಆಲಿಮ್ ಹೇರ್ ಸ್ಟೈಲ್ ಮಾಡಿದ್ದಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿಗೂ ಹೊಸ ಸ್ಟೈಲ್ ಮಾಡಿ ಗಮನ ಸೆಳೆದಿದ್ದರು. ರಾಮ್ ಚರಣ್, ಕನ್ನಡದ ನಟ ಯಶ್ ಸೇರಿದಂತೆ ಅನೇಕರ ಸ್ಟೈಲ್ ಬದಲಾಯಿಸಿದ್ದಾರೆ ಆಲಿಮ್.

  ವಿಭಿನ್ನ ಹೇರ್ ಸ್ಟೈಲ್ ಮೂಲಕ ಗಮನ ಸೆಳೆದ ಆಟಗಾರ

  ವಿಭಿನ್ನ ಹೇರ್ ಸ್ಟೈಲ್ ಮೂಲಕ ಗಮನ ಸೆಳೆದ ಆಟಗಾರ

  ಸದ್ಯ ಧೋನಿಯ ಹೊಸ ಲುಕ್ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದೆ. ಎಂ ಎಸ್ ಧೋನಿ ವಿಭಿನ್ನ ಶೈಲಿಯ ಕೇಶವಿನ್ಯಾದ ಮೂಲಕ ಅಭಿಮಾನಿಗಳ ಗಮನ ಸೆಳೆದವರು. ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗ ಧೋನಿ ಉದ್ದ ಕೂದಲಿನಲ್ಲಿ ಮಿಂಚಿದ್ದರು. ಬಳಿಕ ಶಾರ್ಟ್ ಹೇರ್ ಸ್ಟೈಲ್, ಸ್ಪೈಕ್, ಬಾಲ್ಡ್, ಟ್ರಿಮ್ ಹೀಗೆ ತರಹೇವಾರಿ ಗೆಟಪ್‌ಗಳಲ್ಲಿ ಕಾಣಿಸಿಕೊಂಡು ಟ್ರೆಂಡ್ ಸೃಷ್ಟಿಸಿದವರು. ಇದೀಗ ಮತ್ತೊಂದು ಅವತಾರ ಎಲ್ಲರ ಮನಕದ್ದಿದೆ.

  English summary
  Bollywood famous villain Gulshan Grover impressed Dhoni's new hairstyle, He says Plz don’t accept any Don Roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X