For Quick Alerts
  ALLOW NOTIFICATIONS  
  For Daily Alerts

  ದಯವಿಟ್ಟು ನನ್ನ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿ; 'ದಂಗಲ್' ನಟಿ ಝೈರಾ ವಾಸಿಂ ಮನವಿ

  |

  ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾ ಮೂಲಕ ಚಿತ್ರಪ್ರೇಕ್ಷಕರ ಗಮನ ಸೆಳೆದ ನಟಿ ಝೈರಾ ವಾಸಿಂ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ 2019ರಲ್ಲಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ಝೈರಾ ಇದೀಗ ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿಕೊಂಡಿದ್ದಾರೆ.

  ದಯವಿಟ್ಟು ನನ್ನ ಫೋಟೋಗಳನ್ನೆಲ್ಲ ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿ ಎಂದು ಕೇಳಿಕೊಂಡಿದ್ದಾರೆ. ಕಳೆದ ವರ್ಷವೇ ಹೇಳಿದ್ದೆ ಆದರೀಗ ಮತ್ತದನ್ನೇ ಹೇಳುತ್ತಿದ್ದೀನಿ ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿರುವ ಝೈರಾ ಮತ್ತೊಂದು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಮುಂದೆ ಓದಿ...

  ಮಿಡತೆ ದಾಳಿಗೆ ಕುರಾನ್ ಉಕ್ತಿಯ ಉಲ್ಲೇಖ: ಮಾಜಿ ನಟಿ ಝೈರಾ ವಾಸಿಮ್ ವಿರುದ್ಧ ಆಕ್ರೋಶ

  ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿ

  ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿ

  'ಇದು ವರೆಗೂ ನೀವು ತೋರಿದ ಪ್ರೀತಿಗೆ ನಾನು ಧನ್ಯ. ಯಾವಾಗಲು ಬೆಂಬಲವಾಗಿ ನಿಂತಿದ್ದ ನಿಮಗೆಲ್ಲ ನನ್ನ ಕಡೆಯಿಂದ ಕೃತಜ್ಞತೆ. ಇಷ್ಟೆಲ್ಲ ಕಾಳಜಿ, ಪ್ರೀತಿ ತೋರಿದ ನಿಮ್ಮಿಂದ ನನಗೆ ಸಹಾಯವಾಗಬೇಕಿದೆ. ಅದೇನೆಂದರೆ ನಿಮ್ಮ ಬಳಿ ಇರುವ ನನ್ನ ಫೋಟೋಗಳನ್ನು ಮತ್ತು ಫ್ಯಾನ್ಸ್ ಪೇಜ್ ಗಳಲ್ಲಿರುವ ಫೋಟೋಗಳನ್ನು ಡಿಲೀಟ್ ಮಾಡಿ' ಎಂದಿದ್ದಾರೆ.

  ಸಹಾಯ ಮಾಡುತ್ತೀರಿ ಎಂದು ಭಾವಿಸಿದ್ದೇನೆ

  ಸಹಾಯ ಮಾಡುತ್ತೀರಿ ಎಂದು ಭಾವಿಸಿದ್ದೇನೆ

  'ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕುವುದು ಅಸಾಧ್ಯ ಎನ್ನುವುದು ಗೊತ್ತು. ಆದರೆ ನಿಮ್ಮ ಪೇಜ್ ಗಳಲ್ಲಿ ನನ್ನ ಫೋಟೋಗಳನ್ನು ಶೇರ್ ಮಾಡುವುದನ್ನು ನಿಲ್ಲಿಸಬಹುದು. ನೀವು ನನ್ನನ್ನು ಬೆಂಬಲಿಸಿದಂತೆಯೇ ನೀವು ನನಗೆ ಸಹಾಯ ಮಾಡುತ್ತೀರಿ ಎಂದು ನಾನು ಭಾವಿಸಿದ್ದೀನಿ' ಎಂದು ಹೇಳಿದ್ದಾರೆ.

  ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ Rana Daggubati | Filmibeat Kannada
  'ದಿ ಸ್ಕೈ ಈಸ್ ಪಿಂಕ್' ಝೈರಾ ಅಭಿನಯದ ಕೊನೆಯ ಸಿನಿಮಾ

  'ದಿ ಸ್ಕೈ ಈಸ್ ಪಿಂಕ್' ಝೈರಾ ಅಭಿನಯದ ಕೊನೆಯ ಸಿನಿಮಾ

  ಕಳೆದ ವರ್ಷ ಝೈರಾ ವಾಸಿಂ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಮೂಲಕ ಅಭಿಮಾನಿಗಳಿಗೆ ಮತ್ತು ಸಿನಿಮಾರಂಗಕ್ಕೆ ಶಾಕ್ ನೀಡಿದ್ದರು. ಚಿತ್ರರಂಗ ತನ್ನ ನಂಬಿಕೆ ಮತ್ತು ಧರ್ಮಕ್ಕೆ ಅಡ್ಡಿಪಡಿಸಿಸುತ್ತಿದೆ, ಹಾಗಾಗಿ ಸಿನಿಮಾರಂಗದಲ್ಲಿ ಸಂತೋಷವಾಗಿಲ್ಲ ಎಂದು ಹೇಳಿ ಬಣ್ಣದ ಲೋಕದಿಂದ ದೂರ ಸರಿದಿರುವುದಾಗಿ ಹೇಳಿದ್ದರು. ಝೈರಾ, ದಂಗಲ್ ಸಿನಿಮಾ ಬಳಿಕ ಸೀಕ್ರೆಟ್ ಸೂಪರ್ ಸ್ಟಾರ್ ಮತ್ತು ದಿ ಸ್ಕೈ ಈಸ್ ಪಿಂಕ್ ಸಿನಿಮಾದಲ್ಲಿ ನಟಿಸಿದ್ದಾರೆ. ಬಳಿಕ ಮತ್ತೆ ಬಣ್ಣಹಚ್ಚಿಲ್ಲ.

  English summary
  Dangal Actress Zaira Wasim asks to fans remove her pictures from fanpage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X