For Quick Alerts
  ALLOW NOTIFICATIONS  
  For Daily Alerts

  ಕತ್ರೀನಾ ಕೈಫ್ ಮೇಲೆ ಕಳ್ಳತನದ ಆರೋಪ ಹೊರಿಸಿದ ದೀಪಿಕಾ ಪಡುಕೋಣೆ!

  |

  ಖ್ಯಾತ ಬಾಲಿವುಡ್ ನಟಿ ಕತ್ರೀನಾ ಕೈಫ್ ಮೇಲೆ ಕಳ್ಳತನದ ಆರೋಪ ಹೊರಿಸಿದ್ದಾರೆ ನಟಿ, ಕನ್ನಡತಿ ದೀಪಿಕಾ ಪಡುಕೋಣೆ.

  ಹೌದು, ನಟಿ ದೀಪಿಕಾ ಪಡುಕೋಣೆ ಅವರ ಐಡಿಯಾವನ್ನು ಕತ್ರೀನಾ ಕೈಫ್ ಅವರು ಕದ್ದಿದ್ದಾರಂತೆ. ಹೀಗೆಂದು ದೀಪಿಕಾ ಪಡುಕೋಣೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  ವಿಡಿಯೋ: ಕೆಲಸದವರಿಗೆ ರಜೆ ನೀಡಿ ತಾನೇ ಕೆಲಸದಳಾದ ಕತ್ರೀನಾವಿಡಿಯೋ: ಕೆಲಸದವರಿಗೆ ರಜೆ ನೀಡಿ ತಾನೇ ಕೆಲಸದಳಾದ ಕತ್ರೀನಾ

  ಕತ್ರೀನಾ ಕೈಫ್ ಎರಡು ದಿನದ ಹಿಂದೆ ತಾವು ಪಾತ್ರೆತೊಳೆಯುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದರು. ಪಾತ್ರೆ ತೊಳೆಯುವಾಗ ನೀರು ಉಳಿಸುವುದು ಹೇಗೆ ಎಂಬುದನ್ನು ಅವರು ಹೇಳಿಕೊಟ್ಟಿದ್ದರು.

  ದೀಪಿಕಾ ಪಡುಕೋಣೆ ಮಾದಕ ಚಿತ್ರ ನೋಡಿ ಪಾಕಿಸ್ತಾನಿ ಯುವಕ ಹೇಳಿದ್ದೇನು?ದೀಪಿಕಾ ಪಡುಕೋಣೆ ಮಾದಕ ಚಿತ್ರ ನೋಡಿ ಪಾಕಿಸ್ತಾನಿ ಯುವಕ ಹೇಳಿದ್ದೇನು?

  ಕತ್ರೀನಾ ಕೈಫ್ ಅವರ ಈ ವಿಡಿಯೋವನ್ನು ರೀಟ್ವೀಟ್ ಮಾಡಿರುವ ದೀಪಿಕಾ ಪಡುಕೋಣೆ, 'ಸೀಸನ್ 1 : ಎಪಿಸೋಡ್ 5 ರದ್ದಾಗಿದೆ. ಏಕೆಂದರೆ ಕತ್ರೀನಾ ಕೈಫ್ ನನ್ನ ಐಡಿಯಾವನ್ನು ಕದ್ದುಬಿಟ್ಟಿದ್ದಾರೆ' ಎಂದು ಹೇಳಿದ್ದಾರೆ.

  ದಿನವೂ ಇನ್‌ಸ್ಟಾಗ್ರಾಂ ಸ್ಟೋರಿ ಹಾಕುತ್ತಿರುವ ದೀಪಿಕಾ

  ದಿನವೂ ಇನ್‌ಸ್ಟಾಗ್ರಾಂ ಸ್ಟೋರಿ ಹಾಕುತ್ತಿರುವ ದೀಪಿಕಾ

  ಕೊರೊನಾ ಭೀತಿಯಿಂದ ಭಾರತ ಲಾಕ್‌ಡೌನ್ ಆದಾಗಿನಿಂದಲೂ ದೀಪಿಕಾ ಪಡುಕೋಣೆ ಮನೆಯಲ್ಲಿಯೇ ಇದ್ದು, ಪ್ರತಿದಿನ ಏನಾದರೊಂದು ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅದನ್ನು ಅವರು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

  ಹಲವು ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ

  ಹಲವು ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ

  ಫೇಸ್ ಮಸಾಜ್, ಜ್ಯೂಸ್ ಮಾಡುವುದು, ಟ್ರೇಡ್‌ ಮೀಲ್ ರನ್, ಐಸ್‌ಕ್ರೀಂ ಮಾಡುವುದು ಹೀಗೆ ಪ್ರತಿದಿನ ಒಂದು ಹೊಸ ಕೆಲಸ ಮಾಡಿ ಅದನ್ನು ಹಂಚಿಕೊಳ್ಳುತ್ತಿದ್ದಾರೆ.

  ಕತ್ರೀನಾ ಕೈಫ್ ಹಂಚಿಕೊಂಡಿದ್ದರು ವಿಡಿಯೋ

  ಕತ್ರೀನಾ ಕೈಫ್ ಹಂಚಿಕೊಂಡಿದ್ದರು ವಿಡಿಯೋ

  ಅದರಂತೆ ಇಂದು ಪಾತ್ರೆ ತೊಳೆಯುವ ವಿಡಿಯೋ ಹಂಚಿಕೊಳ್ಳುವದರಲ್ಲಿದ್ದ ದೀಪಿಕಾ ಪಡುಕೋಣೆ ಅದನ್ನು ಕತ್ರೀನ ಕೈಫ್ ಮಾಡಿರುವ ಕಾರಣ ಇಂದಿನ ವಿಡಿಯೋ ರದ್ದಾಗಿದೆ ಎಂದು ಅವರು ತಮಾಷೆಯಾಗಿ ಹೇಳಿದ್ದಾರೆ.

  ವೈದ್ಯರಿಗೆ ಧನ್ಯವಾದ ತಿಳಿಸಿದ ದೀಪಿಕಾ ಪಡುಕೋಣೆ

  ವೈದ್ಯರಿಗೆ ಧನ್ಯವಾದ ತಿಳಿಸಿದ ದೀಪಿಕಾ ಪಡುಕೋಣೆ

  ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮುಂಬೈ ನ ತಮ್ಮ ಮನೆಯಲ್ಲಿ ಹೋಂ ಕ್ವಾರೆಂಟೈನ್ ಆಗಿದ್ದಾರೆ. ಮೊನ್ನೆ ಜನತಾ ಕರ್ಪ್ಯೂ ದಿನ ಅವರು ತಮ್ಮ ಅಪಾರ್ಟ್‌ಮೆಂಟ್ ನ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿದ್ದರು.

  English summary
  Actress Deepika Padukone accused that Katrina Kaif stoled her idea of washing dishes, and she said today's video story has been canceled.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X