For Quick Alerts
  ALLOW NOTIFICATIONS  
  For Daily Alerts

  ಭಾರತೀಯ ಸಂಸ್ಕೃತಿಗೆ ಮಾರಕ: ಬೆತ್ತಲಾದ ರಾಧಿಕಾ ವಿರುದ್ಧ ಸಿಡಿದೆದ್ದ ನೆಟ್ಟಿಗರು

  |

  'ವಾಹ್' ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿ ನಟಿ ರಾಧಿಕಾ ಆಪ್ಟೆ. ಚಿಕ್ಕ ಪಾತ್ರದ ಮೂಲಕ ಬಣ್ಣದ ಲೋಕ ಪಯಣ ಪ್ರಾರಂಭಿಸಿದ ರಾಧಿಕಾ ಇಂದು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ರಾಧಿಕಾ ಬ್ಯುಸಿಯಾಗಿದ್ದಾರೆ. ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ರಾಧಿಕಾ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ರಾಧಿಕಾ ಆಪ್ಟೆ, ಪಾರ್ಚೆಡ್ ಸಿನಿಮಾ ಮೂಲಕ ದೊಡ್ಡ ವಿವಾದ ಮಾಡಿಕೊಂಡಿದ್ದರು. ಈ ಚಿತ್ರದ ಬೆತ್ತಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಸಿತ್ತು. ಚಿತ್ರದಲ್ಲಿ ಸೆಕ್ಸ್ ವರ್ಕರ್ ಆಗಿ ಕಾಣಿಸಿಕೊಂಡಿದ್ದ ರಾಧಿಕಾ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಲೀಕ್ ಆಗಿದ್ದ ಬೆತ್ತಲೆ ವಿಡಿಯೋ ವಿವಾದ ಕಿಡಿ ಹೊತ್ತಿಸಿತ್ತು. ರಾಧಿಕಾ ಯಾವುದೇ ಬೋಲ್ಡ್ ಪಾತ್ರಗಳನ್ನು ಮಾಡಲು ಹಿಂಜರಿಯುವುದಿಲ್ಲ. ಪಾತ್ರಕ್ಕೆ ಅವಶ್ಯಕತೆ ಇದ್ದರೆ ತೆರೆಮೇಲೆ ಬೋಲ್ಡ್ ಆಗುತ್ತಾರೆ.

  ವಿಕ್ರಂವೇದ ಹಿಂದಿಯಲ್ಲಿ ಶ್ರದ್ಧಾ ಶ್ರೀನಾಥ್ ಪಾತ್ರಕ್ಕೆ ಸ್ಟಾರ್ ನಟಿ ಆಯ್ಕೆ?ವಿಕ್ರಂವೇದ ಹಿಂದಿಯಲ್ಲಿ ಶ್ರದ್ಧಾ ಶ್ರೀನಾಥ್ ಪಾತ್ರಕ್ಕೆ ಸ್ಟಾರ್ ನಟಿ ಆಯ್ಕೆ?

  ಪಾರ್ಚೆಡ್ ಸಿನಿಮಾದಲ್ಲಿ ಅರೆಬೆತ್ತಲಾಗಿದ್ದ ರಾಧಿಕಾ ವಿರುದ್ಧ ಅನೇಕರು ಕಿಡಿ ಕಾರಿದ್ದರು. ಅಂದು ಹೊತ್ತಿದ್ದ ಕಿಡಿ ಇಂದು ಆರಿಲ್ಲ. ಏಕೆಂದರೆ ಇಂದು ರಾಧಿಕಾ ಆಪ್ಟೆಯನ್ನು ಸಿನಿಮಾರಂಗದಿಂದ ಬಹಿಷ್ಕರಿಸಬೇಕೆಂದು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಮಾಡಲಾಗುತ್ತಿದೆ.

  ಇಂಥವರು ಭಾರತೀಯ ಸಂಸ್ಕೃತಿಗೆ ಮಾರಕ, ಹಿಂದೂ ಸಂಸ್ಕೃತಿಗೆ ಧಕ್ಕೆ ತರುತ್ತಿದ್ದಾರೆ, ಬೆತ್ತಲಾಗುವ ಮೂಲಕ ಅಶ್ಲೀಲತೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ರಾಧಿಕಾ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಪಾರ್ಚೆಡ್ ಸಿನಿಮಾದ ಫೋಟೋ ಶೇರ್ ಮಾಡಿ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

  ಅಂದಹಾಗೆ ಈ ಸಿನಿಮಾ ಬಿಡುಗಡೆಯಾಗಿ 5 ವರ್ಷಗಳಾಗಿದೆ. 2016ರಲ್ಲಿ ಪಾರ್ಚೆಡ್ ಸಿನಿಮಾ ತೆರೆಕಂಡಿತ್ತು. ಈ ಸಿನಿಮಾ ಚಿತ್ರಮಂದಿರಕ್ಕೆ ಬರುವ ಮೊದಲೇ ಬೆತ್ತಲೆ ದೃಶ್ಯ ಲೀಕ್ ಆಗಿ ವೈರಲ್ ಆಗಿತ್ತು. ನಟ ಆದಿಲ್ ಹುಸೇನ್ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ದೃಶ್ಯ ಇವತ್ತಿಗೂ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ.

  ಇಂದು ಟ್ವಿಟ್ಟರ್‌ನಲ್ಲಿ #BoycottRadhikaApte ಎಂದು ಟ್ರೆಂಡ್ ಆಗಿದೆ. ನೆಟ್ಟಿಗರು ರಾಧಿಕಾ ಆಪ್ಟೆಯ ಫೋಟೋ ಶೇರ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಂದೂ ಸಂಸ್ಕೃತಿಯನ್ನು ಅವಹೇಳನ ಮಾಡುತ್ತಿದ್ದಾರೆ ಕಿಡಿ ಕಾರುತ್ತಿದ್ದಾರೆ.

   Boycott Radhika Apte Trends on Twitter after her obsolesce Image from Parched Goes Viral

  ಅಂದಹಾಗೆ ರಾಧಿಕಾ ಇತ್ತೀಚಿಗೆ ನೀಡಿಡ ಸಂದರ್ಶನವೊಂದರಲ್ಲಿ ಲೀಕ್ ಆದ ಹಾಟ್ ದೃಶ್ಯದಿಂದ ಏನೆಲ್ಲ ಪರಿಣಾಮ ಬೀರಿತು ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದರು. 'ನನ್ನ ನಗ್ನ ವಿಡಿಯೋ ಕ್ಲಿಪ್ ಲೀಕ್ ಆದಾಗ ನಾನು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದೆ. ಆಗ ನಾನು ಕ್ಲೀನ್ ಶೆವೆನ್ ಚಿತ್ರದಲ್ಲಿ ನಟಿಸುತ್ತಿದ್ದೆ. ಅದು ನನಗೆ ತುಂಬಾ ಕೆಟ್ಟದಾಗಿ ಪರಿಣಾಮ ಬೀರಿತು. ನಾಲ್ಕು ದಿನಗಳು ಮನೆಯಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ನನ್ನ ಕಾರು ಚಾಲಕ, ಬಾಡಿಗಾರ್ಡ್ ಮತ್ತು ನನ್ನ ಸ್ಟೈಲಿಸ್ಟ್ ವಿಡಿಯೋಗಳನ್ನು ನೋಡಿ ನನ್ನನ್ನು ಗುರುತಿಸುತ್ತಿದ್ದರು' ಎಂದಿದ್ದರು.

  'ನನಗೆ ನಿಜವಾಗಿಯೂ ಈ ರೀತಿಯ ಪಾತ್ರ ಮಾಡಲು ಇಷ್ಟ. ಏಕೆಂದರೆ ನೀವು ಬಾಲಿವುಡ್‌ನಲ್ಲಿ ಇರುವಾಗ ನಿಮ್ಮ ದೇಹದೊಂದಿಗೆ ಹೇಗೆ ಇರಬೇಕೆಂದು ನಿರಂತರವಾಗಿ ಹೇಳಲಾಗುತ್ತದೆ. ನಾನು ಅದನ್ನೂ ಯಾವಾಗಲೂ ನಿರ್ವಹಿಸುತ್ತೇನೆ' ಎಂದು ಹೇಳಿದ್ದರು.

  ವಿವಾದಾತ್ಮಕ ಫೋಟೋ ಬಗ್ಗೆಯೂ ಮಾತನಾಡಿ ಅದು ಕೇವಲ ಬೇರ್ ಚರ್ಮದ ಸೆಲ್ಫಿ. ಆ ಫೋಟೋದಲ್ಲಿ ಇರುವುದು ನಾನಲ್ಲ ಎನ್ನುವುದು ಯಾರಾಗಾದರು ಗೊತ್ತಾಗುತ್ತದೆ. ಇಂಥವುಗಳನ್ನು ನಿರ್ಲಕ್ಷಿಸಿ ಎಂದು ಹೇಳಿದ್ದರು.

  ರಾಧಿಕಾ ಸದ್ಯ ವೆಬ್ ಸೀರಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಓಕೆ ಕಂಪ್ಯೂಟರ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜಾಕಿ ಶ್ರಾಫ್ ಮತ್ತು ವಿಜಯ್ ವರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಶಾಂತರಾಮ್ ವೆಬ್ ಸೀರಿಸ್ ನಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ರಾತ್ ಅಕೆಲಿ ಹೈ ಚಿತ್ರದಲ್ಲಿ ರಾಧಿಕಾ ಕೊನೆಯದಾಗಿ ನಟಿಸಿದ್ದರು.

  English summary
  Boycott Radhika Apte Trends on Twitter after her obsolesce Image from Parched Goes Viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X