For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನ ದೀಪಿಕಾ - ರಣ್ವೀರ್ ಆರತಕ್ಷತೆಯಲ್ಲಿ ಭಾಗಿಯಾಗಿದ್ದ ಗಣ್ಯರು

  |
  DeepVeer Reception Bengaluru : ಬೆಂಗಳೂರಲ್ಲಿ ನಡೆದ ದೀಪ್ವೀರ್ ಆರತಕ್ಷತೆಗೆ ಸುಧಾ ಮೂರ್ತಿ ಭಾಗಿ

  ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣ್ವೀರ್ ಸಿಂಗ್ ಅವರ ಆರತಕ್ಷತೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ನಡೆದಿದೆ. ಲೀಲಾ ಪ್ಯಾಲೇಸ್ ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು ಭಾಗಿಯಾಗಿದ್ದರು.

  ನವೆಂಬರ್ 14 ಮತ್ತು 15 ರಂದು ಇಟಲಿಯ ಲೇಕ್ ಕೋಮೋದಲ್ಲಿ ವಿವಾಹವಾಗಿದ್ದ ಈ ಜೋಡಿ ಎರಡು ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ದೀಪಿಕಾ ಹುಟ್ಟೂರು ಬೆಂಗಳೂರು ಆಗಿರುವ ಕಾರಣ ಮೊದಲ ಆರತಕ್ಷತೆ ಕಾರ್ಯಕ್ರಮ ಇಲ್ಲಿ ನಡೆಯಿತು.

  ದೀಪಿಕಾ ಆರತಕ್ಷತೆಯಲ್ಲಿ ಇಂದ್ರಜೀತ್ ಭಾಗಿಯಾಗುತ್ತಿಲ್ಲ ಏಕೆ?

  ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್, ಪಿ ವಿ ಸಿಂಧು, ಉದ್ಯಮಿ ನಂದನ್ ನಿಲ್ಕೆಣಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಬಂದು ನವ ಜೋಡಿಗೆ ಶುಭ ಹಾರೈಸಿದರು. ಮುಂದೆ ಓದಿ...

  ಸುಧಾ ಮೂರ್ತಿ ಆಶೀರ್ವಾದ

  ಸುಧಾ ಮೂರ್ತಿ ಆಶೀರ್ವಾದ

  ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದರು. ದೀಪಿಕಾ ಹಾಗೂ ರಣ್ವೀರ್ ದಂಪತಿಗೆ ಮನಸಾರೆ ಆಶೀರ್ವಾದ ಮಾಡಿದರು. ಎಂದಿನಂತೆ ತಮ್ಮ ಸರಳ ಉಡುಪಿನ ಮೂಲಕ ಸುಧಾ ಮೂರ್ತಿ ಗಮನ ಸೆಳೆದರು.

  ಅನಿಲ್ ಕುಂಬ್ಳೆ ಶುಭಾಶಯ

  ಅನಿಲ್ ಕುಂಬ್ಳೆ ಶುಭಾಶಯ

  ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅನಿಲ್ ಕುಂಬ್ಳೆ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆ ಇತ್ತು. ಅದೇ ರೀತಿ ತಮ್ಮ ಪತ್ನಿ ಚೇತನಾ ಜೊತೆಗೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಣ್ವೀರ್ - ದೀಪಿಕಾ ಜೋಡಿಗೆ ದಂಪತಿ ಸಮೇತ ವಿಶ್ ಮಾಡಿದರು.

  ಬೆಂಗಳೂರಿನಲ್ಲಿ ರಣ್ವೀರ್ - ದೀಪಿಕಾ ಆರತಕ್ಷತೆ : ಕನ್ನಡದ ಯಾವ ಸ್ಟಾರ್ ಗಳು ಭಾಗಿ?

  ಪಿ ವಿ ಸಿಂಧು ವಿಶ್

  ಪಿ ವಿ ಸಿಂಧು ವಿಶ್

  ಭಾರತದ ಬ್ಯಾಟ್ ಮಿಟನ್ ಆಟಗಾರ್ತಿ ಪಿ ವಿ ಸಿಂಧು ಕೂಡ ನಿನ್ನೆ ನಡೆದ ಈ ಸುಂದರ ಸಮಾರಂಭದ ಆಕರ್ಷಣೆ ಆಗಿದ್ದರು. ವಿಶೇಷ ಅಂದರೆ, ಆರತಕ್ಷತೆ ಕಾರ್ಯಕ್ರಮಕ್ಕೆ ಬಂದ ಮೊದಲ ಸೆಲಿಬ್ರಿಟಿ ಇವರಾಗಿದ್ದರು. ಇನ್ನು ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಕೂಡ ಖ್ಯಾತ ಬ್ಯಾಟ್ ಮಿಟನ್ ಆಟಗಾರ ಆಗಿದ್ದಾರೆ.

  ಪತ್ನಿ ಜೊತೆಗೆ ಬಂದಿದ್ದ ವೆಂಕಟೇಶ್ ಪ್ರಸಾದ್

  ಪತ್ನಿ ಜೊತೆಗೆ ಬಂದಿದ್ದ ವೆಂಕಟೇಶ್ ಪ್ರಸಾದ್

  ಭಾರತ ಕ್ರಿಕೆಟ್ ತಂಡದ ಮತ್ತೊಬ್ಬ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಕೂಡ ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದರು. ತಮ್ಮ ಪತ್ನಿ ಜಯಂತಿ ಅವರೊಂದಿಗೆ ಕಾರ್ಯಕ್ರಮಕ್ಕೆ ಬಂದು 'ಬಾಜಿರಾವ್ ಮಸ್ತಾನಿ' ಜೋಡಿಗೆ ಅವರು ಶುಭಾಶಯ ತಿಳಿಸಿದರು.

  ದೀಪ್ವೀರ್ ಬೆಂಗಳೂರು ರಿಸೆಪ್ಷನ್: ರಾಯಲ್ ಲುಕ್ ನಲ್ಲಿ ಮಿಂಚಿದ ದಂಪತಿ

  ನಂದನ್ ನಿಲೇಕಣಿ ಭಾಗಿ

  ನಂದನ್ ನಿಲೇಕಣಿ ಭಾಗಿ

  ಉದ್ಯಮಿ ನಂದನ್ ನಿಲೇಕಣಿ ಅವರು ಪ್ರಕಾಶ್ ಪಡುಕೋಣೆ ಅವರಿಗೆ ಬಹಳ ವರ್ಷದಿಂದ ಪರಿಚಯ ಹೊಂದಿದ್ದಾರೆ. ಹೀಗಿದ್ದು, ತಮ್ಮ ಕುಟುಂಬದೊಂದಿಗೆ ದೀಪಿಕಾ - ರಣ್ವೀರ್ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿ ಹೊಸ ಜೋಡಿಯನ್ನು ಹರಸಿದರು.

  ದೀಪಿಕಾ ತಾಯಿ ಉಜ್ಜಲ

  ದೀಪಿಕಾ ತಾಯಿ ಉಜ್ಜಲ

  ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ದೀಪಿಕಾ ತಾಯಿ ಉಜ್ಜಲ ಪಡುಕೋಣೆ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದರು. ಮಗಳ ಮದುವೆಯ ಸಂತೋಷ ತಾಯಿಯ ಮುಖದಲ್ಲಿ ಕಾಣುತ್ತಿತ್ತು. ಮಗಳ ಆರತಕ್ಷತೆಯಲ್ಲಿ ಅಮ್ಮ ಕೂಡ ಮಿಂಚಿದರು.

  ಚಿತ್ರಪಟ: ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಕೊಂಕಣಿ ವಿವಾಹ

  ರಾಯಲ್ ಲುಕ್ ನಲ್ಲಿ ನವ ಜೋಡಿ

  ರಾಯಲ್ ಲುಕ್ ನಲ್ಲಿ ನವ ಜೋಡಿ

  ಗೋಲ್ಡನ್ ಬಣ್ಣದ ರೇಶ್ಮೆ ಸೀರೆ ತೊಟ್ಟು ದೀಪಿಕಾ ಮಿರಿ ಮಿರಿ ಮಿಂಚಿದ್ದರೆ, ಮದುಮಗ ರಣ್ವೀರ್ ಸಿಂಗ್ ಶೇರ್ವಾನಿ ತೊಟ್ಟು ಕಂಗೊಳಿಸಿದರು. ನಿನ್ನೆಗೆ ಬೆಂಗಳೂರಿನ ಕಾರ್ಯಕ್ರಮ ಮುಗಿದಿದ್ದು, ಮುಂಬೈ ನಲ್ಲಿ ಇದೇ ತಿಂಗಳ 28ರಂದು ಮತ್ತೊಂದು ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

  ಕಳೆದ ವಾರ ನಡೆದ ವಿವಾಹ

  ನವೆಂಬರ್ 14 ಮತ್ತು 15 ರಂದು ಇಟಲಿಯ ಲೇಕ್ ಕೋಮೋದಲ್ಲಿ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಮತ್ತು ಬಾಲಿವುಡ್ ನಟ ರಣ್ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೊಂಕಣಿ ಹಾಗೂ ಸಿಖ್ ಸಂಪ್ರದಾಯದಂತೆ ಕಲ್ಯಾಣೋತ್ಸವ ನಡೆದಿದೆ.

  English summary
  Check out pictures : Celebrities who attended Bollywood actress Deepika Padukone-Ranveer Singh's Royal look in Bengaluru Reception.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X