»   » ಚೀನಾದಲ್ಲಿ ಹೊಸ ದಾಖಲೆ ಬರೆದ ಅಮೀರ್ ಖಾನ್

ಚೀನಾದಲ್ಲಿ ಹೊಸ ದಾಖಲೆ ಬರೆದ ಅಮೀರ್ ಖಾನ್

Posted By:
Subscribe to Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾ ರಿಲೀಸ್ ಆಗಿ ವರ್ಷ ಕಳೆದಿದೆ. ಈಗಲೂ ಕೂಡ ದಾಖಲೆ ಮೇಲೆ ದಾಖಲೆಗಳನ್ನ ತನ್ನ ಹೆಸರಿನಲ್ಲಿದೆ ಬರೆದುಕೊಳ್ಳುತ್ತಿದೆ ಈ ಸೂಪರ್ ಹಿಟ್ ಸಿನಿಮಾ.

ಭಾರತೀಯ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿರುವ ದಂಗಲ್, ಚೀನಾದಲ್ಲಿ ನಂಬರ್ ವನ್ ಸಿನಿಮಾ ಎನಿಸಿಕೊಂಡಿದೆ. ಚೀನಾದ 'ಐಎಂಡಿಬಿ' (IMDB) ಮಾಡಿರುವ ಸಮೀಕ್ಷೆಯಲ್ಲಿ ದಂಗಲ್ ಚಿತ್ರಕ್ಕೆ ಚೀನಾ ಪ್ರೇಕ್ಷಕರು ಮನಸೋತಿದ್ದಾರೆ.

ರಾಜಮೌಳಿ 'ಮಹಾಭಾರತ'ಕ್ಕೆ ಶಾಕ್ ಕೊಟ್ಟ ಅಮೀರ್ 'ಮಹಾಭಾರತ'.!

Dangal movie no 1 in annual survey Chinese imdb

ಚೀನಾದಲ್ಲಿ ಹೆಚ್ಚು ವೀಕ್ಷಕರು 'ದಂಗಲ್' ಸಿನಿಮಾ ನೋಡಿದ್ದು, ತುಂಬ ಇಷ್ಟ ಪಟ್ಟಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಚೀನಾ ಬಾಕ್ಸ್ ಆಫೀಸ್ ನಲ್ಲೂ 'ದಂಗಲ್' ಅತ್ಯುತ್ತಮ ಬಿಸಿನೆಸ್ ಮಾಡಿದೆ. ಕೇವಲ ಚೀನಾ ಮಾತ್ರವಲ್ಲದೇ, ಕೆನೆಡಾ, ಯುನೆಟೆಡ್ ಕಿಂಗ್ ಡಮ್, ಆಸ್ಟ್ರೇಲಿಯಾ, ಯುನೆಟೆಡ್ ಅರಬ್ ದೇಶಗಳು ಸೇರಿದಂತೆ ಹಲವು ಕಡೆ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.

ಇದಕ್ಕು ಮುಂಚೆ ಅಮೀರ್ ಖಾನ್ ಅಭಿನಯದ 'ಪಿಕೆ', 'ಧೂಮ್-3' ಮತ್ತು '3ಈಡಿಯೆಟ್' ಚಿತ್ರಗಳು ಹೆಚ್ಚು ಗಳಿಕೆ ಕಂಡಿದ್ದವು. ಅಮೀರ್ ಖಾನ್ ಹೊರತು ಪಡಿಸಿದ್ರೆ, ಭಾರತದ ಬೇರೆ ನಟರು ಚೀನಾದಲ್ಲಿ ಅಬ್ಬರಿಸಲು ಕಷ್ಟ. ಭಾರತದ ಸಿನಿಮಾ ಅಂದ್ರೆ ಅಮೀರ್ ಖಾನ್ ಎನ್ನುವ ಮಟ್ಟಿಗೆ ಚೀನಾದಲ್ಲಿ ಹವಾ ಇದೆ.

2016ನೇ ವರ್ಷದ ಡಿಸೆಂಬರ್ 23 ರಂದು 'ದಂಗಲ್' ಸಿನಿಮಾ ತೆರೆಕಂಡಿತ್ತು. ನಿತಿಶ್ ತಿವಾರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಭಾರತದ ಕುಸ್ತಿಪಟು ಮಹಾವೀರ್ ಸಿಂಗ್ ಪೊಗತ್ ಅವರ ಜೀವನಾಧರಿತ ಕಥೆಯನ್ನ ಈ ಚಿತ್ರ ಹೊಂದಿದೆ.

English summary
After a record-breaking run in India, Dangal continues to top charts in China too. Superstar Aamir Khan's blockbuster hit film 'Dangal' has been ranked number one in an annual survey conducted by Chinese IMDB.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X