For Quick Alerts
  ALLOW NOTIFICATIONS  
  For Daily Alerts

  ಕಂಗನಾ ಗೆ ಹಿನ್ನಡೆ: ಕಟ್ಟಡ ಕೆಡವುವ ನೊಟೀಸ್‌ಗೆ ತಡೆ ನೀಡಲು ಕೋರ್ಟ್ ನಕಾರ

  |

  ಸೆಪ್ಟೆಂಬರ್ ತಿಂಗಳಿನಲ್ಲಿ ನಟಿ ಕಂಗನಾ ರಣೌತ್‌ಗೆ ಸೇರಿದ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು 'ನಿಯಮ ಬಾಹಿರ ನಿರ್ಮಾಣ'ದ ಕಾರಣ ನೀಡಿ ಧ್ವಂಸ ಮಾಡಿದ್ದರು. ಆದರೆ ಕೋರ್ಟ್ ಮೆಟ್ಟಿಲೇರದ್ದ ಕಂಗನಾ ಗೆ 'ನೈತಿಕ ಗೆಲುವು' ದೊರೆತಿತ್ತು.

  ಆದರೆ ಈಗ ಕಂಗನಾ ರ ಮತ್ತೊಂದು ಕಟ್ಟಡಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಕಂಗನಾ ರಣೌತ್‌ ಗೆ ಹಿನ್ನಡೆ ಆಗಿದೆ.

  ಮುಂಬೈನ ಖಾರ್ ಪ್ರದೇಶದಲ್ಲಿ ಕಂಗನಾಗೆ ದೊಡ್ಡ ಅಪಾರ್ಟ್‌ಮೆಂಟ್ ಒಂದರಲ್ಲಿ ಮೂರು ಫ್ಲ್ಯಾಟ್ ಇದೆ. ಆದರೆ ಕಂಗನಾ ಈ ಮೂರು ಫ್ಲ್ಯಾಟ್ ಅನ್ನು ಒಂದು ಫ್ಲ್ಯಾಟ್ ಆಗಿ ಪರಿವರ್ತಿಸಿದ್ದಾರೆ. ಇದು ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಕಣ್ಣು ಕೆಂಪಗೆ ಮಾಡಿದೆ.

  ಕಂಗನಾ ರು ಮೂರು ಫ್ಲ್ಯಾಟ್ ಅನ್ನು ಒಂದೇ ಫ್ಲ್ಯಾಟ್ ಆಗಿ ಬದಲಾಯಿಸಿರುವುದು ನಿಯಮ ಬಾಹಿರವಾಗಿದ್ದು, ಆ ಫ್ಲ್ಯಾಟ್‌ನ ಕೆಲವು ಭಾಗಗಳನ್ನು ಒಡೆಯಬೇಕಾಗಿದೆ ಎಂದು ಬಿಎಂಸಿಯು ಕಂಗನಾ ಗೆ ನೊಟೀಸ್ ನೀಡಿತ್ತು. ಈ ನೊಟೀಸ್ ವಿರುದ್ಧ ಕಂಗನಾ ಕೋರ್ಟ್ ಮೆಟ್ಟಿಲೇರಿದ್ದರು.

  ಪ್ರಕರಣದ ವಿಚಾರಣೆ ನಡೆಸಿದ ಬಾಂಬೆಯ ಸಿವಿಲ್ ಕೋರ್ಟ್, ಬಿಎಂಸಿಯ ನೊಟೀಸ್‌ಗೆ ತಡೆ ನೀಡಲು ನಿರಾಕರಿಸಿದೆ. 'ಕಂಗನಾರ ಫ್ಯ್ಲಾಟ್‌ನ ಬದಲಾವಣೆಯಲ್ಲಿ ಕೆಲವು ಗಂಭೀರ ನಿಯಮ ಉಲ್ಲಂಘನೆಗಳು ಆಗಿವೆ' ಎಂದು ನ್ಯಾಯಾಧೀಶ ಎಲ್.ಎಸ್.ಚೌಹಾಣ್ ಹೇಳಿದ್ದಾರೆ.

  Shivaraj Kumar and Rakshith Shetty awarded Dadasaheb Phalke Award south 2020 | Filmibeat kannada

  ಕಂಗನಾ ರೌಣೌತ್ ತಮ್ಮ ಫ್ಯ್ಲಾಟ್‌ಗಳನ್ನು ಆಲ್ಟರ್ ಮಾಡಬೇಕಾದರೆ ಕಾಮನ್ ಪ್ಯಾಸೇಜ್, ಕೇಬಲ್ ಏರಿಯಾ, ಪೈಪ್ ಏರಿಯಾಗಳನ್ನು ಮುಚ್ಚಿಹಾಕಿದ್ದಾರೆ. ಇವು ಮಾತ್ರವೇ ಅಲ್ಲದೆ ಇನ್ನೂ ಕೆಲವು ಉಲ್ಲಂಘನೆಗಳನ್ನು ಅವರು ಮಾಡಿದ್ದಾರೆ ಎನ್ನಲಾಗಿದೆ.

  English summary
  Court Calls Out Kangana Ranaut For Merging Her Three Mumbai Flats: Says 'Its A Grave Violation Of Plan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X