»   » ದಂಗಲ್ ಪೈರಸಿ ಭಾರತದಿಂದ ಪಾಕಿಸ್ತಾನಕ್ಕೆ ವಯಾ ದುಬೈ!

ದಂಗಲ್ ಪೈರಸಿ ಭಾರತದಿಂದ ಪಾಕಿಸ್ತಾನಕ್ಕೆ ವಯಾ ದುಬೈ!

Posted By:
Subscribe to Filmibeat Kannada

ನಟ ಅಮೀರ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ದಂಗಲ್ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಜತೆಗೆ ಬಿಡುಗಡೆಗೂ ಮುನ್ನವೇ ಆನ್ ಲೈನ್ ನಲ್ಲಿ ಸೋರಿಕೆಯಾದ ಚಿತ್ರಗಳ ಸಾಲಿಗೆ ದಂಗಲ್ ಕೂಡಾ ಸೇರಿಕೊಂಡಿದೆ.

ದಂಗಲ್ ಸಿನಿಮಾ ಆನ್ ಲೈನ್ ನಲ್ಲಿ ಲೀಕ್ ಆದ ಸುದ್ದಿ ಹೊಸದೇನಲ್ಲ, ಆದರೆ, ಬಹುನಿರೀಕ್ಷಿತ ಸಿನಿಮಾಗಳು ಇದೇ ರೀತಿ ಆನ್ ಲೈನ್ ನಲ್ಲಿ ಸೋರಿಕೆಯಾಗುತ್ತಿದ್ದರೂ ಪೈರಸಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಇನ್ನೂ ಕಂಡು ಕೊಂಡಿಲ್ಲ.

‘Dangal’ Leaks On Facebook by Pakistani National in Dubai: CBFC Chief

ಬಾಲಿವುಡ್ ಚಿತ್ರಗಳನ್ನು ನೋಡಲು ಬಯಸುವ ಪಾಕಿಸ್ತಾನಿಗಳಿಗೆ ದುಬೈ ಮೂಲಕ ಸಿನಿಮಾಗಳು ಪೈರಸಿ ಮೂಲಕ ಆಮದು-ರಫ್ತು ಆಗುತ್ತಿದೆ ಎಂದು ಸೆನ್ಸಾರ್ ಮಂಡಳಿ ಮುಖ್ಯಸ್ಥ ಪಹ್ಲಾಜ್ ನಿಹಾಲನಿ ಹೇಳಿದ್ದಾರೆ. ದುಬೈ ಈಗ ಪೈರಸಿ ರಾಜಧಾನಿಯಾಗಿಬಿಟ್ಟಿದೆ. ಸೆನ್ಸಾರ್ ಮಂಡಳಿ ವಿಷಯದಲ್ಲಿ ಏನು ಮಾಡಲು ಅಗುತ್ತಿಲ್ಲ. ಪ್ರತಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಯೂನಿಟ್ ಪೈರಸಿ ಬಗ್ಗೆ ಎಚ್ಚರಿಕೆವಹಿಸುವುದು ಒಳ್ಳೆಯದು ಎಂದಿದ್ದಾರೆ.

ದುಬೈ ನಿವಾಸಿಯಾಗಿರುವ ಪಾಕಿಸ್ತಾನಿ ಮೂಲದ ವ್ಯಕ್ತಿಯೊಬ್ಬ ದಂಗಲ್ ಇಡೀ ಸಿನಿಮಾವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದ. ಚಿತ್ರ ತಂಡ ಈಗ ಪೈರೆಟೆಡ್ ಲಿಂಕ್ ಗಳನ್ನು ತೆಗೆದು ಹಾಕಿದೆ. ಅಪನಗದೀಕರಣದಿಂದ ತೊಂದರೆ ಅನುಭವಿಸುತ್ತಿರುವ ಬಾಲಿವುಡ್ ನಿರ್ಮಾಪಕರು ಈಗ ಮತ್ತೊಮ್ಮೆ ಪೈರಸಿ ಹಾವಳಿಗೆ ತುತ್ತಾಗುತ್ತಿದ್ದಾರೆ.

English summary
Dangal, Bollywood’s latest blockbuster, has been leaked online, that too by a Pakistani national residing in Dubai, via his Facebook page. the censor board has nothing to do with piracy. The menace needs to be checked at the post-production stage of films said CBFC chief Pahlaj Nihalani

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada