twitter
    For Quick Alerts
    ALLOW NOTIFICATIONS  
    For Daily Alerts

    ಬಾಯ್ಕಾಟ್ ಶಾರುಖ್ ಖಾನ್ Vs ವಿ ಲವ್ ಶಾರುಖ್ ಖಾನ್

    By ರವೀಂದ್ರ ಕೊಟಕಿ
    |

    ಟ್ವಿಟರ್‌ನಲ್ಲಿ ಈಗ ಮತ್ತೆ ಶಾರುಖ್ ಖಾನ್ ಸುದ್ದಿಯಲ್ಲಿದ್ದಾರೆ. ಶಾರುಖ್ ವಿರುದ್ಧ ಮತ್ತು ಪರವಾಗಿ ಈಗ ಟ್ವಿಟರ್‌ನಲ್ಲಿ ದೊಡ್ಡ ಅಭಿಯಾನ ಶುರುವಾಗಿದೆ. ಇದಕ್ಕೆಲ್ಲ ಈಗ ಮೂಲ ಕಾರಣವಾಗಿರುವುದು ಹರಿಯಾಣದ ಬಿಜೆಪಿ ನಾಯಕ, ಐಟಿ ಸೆಲ್‌ನ ಸೆಕ್ರೆಟರಿ ಆಗಿರುವ ಅರುಣ್ ಯಾದವ್ ಅವರು ಮಾಡಿರುವ ಟ್ವೀಟ್ ಗಳು.

    ಮೊದಲನೇ ಟ್ವೀಟ್‌ನಲ್ಲಿ ಅವರು ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಚಿತ್ರಗಳನ್ನು ಬಾಯ್ಕಾಟ್ ಮಾಡುವಂತೆ ಕರೆ ನೀಡಿದ್ದಾರೆ. ಹಾಗೆ ಮತ್ತೊಂದು ಟ್ವೀಟ್‌ನಲ್ಲಿ ಅವರು ಮುಂಬರುವ ಶಾರುಖ್ ಖಾನ್ ಚಿತ್ರ 'ಪಟಾಣ್' ಚಿತ್ರವನ್ನು ತಾನು ಬಹಿಷ್ಕರಿಸುವುದಾಗಿಯು, ಇವರು ತಿನ್ನುವುದು ಭಾರತದ ಅನ್ನ, ಜೈ ಅನ್ನೋದು ಪಾಕಿಸ್ತಾನಕ್ಕೆ ಅಂತ ಆರೋಪಿಸಿ ಹಿಂದಿನ ಶಾರುಖ್-ಇಮ್ರಾನ್ ಖಾನ್ ಜೊತೆಯಲ್ಲಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

    Boycott Shah Rukh Khan vs We Love Shah Rukh Khan trends in twitter

    ಟ್ವಿಟ್ಟರ್ ನಲ್ಲಿ ದಿಢೀರ್ ಟ್ರೆಂಡ್ ಆದ 'ಬಾಯ್ಕಟ್ ಶಾರುಖ್': ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?ಟ್ವಿಟ್ಟರ್ ನಲ್ಲಿ ದಿಢೀರ್ ಟ್ರೆಂಡ್ ಆದ 'ಬಾಯ್ಕಟ್ ಶಾರುಖ್': ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?

    ಅರುಣ್ ಯಾದವ್‌ರ ಟ್ವೀಟ್‌ಗಳು

    ವೈರಲ್ ಆಗುತ್ತಿದ್ದಂತೆ ಟ್ವಿಟ್ಟರ್‌ನಲ್ಲಿ ಇದರ ಪರ ಮತ್ತು ವಿರುದ್ಧವಾಗಿ ದೊಡ್ಡ ಪ್ರಮಾಣದಲ್ಲಿ ಟ್ರೆಂಡಿಂಗ್ ಆಗ್ತಾಯಿದೆ. ಕೆಲವರು ಇದಕ್ಕೆ ಸಹಮತವನ್ನು ವ್ಯಕ್ತಪಡಿಸಿ ಶಾರುಖ್ ಚಿತ್ರಗಳನ್ನು ಶಾಶ್ವತವಾಗಿ ಬಹಿಷ್ಕರಿಸಬೇಕೆಂದು ಕರೆ ನೀಡುತ್ತಿದ್ದಾರೆ.

    Boycott Shah Rukh Khan vs We Love Shah Rukh Khan trends in twitter

    ವಿ ಲವ್ ಶಾರುಖ್ ಖಾನ್

    ಇದಕ್ಕೆ ಪ್ರತಿಯಾಗಿ ಶಾರುಖ್ ಅಭಿಮಾನಿಗಳು ಕೂಡ ಟ್ವಿಟರ್ ಅಭಿಯಾನವನ್ನು ಆರಂಭಿಸಿದ್ದು. ಇದರ ಹಿಂದೆ ಇಸ್ಲಾಮೋಫೋಬಿಯಾ ಕೆಲಸ ಮಾಡುತ್ತಿದ್ದು, ಶಾರುಖ್ ಅಪ್ಪಟ ಭಾರತೀಯ, ಭಾರತಕ್ಕಾಗಿ ಸದಾ ಚಿಂತಿಸುವ ವ್ಯಕ್ತಿಯಾಗಿದ್ದಾರೆ. ನಾವು ಸದಾ ಶಾರುಖ್ ಜೊತೆಯಲ್ಲಿ ನಿಲ್ಲುತ್ತೇವೆ ಅಂತ ಶಾರುಖ್ ಪರವಾಗಿ ಬ್ಯಾಟ್ ಬೀಸಿದ್ದು ಅಲ್ಲದೆ ಶಾರುಖ್- ಇಮ್ರಾನ್ ಫೋಟೋಗೆ ಪ್ರತಿಯಾಗಿ ಶಾರುಖ್-ಮೋದಿ ಫೋಟೋಗಳನ್ನು ಕೂಡ ಪ್ರದರ್ಶಿಸಿ ತಿರುಗೇಟು ನೀಡುತ್ತಿದ್ದಾರೆ.

    English summary
    Boycott Shah Rukh Khan vs We Love Shah Rukh Khan trends in twitter.
    Thursday, September 16, 2021, 16:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X