For Quick Alerts
  ALLOW NOTIFICATIONS  
  For Daily Alerts

  ಕೊರೊನಾಗೆ ಬೆದರಿದ ಬಾಲಿವುಡ್ ಮಂದಿ: ಪ್ಯಾರಿಸ್‌ಗೆ ಹೋಗೊಲ್ಲ ಎಂದ ದೀಪಿಕಾ

  |

  ಜಗತ್ತಿನೆಲ್ಲೆಡೆ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಭೀತಿ ನಮ್ಮ ಚಿತ್ರರಂಗಕ್ಕೂ ತಟ್ಟಿದೆ. ವಿದೇಶಗಳಲ್ಲಿ ನಡೆಯಬೇಕಿದ್ದ ಶೂಟಿಂಗ್‌ಗಳನ್ನು ರದ್ದುಗೊಳಿಸಲಾಗಿದೆ. ಕನ್ನಡದ 'ಯುವರತ್ನ', 'ರಾಬರ್ಟ್', 'ಅರ್ಜುನ್ ಗೌಡ' ಚಿತ್ರಗಳ ವಿದೇಶ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ.

  ಅತ್ತ ಬಾಲಿವುಡ್ ಕೂಡ ಕೊರೊನಾದಿಂದ ಕಂಗಾಲಾಗಿದೆ. ಒಂದಲ್ಲ ಒಂದು ದೃಶ್ಯಕ್ಕಾಗಿ ವಿದೇಶಕ್ಕೆ ಹಾರುವ ಬಾಲಿವುಡ್ ಮಂದಿ ಕಂಗೆಟ್ಟಿದ್ದಾರೆ. ಹೆಚ್ಚಿನ ಬಾಲಿವುಡ್ ಸಿನಿಮಾಗಳು ಯುರೋಪ್‌ನಲ್ಲಿ ಚಿತ್ರೀಕರಣವಾಗುತ್ತವೆ. ಮದುವೆಗಳಿಗೂ ವಿದೇಶಕ್ಕೆ ಹಾರುವುದು ಹೊಸ ಸಂಪ್ರದಾಯವಾಗಿದೆ. ಆದರೆ ಕೊರೊನಾ ವೈರಸ್ ಭೀತಿ ಅವರನ್ನು ಹಿಂದೇಟು ಹಾಕುವಂತೆ ಮಾಡುತ್ತಿದೆ.

  ಇಲ್ಲಿ ದೊಡ್ಡೋರ ಮಕ್ಕಳದ್ದೇ ಕಾರುಬಾರು: ಬಾಲಿವುಡ್ ಮೇಲೆ ತಾಪ್ಸಿ ಸಿಟ್ಟುಇಲ್ಲಿ ದೊಡ್ಡೋರ ಮಕ್ಕಳದ್ದೇ ಕಾರುಬಾರು: ಬಾಲಿವುಡ್ ಮೇಲೆ ತಾಪ್ಸಿ ಸಿಟ್ಟು

  ಪ್ಯಾರಿಸ್ ಟ್ರಿಪ್ ಕ್ಯಾನ್ಸಲ್

  ಪ್ಯಾರಿಸ್ ಟ್ರಿಪ್ ಕ್ಯಾನ್ಸಲ್

  ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ತಮ್ಮ ಉದ್ದೇಶಿತ ಪ್ರವಾಸವನ್ನು ದೀಪಿಕಾ ಪಡುಕೋಣೆ ರದ್ದುಗೊಳಿಸಿದ್ದಾರೆ. ಇದಕ್ಕೆ ಕಾರಣ ಕೊರೊನಾ ವೈರಸ್ ಹಾವಳಿ. 'ಪ್ರಸ್ತುತ ನಡೆಯುತ್ತಿರುವ ಪ್ಯಾರಿಸ್ ಫ್ಯಾಷನ್ ವೀಕ್‌ನ ಲೂಯಿಸ್ ವೂಯಿಟನ್‌ನ ಎಫ್‌ಡಬ್ಲ್ಯೂ 2020ಯಲ್ಲಿ ಭಾಗವಹಿಸಲು ದೀಪಿಕಾ ಪಡುಕೋಣೆ ಪ್ಯಾರಿಸ್‌ಗೆ ತೆರಳಬೇಕಿತ್ತು. ಆದರೆ ಫ್ರಾನ್ಸ್‌ನಲ್ಲಿ ಕೊರೊನಾ ವೈರಸ್ ಮತ್ತೊಂದು ಹಂತಕ್ಕೆ ಮುಟ್ಟಿರುವುದರಿಂದ ಅವರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ' ಎಂದು ದೀಪಿಕಾರ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

  ವರುಣ್ ಧವನ್-ನತಾಶಾ ದಲಾಲ್ ಮದುವೆ ಶಿಫ್ಟ್?

  ವರುಣ್ ಧವನ್-ನತಾಶಾ ದಲಾಲ್ ಮದುವೆ ಶಿಫ್ಟ್?

  ಬಾಲಿವುಡ್ ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ಅವರ ಮದುವೆ ಹಲವು ದಿನಗಳಿಂದ ಸುದ್ದಿಯಲ್ಲಿತ್ತು. ಈ ಜೋಡಿ ಥಾಯ್ಲೆಂಡ್‌ನಲ್ಲಿ ಸಪ್ತಪದಿ ತುಳಿಯಲಿದೆ ಎಂದು ಹೇಳಲಾಗಿತ್ತು. ಅವರ ಕುಟುಂಬಗಳು ಸ್ಥಳವನ್ನೂ ನಿಗದಿಪಡಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ಥಾಯ್ಲೆಂಡ್‌ನಲ್ಲಿಯೂ ಕೊರೊನಾ ಭೀತಿ ಜೋರಾಗಿದೆ. ಹೀಗಾಗಿ ಅವರ ಮದುವೆಯ ಸ್ಥಳವನ್ನು ಬದಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಬಾಲ್ಯ ಸ್ನೇಹಿತರಾದ ವರುಣ್ ಮತ್ತು ನತಾಶಾ 2020ರ ಮೇ ತಿಂಗಳಲ್ಲಿ ಮದುವೆಯಾಗಲು ನಿಶ್ಚಯಿಸಿದ್ದಾರಂತೆ.

  'ವಿವಾಹಿತ ಪುರುಷರ ಸಹವಾಸ ಮಾಡಬೇಡಿ': ಸಲಹೆ ನೀಡಿದ ಖ್ಯಾತ ನಟಿ ನೀನಾ ಗುಪ್ತ'ವಿವಾಹಿತ ಪುರುಷರ ಸಹವಾಸ ಮಾಡಬೇಡಿ': ಸಲಹೆ ನೀಡಿದ ಖ್ಯಾತ ನಟಿ ನೀನಾ ಗುಪ್ತ

  ನೋ ಸೆಲ್ಫಿ ಎಂದ ಸನ್ನಿ ಲಿಯೋನ್

  ನೋ ಸೆಲ್ಫಿ ಎಂದ ಸನ್ನಿ ಲಿಯೋನ್

  ಕೊರೊನಾ ವೈರಸ್ ಬಂದ ಸಂದರ್ಭದಿಂದಲೂ ಸಾರ್ವಜನಿಕ ಸ್ಥಳದಲ್ಲಿ ಓಡಾಡುವಾಗ ಮಾಸ್ಕ್ ಧರಿಸುತ್ತಿರುವ ಸನ್ನಿ ಲಿಯೋನ್, ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಿ ಎಂಬ ಜಾಗೃತಿ ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಅವರ ಜತೆ ಸೆಲ್ಫಿ ತೆಗೆದುಕೊಂಡು ಬಂದ ಅಭಿಮಾನಿಯೊಬ್ಬರಿಗೆ ಸನ್ನಿ, ನೋ ಸೆಲ್ಫಿ ಎಂದಿದ್ದು ಸುದ್ದಿಯಾಗಿತ್ತು. ಇದನ್ನು ಸನ್ನಿ ಸಮರ್ಥಿಸಿಕೊಂಡಿದ್ದಾರೆ. ನಾನು ನನ್ನನ್ನು, ನನ್ನ ಮೂರು ಮಕ್ಕಳು, ಪತಿ ಹಾಗೂ ನನ್ನ ಮನೆಯಲ್ಲಿನ ಜನರು, ನನ್ನ ಚಾಲಕ ಎಲ್ಲರನ್ನೂ ಸುರಕ್ಷಿತವಾಗಿರಿಸಬೇಕು. ನನ್ನನ್ನು ನಾನು ರಕ್ಷಿಸಿಕೊಳ್ಳುವುದು ಹುಚ್ಚುತನ ಎಂದುಕೊಂಡರೆ, ನಿಮ್ಮನ್ನು ನೀವೂ ರಕ್ಷಿಸಿಕೊಳ್ಳಬೇಕು ಎನ್ನುವುದನ್ನು ಮರೆಯಬಾರದು' ಎಂದು ಸನ್ನಿ ಹೇಳಿದ್ದಾರೆ.

  ಬಹಿರಂಗವಾಗಿ ಅಕ್ಷಯ್ ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ರಣ್ವೀರ್ ಸಿಂಗ್ಬಹಿರಂಗವಾಗಿ ಅಕ್ಷಯ್ ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ರಣ್ವೀರ್ ಸಿಂಗ್

  ಹಾಲಿವುಡ್‌ಗೂ ತಟ್ಟಿತು ಕೊರೊನಾ ಏಟು

  ಹಾಲಿವುಡ್‌ಗೂ ತಟ್ಟಿತು ಕೊರೊನಾ ಏಟು

  ಕೊರೊನಾ ವೈರಸ್ ಈಗಾಗಲೇ ಚಿತ್ರೋದ್ಯಮಕ್ಕೆ ಸಾಕಷ್ಟು ಹೊಡೆತ ನೀಡಿದೆ. ವಿದೇಶದಲ್ಲಿ ಚಿತ್ರೀಕರಣ ಮಾಡಲು ಉದ್ದೇಶಿಸಿದ್ದ ಅನೇಕ ಚಿತ್ರಗಳು ಪ್ರವಾಸ ರದ್ದುಗೊಳಿಸಿವೆ. ಕೆಲವು ಚಿತ್ರಗಳು ವಿದೇಶದಲ್ಲಿಯೇ ಚಿತ್ರೀಕರಣ ಮಾಡುವುದು ಅನಿವಾರ್ಯವಾಗಿರುವುದರಿಂದ ಅನಿರ್ದಿಷ್ಟಾವಧಿವರೆಗೆ ಮುಂದೂಡುವ ಅಥವಾ ಕೊರೊನಾ ಭೀತಿ ತಟ್ಟದ ದೇಶಗಳನ್ನು ಆಯ್ದುಕೊಳ್ಳುವ ಎರಡೇ ಆಯ್ಕೆ ಹೊಂದಿವೆ. ಹಾಲಿವುಡ್‌ಗೂ ಇದರಿಂದ ಆರ್ಥಿಕ ಸಂಕಷ್ಟ ತಟ್ಟಿದೆ. ಜಪಾನ್, ಇಟಲಿ, ದಕ್ಷಿಣ ಕೊರಿಯಾ, ಮುಂತಾದೆಡೆ ಚಿತ್ರಮಂದಿರಗಳು ಮುಚ್ಚಿರುವುದರಿಂದ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿಲ್ಲ.

  English summary
  Coronavirus outbreaks caused concern in Bollywood as many movies abroad shootings were cancelled. Deepika Padukone cancels her Paris visit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X