For Quick Alerts
  ALLOW NOTIFICATIONS  
  For Daily Alerts

  ಅತ್ತೆಯ ಸಾಧನೆಯನ್ನು ಮನಸಾರೆ ಹೊಗಳಿದ ಅಕ್ಷಯ್ ಕುಮಾರ್

  |

  ನಟ ಅಕ್ಷಯ್‌ಕುಮಾರ್ ಪಕ್ಕಾ ಫ್ಯಾಮಿಲಿ ಮ್ಯಾನ್. ತಮ್ಮ ಕುಟುಂಬವನ್ನು ಬಹುವಾಗಿ ಪ್ರೀತಿಸುತ್ತಾರೆ ಅಕ್ಷಯ್. ತಮ್ಮ ತಂದೆ-ತಾಯಿಗಳಂತೆಯೇ ಪತ್ನಿಯ ತಂದೆತಾಯಿಯನ್ನು ಬಹು ಗೌರವದಿಂದ ಕಾಣುವ ಜೊತೆಗೆ ಬಹುವಾಗಿ ಹಚ್ಚಿಕೊಂಡಿದ್ದಾರೆ ಅಕ್ಷಯ್.

  ಇದೀಗ ಅಕ್ಷಯ್ ಕುಮಾರ್ ತಮ್ಮ ಅತ್ತೆ ಡಿಂಪಲ್ ಕಪಾಡಿಯಾ ಅನ್ನು ಮನಸಾರೆ ಹೊಗಳಿದ್ದಾರೆ. ಡಿಂಪಲ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಬರೆದಿದ್ದಾರೆ.

  ವಿಶ್ವದ ಬೆಸ್ಟ್ ನಿರ್ದೇಶಕರಲ್ಲಿ ಒಬ್ಬರಾದ ಕ್ರಿಸ್ಟೋಫರ್ ನೋಲನ್ ಅವರ ಹೊಸ ಸಿನಿಮಾ ಟೆನೆಟ್‌ನಲ್ಲಿ ನಟಿ ಡಿಂಪಲ್ ಕಪಾಡಿಯಾ ನಟಿಸಿದ್ದಾರೆ. ನೋಲನ್ ಸಿನಿಮಾದಲ್ಲಿ ನಟಿಸಿದ ಮೊದಲ ಭಾರತೀಯ ನಟಿ ಎಂಬ ಹಿರಿಮೆಗೆ ಡಿಂಪಲ್ ಪಾತ್ರವಾಗಿದ್ದಾರೆ.

  ಇಷ್ಟೇ ಅಲ್ಲ ವಿಷಯ, ವಿಶ್ವದ ಅತ್ಯುತ್ತಮ ನಿರ್ದೇಶಕ ಡಿಂಪಲ್ ಕಪಾಡಿಯಾಗೆ ಪತ್ರವೊಂದನ್ನು ಬರೆದು, ತಮ್ಮ ಸಿನಿಮಾದಲ್ಲಿ ನಟಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ನೋಲನ್ ತನ್ನ ಕೈಯಾರೆ ಬರೆದಿರುವ ಚಿತ್ರವನ್ನು ಹಂಚಿಕೊಂಡಿರುವ ಅಕ್ಷಯ್ ಕುಮಾರ್, ಅತ್ತೆಯ ಬಗ್ಗೆ ಮಧುರವಾದ ಮಾತುಗಳನ್ನು ಬರೆದಿದ್ದಾರೆ.

  ನೋಲನ್ ಬರೆದಿರುವ ಪತ್ರದಲ್ಲಿ, 'ಡಿಯರ್ ಕಪಾಡಿಯಾ, ಏನೆಂದು ಹೇಳಲಿ ನಾನು. ನೀವು ಪ್ರಿಯಾಳ ಪಾತ್ರಕ್ಕೆ ಜೀವ ತುಂಬಿದ್ದನ್ನು ಕಂಡು ನಾನು ವಿಸ್ಮಿತನಾಗಿದ್ದೇನೆ. ಇಡೀಯ ವಿಶ್ವವೇ ನಿಮ್ಮ ಪಾತ್ರ ಕಂಡು ಸಂತಸಗೊಂಡಿದೆ. ನಿಮ್ಮ ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ. ನಿಮ್ಮ ಶ್ರಮ, ಪ್ರತಿಭೆಯನ್ನು ಟೆನೆಟ್ ಸಿನಿಮಾಕ್ಕೆ ಧಾರೆ ಎರೆದಿದ್ದಕ್ಕೆ ಧನ್ಯವಾದ' ಎಂದು ಬರೆದಿದ್ದಾರೆ ನೋಲನ್.

  ಈ ಪತ್ರ ಹಂಚಿಕೊಂಡಿರುವ ಅಕ್ಷಯ್ ಕುಮಾರ್, 'ಅವರ ಅಳಿಯನಾಗಿದ್ದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಕ್ರಿಸ್ಟೋಫರ್ ನೋಲನ್ ಈ ಹೃದಯತುಂಬಿದ ಪತ್ರವನ್ನು ನನ್ನ ತಾಯಿಯವರಿಗೆ (ಅತ್ತೆ) ಕಳಿಸಿಕೊಟ್ಟಿದ್ದಾರೆ. ನಾನು ಆಕೆಯ ಸ್ಥಾನದಲ್ಲಿದ್ದಿದ್ದರೆ ಸಂತೋಶದಿಂದ ಏನು ಮಾಡಬೇಕು ಎಂಬುದು ಸಹ ತೋಚುತ್ತಿರಲಿಲ್ಲ. ಟೆನೆಟ್ ಸಿನಿಮಾದಲ್ಲಿ ಆಕೆಯ ನಟನೆ ನೋಡಿ ನನಗೆ ಈಗ ಹಾಗೆಯೇ ಆಗುತ್ತಿದೆ. ನನ್ನ ಹೆಮ್ಮೆಯ ತಾಯಿ' ಎಂದು ಅಕ್ಷಯ್ ಬರೆದುಕೊಂಡಿದ್ದಾರೆ.

  ದುಬಾರಿ ಗೆ ನಾಯಕಿಯಾದ ಭರಾಟೆ ಬೇಡಗಿ | Filmibeat Kannada

  ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಟೆನೆಟ್ ಸಿನಿಮಾ ನಿನ್ನೆಯಷ್ಟೆ ಭಾರತದಲ್ಲಿ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಡಿಂಪಲ್ ಕಪಾಡಿಯಾ, ಪ್ರಿಯಾ ಹೆಸರಿನ ಶಸ್ತ್ರಾಸ್ತ್ರ ಪೂರೈಕೆದಾರಳ ಪಾತ್ರ ನಿರ್ವಹಿಸಿದ್ದಾಳೆ.

  English summary
  Akshay Kumar shares director Christopher Nolan's letter to his mother in law Dimple Kapadiya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X