»   » 'ಯೋಗ' ಅಂದ್ರೆ ಈ ನಟಿಯರಿಗೇಕೆ ಇಷ್ಟೊಂದು ಇಷ್ಟ.!

'ಯೋಗ' ಅಂದ್ರೆ ಈ ನಟಿಯರಿಗೇಕೆ ಇಷ್ಟೊಂದು ಇಷ್ಟ.!

Posted By:
Subscribe to Filmibeat Kannada

ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗದ ನಟ-ನಟಿಯರ ಫಿಟ್ನೆಸ್ ಗುಟ್ಟು 'ಯೋಗ'. ಫಿಟ್ನೆಸ್ ಗಾಗಿ ಯೋಗದ ಮೊರೆ ಹೋಗಿರುವ ಚಿತ್ರತಾರೆಯ ಪಟ್ಟಿಯೇ ಇದೆ. ಇವರಲ್ಲಿ ಬಾಲಿವುಡ್ ತಾರೆಯರು ಹೆಚ್ಚು ಮುಂಚೂಣೆಯಲ್ಲಿದ್ದಾರೆ.

ಶಿಲ್ಪಾ ಶೆಟ್ಟಿ ಭಾರತದ ಯೋಗ ಐಕಾನ್ ಆಗಿದ್ದಾರೆ. ಬಿಪಾಶ ಬಸು ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಯೋಗ ಕಾರ್ಯಗಾರ ಮಾಡಿದ್ದಾರೆ. ಇಲಿಯಾನ, ಪರಿಣಿತಿ ಚೋಪ್ರಾ ಸ್ಲಿಮ್ ಆಗಲು ಯೋಗವನ್ನ ಅವಲಂಬಿಸಿದ್ದಾರೆ.

ಹಾಟ್ ಹುಡುಗಿ ಸಂಜನಾ ಅವರ ಮೈ ಜುಮ್ಮೆನಿಸುವ 'ಯೋಗಾಭ್ಯಾಸ'.!

ಇಂದು (ಜೂನ್ 21) ಅಂತಾರಾಷ್ಟ್ರೀಯ ಯೋಗ ದಿನ. ಹೀಗಾಗಿ, ಬಾಲಿವುಡ್ ತಾರೆಯರು ಹಲವು ಕಡೆ ಯೋಗ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅಷ್ಟಕ್ಕೂ, ಬಾಲಿವುಡ್ ನ ಯಾವೆಲ್ಲಾ ಸೆಲೆಬ್ರಿಟಿಗಳು ಯೋಗಭ್ಯಾಸ ಮಾಡ್ತಾರೆ ಎಂಬುದನ್ನ ತಿಳಿದುಕೊಳ್ಳಲು ಮುಂದೆ ಓದಿ.....

ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಯೋಗವನ್ನ ಜೀವನದ ಒಂದು ಭಾಗವನ್ನಾಗಿಸಿಕೊಂಡಿದ್ದಾರೆ. ಯೋಗದಿಂದ ಕೇವಲ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ನಿರಾಳ ನೀಡುವುದು ಎನ್ನುವುದು ಶಿಲ್ಪಾ ಶೆಟ್ಟಿ ಅಭಿಪ್ರಾಯ.

ಲಾರಾ ದತ್

ಬಾಲಿವುಡ್ ನ ಮತ್ತೋರ್ವ ಸುಂದರಿ ಲಾರಾ ದತ್ ಕಳೆದ 12 ವರ್ಷಗಳಿಂದ ಯೋಗಾಭ್ಯಾಸ ಮಾಡುತ್ತಿದ್ದಾರಂತೆ. ಯೋಗ ವೈಯಕ್ತಿಕವಾಗಿ ತುಂಬಾ ಸಹಕಾರಿಯಾಗಿದೆಯಂತೆ. ಗರ್ಭೀಣೆ ಹೆಂಗಸರು ಯೋಗ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತೆ ಎನ್ನುತ್ತಾರೆ ನಟಿ ಲಾರಾ ದತ್

ಬಿಪಾಶ ಬಸು

ಶಿಲ್ಪಾ ಶೆಟ್ಟಿ ಯಂತೆ ನಟಿ ಬಿಪಾಶ ಬಸು ಕೂಡ ಭಾರತದ ಯೋಗ ಐಕಾನ್. ದೇಹವನ್ನ ಆರೋಗ್ಯವಾಗಿರುವುದರ ಜೊತೆಗೆ ಶಾಂತಿ ಕಾಪಾಡಲು ಯೋಗ ಸಹಕಾರಿಯಂತೆ. ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಅವರಿಗೂ ಕೂಡ ಬಿಪಾಶ ಯೋಗ ಹೇಳಿ ಕೊಡುತ್ತಾರಂತೆ.

ಮಲೈಕಾ ಅರೋರ

ಮಲೈಕಾ ಅರೋರ ಅವರನ್ನ ನೋಡಿದ್ರೆ 15 ವರ್ಷದ ಮಗುವಿನ ತಾಯಿ ಎನ್ನುವಂತೆ ಕಾಣುವುದಿಲ್ಲ. ಅಷ್ಟರ ಮಟ್ಟಿಗೆ ಯೌವನ ಕಾಪಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಯೋಗ.

ಕರೀನಾ ಕಪೂರ್

ಕರೀನಾ ಕಪೂರ್ ತಮ್ಮ ಮಗುವಿಗೆ ಜನ್ಮ ನೀಡಿದ ನಂತರ ದಪ್ಪಗಾಗಿದ್ದರು. ಆದ್ರೀಗ, ಯೋಗ ಮಾಡುವುದರ ಮೂಲಕ ಮತ್ತೆ ಸ್ಲಿಮ್ ಆಗ್ತಿದ್ದಾರಂತೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಅವರಿಗೆ ಯೋಗ ಜೀವನದ ಭಾಗವಾಗಿದೆಯಂತೆ. ದೀಪಿಕಾ ಅವರ ಖಿನ್ನತೆಗೆ ಒಳಗಾಗಿದ್ದಾಗ ಯೋಗ ಮೂಲಕವೇ ಮತ್ತೆ ಲಯ ಕಂಡುಕೊಳ್ಳಲು ಸಾಧ್ಯವಾಯಿತಂತೆ.

ಸೋನಮ್ ಕಪೂರ್

ಸೋನಮ್ ಕಪೂರ್ ಮೊದಲು ತುಂಬ ದಪ್ಪಗಿದ್ದರಂತೆ. ಸಿನಿಮಾ ಪ್ರವೇಶ ಮಾಡಬೇಕೆಂಬ ಆಸೆಯಿಂದ ಯೋಗ ಮಾಡಿ, ಸ್ಲಿಮ್ ಆದ್ರಂತೆ.

ಆಲಿಯಾ ಭಟ್

ಬಾಲಿವುಡ್ ನ ಯುವತಾರೆ ಆಲಿಯಾ ಭಟ್ ಇತ್ತೀಚೆಗಷ್ಟೇ ತಾವು ಯೋಗ ಮಾಡುತ್ತಿರುವ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದರು. ಹೀಗಾಗಿ, ಆಲಿಯಾ ಭಟ್ ಯೋಗಾಭ್ಯಾಸದಲ್ಲಿ ಪರಿಣಿತಿ ಹೊಂದಿದ್ದಾರೆ ಎನ್ನುವುದು ಸಾಬೀತಾಗಿದೆ.

ಡಾ.ರಾಜ್ ಕುಮಾರ್ ಎಂಬ ಕನ್ನಡದ ಶ್ರೇಷ್ಠ 'ಯೋಗಿ'

English summary
Bollywood female actors, From Shilpa Shetty, Bipasha Basu, Malaika Arora to Alia Bhatt and Kareena Kapoor, each one of them have sweared by yoga to either shed their pregnancy weight or stay fit on a daily basis.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada