Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಿವುಡ್ ಸ್ಟಾರ್ ನಟನ ಪತ್ನಿ ವಿರುದ್ಧ ವಂಚನೆ ಪ್ರಕರಣ ದಾಖಲು
ಬಾಲಿವುಡ್‌ನ ಅತಿ ಬ್ಯುಸಿ ನಟ ನವಾಜುದ್ದೀನ್ ಸಿದ್ಧಿಕಿಯ ಪತ್ನಿ ಆಲಿಯಾ ಸಿದ್ಧಿಕಿಯ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ನವಾಜುದ್ದೀನ್ ಪತ್ನಿ ಆಲಿಯಾ ತಮಗೆ ಹಣ ನೀಡದೆ ವಂಚನೆ ಮಾಡಿದ್ದಾರೆ ಎಂದು ಮಂಜು ಘರ್‌ವಾಲ್ ಎಂಬುವರು ಮುಂಬೈನ ಅಂಬಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಮಾಂಸಹಾರ
ತ್ಯಜಿಸಿ
ವೀಗನ್
ಆಗಿ
ಬದಲಾದ
ಬಾಲಿವುಡ್
ಸೆಲೆಬ್ರೆಟಿಗಳು
ಇವರೇ!
ಆಲಿಯಾ ಸಿದ್ಧಿಕಿ 'ಹೋಲಿ ಕವ್' ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದು ಅದರ ಸಹ ನಿರ್ಮಾಪಕ ಆಗಿರುವ ಮಂಜು ಘರವಾಲ್ ತಮಗೆ ಆಲಿಯಾ ಸಿದ್ಧಿಕಿಯಿಂದ 31 ಲಕ್ಷ ರುಪಾಯಿ ಹಣ ಬರಬೇಕಿದೆ. ಆದರೆ ಆಲಿಯಾ ಹಣ ನೀಡಲು ನಿರಾಕರಿಸಿದ್ದಾರೆ. ತಮ್ಮ ಜೊತೆ ಈ ಬಗ್ಗೆ ಜಗಳ ಮಾಡಿ, ಹಣ ನೀಡುವುದಿಲ್ಲ ಎಂದಿದ್ದಾರೆ ಎಂದು ಮಂಜು ಘರ್‌ವಾಲ್ ದೂರಿದ್ದಾರೆ.

ಆಲಿಯಾ ನನಗೆ 2005ರಿಂದಲೂ ಪರಿಚಯ
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಮಂಜು ಘರ್‌ವಾಲ್, ''ನಾನು ಹಾಗೂ ಆಲಿಯಾ 2005ರಿಂದಲೂ ಗೆಳೆಯರು. ಮೊದಲಿನಿಂದಲೂ ಆಲಿಯಾಗೆ ಸಿನಿಮಾ ನಿರ್ಮಾಣ ಮಾಡಬೇಕು ಎಂಬ ಕನಸಿತ್ತು. ಆರ್ಥಿಕವಾಗಿ ಸಾಧ್ಯವಾದಾಗ ಸಿನಿಮಾ ನಿರ್ಮಾಣ ಮಾಡುವ ಯೋಚನೆಯಲ್ಲಿ ಇಬ್ಬರೂ ಇದ್ದೆವು. ಸಿನಿಮಾ ನಿರ್ಮಾಣ ಮಾಡುವ ಸಮಯ ಬಂದಾಗ ನಾನು ಕ್ರಿಯೇಟಿವ್ ವಿಷಯದ ಮೇಲುಸ್ತುವಾರಿ ವಹಿಸಿಕೊಂಡೆ ಆಲಿಯಾ ಹಣಕಾಸಿನ ವಿಷಯದ ಮೇಲುಸ್ತುವಾರಿ ವಹಿಸಿಕೊಂಡರು'' ಎಂದು ಪ್ರಕರಣ ವಿವರಿಸಿದ್ದಾರೆ ಮಂಜು.

ಚೆಕ್‌ಗಳೆಲ್ಲ ಬೌನ್ಸ್ ಆಗಿವೆ: ಮಂಜು ಆರೋಪ
''ನಾನು 'ಹೋಲಿ ಕವ್' ಸಿನಿಮಾಕ್ಕೆ ಕಲಾವಿದರನ್ನು, ತಂತ್ರಜ್ಞರನ್ನು ಆರಿಸಿ ಅವರ ಡೇಟ್ಸ್ ಫೈನಲ್ ಮಾಡಿ ಅವರಿಗೆ ಚೆಕ್ ನೀಡಿದೆ. ಆದರೆ ಆಲಿಯಾ ನೀಡಿದ ಚೆಕ್‌ಗಳೆಲ್ಲವೂ ಒಂದೊಂದಾಗಿ ಬೌನ್ಸ್ ಆದವು. ಸಿನಿಮಾಕ್ಕೆ ಹಾಕಿದ ಬಂಡವಾಳದ ಜೊತೆಗೆ ನಾನು ನನ್ನ ಕೈಯಿಂದಲೂ ಹಣ ಹಾಕಿ ಕಲಾವಿದರಿಗೆ ಹಣ ನೀಡಿದೆ. ಆದರೆ ಆಲಿಯಾ ಬಳಿ ಹಣ ಕೇಳಿದಾಗ ಆಕೆ ಕೊಡುವುದಿಲ್ಲ ಎಂದರು'' ಎಂದಿದ್ದಾರೆ ಮಂಜು.

ತಂದೆಯಿಂದಲೂ 30 ಲಕ್ಷ ಪಡೆದಿದ್ದಾಳೆ: ಮಂಜು ಆರೋಪ
''ನನ್ನ ತಂದೆ ತಮ್ಮ ಉಜ್ಜೈನಿಯಲ್ಲಿನ ತಮ್ಮ ಮನೆ ಮಾರಿದರು. ಆ ವಿಷಯ ಆಲಿಯಾಗೆ ಗೊತ್ತಿತ್ತು, ನನ್ನ ತಂದೆಯನ್ನು ಒಪ್ಪಿಸಿ ಅವರಿಂದಲೂ 30 ಲಕ್ಷ ಹಣವನ್ನು ಆಲಿಯಾ ಪಡೆದಳು. ಆದರೆ ಈಗ ಆ ಹಣವನ್ನೂ ಆಕೆ ನೀಡುತ್ತಿಲ್ಲ. ಬಹಳ ಒತ್ತಾಯದ ಬಳಿಕ 22 ಲಕ್ಷ ಹಣ ವಾಪಸ್ ನೀಡಿದ್ದಾಳೆ. ಇನ್ನೂ 31 ಲಕ್ಷ ರುಪಾಯಿ ಹಣ ವಾಪಸ್ ಬರಬೇಕಿದೆ. ಅಲ್ಲದೆ 'ಹೋಲಿ ಕವ್' ಸಿನಿಮಾ ಇರುವ ಹಾರ್ಡ್ ಡಿಸ್ಕ್ ಅನ್ನು ಆಲಿಯಾಳೆ ಇಟ್ಟುಕೊಂಡಿದ್ದಾಳೆ'' ಎಂದಿದ್ದಾರೆ ಮಂಜು ಘರ್‌ವಾಲ್.

ಮುಂದಿನ ತಿಂಗಳು ಸಿನಿಮಾ ಬಿಡುಗಡೆ
''ನಾನು ಪೊಲೀಸರಿಗೆ ದೂರು ನೀಡುವ ಜೊತೆಗೆ ಪಶ್ಚಿಮ ಭಾರತ ಸಿನಿ ಕಾರ್ಮಿಕರ ಒಕ್ಕೂಟಕ್ಕೂ ದೂರು ನೀಡಿದ್ದೇನೆ. ಆದರೆ ಆಲಿಯಾ ಮೆಡಿಕಲ್ ದಾಖಲೆಯೊಂದನ್ನು ಪೊಲೀಸರಿಗೆ ಸಲ್ಲಿಸಿ ಉತ್ತರ ನೀಡಲು ಕಾಲಾವಕಾಶ ಕೇಳಿದ್ದಾಳೆ. 'ಹೋಲಿ ಕವ್' ಸಿನಿಮಾವು ಆಗಸ್ಟ್‌ನಲ್ಲಿ ಬಿಡುಗಡೆ ಆಗಲಿದ್ದು, ನಾನು ನನ್ನ ಹಣ ಪಡೆಯಲು ಹಾಗೂ ಸಿನಿಮಾದಲ್ಲಿ 'ಕ್ರಿಯೇಟಿವ್ ಮತ್ತು ಸಹ ನಿರ್ಮಾಪಕ' ಎಂದು ಕ್ರೆಡಿಟ್ ಪಡೆಯಲು ಹೋರಾಟಕ್ಕೆ ನಿಂತಿದ್ದೇನೆ'' ಎಂದಿದ್ದಾರೆ. 'ಹೋಲಿ ಕವ್' ಸಿನಿಮಾವನ್ನು ಸಾಯಿ ಕಬೀರ್ ನಿರ್ದೇಶನ ಮಾಡಿದ್ದಾರೆ. ಸಂಜಯ್ ಮಿಶ್ರಾ ಮತ್ತು ತಿಮಾಂಶು ಧುಲಿಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆಲಿಯಾ ಸಿದ್ಧಿಕಿ ಹಾಗೂ ನವಾಜುದ್ದೀನ್ ಸಿದ್ದಿಕಿ ಒಟ್ಟಿಗಿಲ್ಲ. ನವಾಜುದ್ದೀನ್ ಸಿದ್ದಿಕಿ ವಿಚ್ಛೇಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಆದರೆ ಆಲಿಯಾ ವಿಚ್ಛೇಧನಕ್ಕೆ ಒಪ್ಪಿಲ್ಲ, ಪ್ರಕರಣ ನ್ಯಾಯಾಲಯದಲ್ಲಿದೆ.