»   » ಬಾಲಿವುಡ್ ಕ್ವೀನ್ ದೀಪಿಕಾಗೆ ಬರ್ಥಡೇ ವಿಶ್

ಬಾಲಿವುಡ್ ಕ್ವೀನ್ ದೀಪಿಕಾಗೆ ಬರ್ಥಡೇ ವಿಶ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. 28ನೇ ಹುಟ್ಟುಹಬ್ಬ ಆಚರಿಸುತ್ತಿರುವ ದೀಪಿಕಾ ಈಗ 100 ಕೋಟಿ ರು ಗಳಿಕೆ ಚಿತ್ರಗಳ ಮಹಾರಾಣಿ. ಕಳೆದ ವರ್ಷ ರೇಸ್ 2, ಚೆನ್ನೈ ಎಕ್ಸ್ ಪ್ರೆಸ್, ರಾಮ್ ಲೀಲ ಹಾಗೂ ಯೇ ಜವಾನಿ ಹೇ ದಿವಾನಿ ಚಿತ್ರಗಳು ದೀಪಿಕಾಗೆ ವಿಭಿನ್ನ ಪಾತ್ರಗಳನ್ನು ನೀಡಿದ್ದಲ್ಲದೆ ಗಲ್ಲಾ ಪೆಟ್ಟಿಗೆಯಲ್ಲೂ ಭಾರಿ ಸದ್ದು ಮಾಡಿ ಬಾಕ್ಸ್ ಆಫೀಸ್ ಕ್ವೀನ್ ಆಗುವಂತೆ ಮಾಡಿದವು.

  ಹೊಸ ವರ್ಷದಲ್ಲಿ ಶಾರುಖ್ ಜತೆ ಹ್ಯಾಪಿ ನ್ಯೂ ಇಯರ್ ಹೇಳಲು ಹೊರಟಿರುವ ದೀಪಿಕಾಗೆ ಈ ವರ್ಷವೂ ಶುಭದಾಯಕವಾಗುವ ಎಲ್ಲಾ ಲಕ್ಷಣಗಳಿವೆ. ಖ್ಯಾತ ಜ್ಯೋತಿಷಿ ಬೇಜಾನ್ ದಾರುವಾಲ ಕೂಡಾ 2013ರ ಯಶಸ್ಸು 2014ರ ಮಧ್ಯಭಾಗದ ತನಕ ದೀಪಿಕಾ ಬೆನ್ನ ಹಿಂದೆ ಸುತ್ತಲಿದೆ ಎಂದಿದ್ದಾರೆ.

  ಬಹು ತಾರಾಗಣದ ಹಿಂದಿ ಚಿತ್ರ ಹ್ಯಾಪಿ ನ್ಯೂ ಇಯರ್ ಮುಂದಿನ ದೀಪಾವಳಿಗೆ ರಿಲೀಸ್ ಆಗಬಹುದು. ಇದಕ್ಕೂ ಮುನ್ನ ಫೈಂಡಿಂಗ್ ಫ್ಯಾನಿ ಫರ್ನಾಂಡೀಸ್, ರಜನಿಕಾಂತ್ ಜತೆ ಕೋಚಾಡಿಯಾನ್ ಚಿತ್ರಗಳು ಕಾದಿವೆ.

  ಖ್ಯಾತ ಬಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಮುದ್ದಿನ ಮಗಳಾದ ದೀಪಿಕಾ ಬಣ್ಣದ ಲೋಕಕ್ಕೆ ಕಾಲಿರಿಸಿದ್ದು ಉಪೇಂದ್ರ ಜೋಡಿಯಾಗಿ ಐಶ್ವರ್ಯ ಚಿತ್ರದ ಮೂಲಕ ಎಂಬುದನ್ನು ಮರೆಯುವಂತಿಲ್ಲ. ನಂತರ ಕಿಂಗ್ ಖಾನ್ ಜತೆ ಓಂ ಶಾಂತಿ ಓಂನಲ್ಲಿ ಮಿಂಚಿದ ದೀಪಿಕಾ ಹಿಂತಿರುಗಿ ನೋಡಿಲ್ಲ.

  ಭಾರತದ 'ಸೂಪರ್ ಮಾಡೆಲ್' ಆಗಿ ಮೆರೆದ ದೀಪಿಕಾ ಇಂದಿಗೂ ಬೇಡಿಕೆಯ ರೂಪದರ್ಶಿ. ಮಾಡೆಲ್ ಪ್ರಪಂಚಕ್ಕೆ ಕಾಲಿಟ್ಟವರು ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಮಾಮೂಲಿ ಎಂಬ ಮಾತು ನಿಜವಾದರೂ ಈ ರೀತಿ ಎಂಟ್ರಿ ಕೊಟ್ಟ ಕನ್ಯೆಯರು ಕ್ಲಿಕ್ ಆಗಿದ್ದು ತುಂಬಾ ಕಮ್ಮಿ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನೀಳ ಕಾಲ್ಗಳ ಚೆಲುವೆ ದೀಪಿಕಾಗೆ ಶುಭ ಹಾರೈಸುತ್ತಾ ಆಕೆ ಜೀವನದತ್ತ ಒಂದಷ್ಟು ಇಣುಕು ನೋಟ

  ಆದರೆ, ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಂತೆ ಆಕೆಗೆ ಹೈಸ್ಕೂಲ್ ಓದುತ್ತಿದ್ದ ದಿನಗಳಲ್ಲೇ ದೀಪಿಕಾ ಪಡುಕೋಣೆ ಬಾಡ್ಮಿಂಟನ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಬ್ಯಾಡ್ ಮಿಟನ್ ಕ್ರೀಡೆಯಲ್ಲಿ ರಾಜ್ಯಮಟ್ಟದ ಆಟಗಾರ್ತಿಯಾಗಿದ್ದರು. ಆದರೆ, ಓದಿನ ಕಡೆ ಹೆಚ್ಚಿನ ಆಸಕ್ತಿ ತೋರಿಸಿದ ಕಾರಣ ಅವರು ತಂದೆಯಂತೆ ರಾಷ್ಟ್ರಮಟ್ಟದ ಬಾಡ್ಮಿಂಟನ್ ತಾರೆಯಾಗಲು ಸಾಧ್ಯವಾಗಲಿಲ್ಲ.

  ಜಾಹೀರಾತು : ಕತ್ರೀನಾಗಿಂತ ದೀಪಿಕಾ ರೇಟು ಜಾಸ್ತಿ

  ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆಗೆ ಲಕ್ ತಿರುಗಿದೆ ಕಣ್ರಿ. ಕಿಂಗ್ ಖಾನ್ ಶಾರುಖ್ ಜತೆ ಚೆನ್ನೈ ಎಕ್ಸ್ ಪ್ರೆಸ್ ಏರಿದ್ದೇ ಬಂತು. ಈಗ ದೀಪಿಕಾ ಪಡುಕೋಣೆ ಬ್ರ್ಯಾಂಡ್ ಮೌಲ್ಯ ಏರಿಕೆಯಾಗಿದೆ. ಸೋಪಿನ ಜಾಹೀರಾತೊಂದಕ್ಕೆ ದೀಪಿಕಾ ಬರೋಬ್ಬರಿ 6 ಕೋಟಿ ರು ಕೇಳಿದ್ದಾಳಂತೆ. ಈ ಮುಂಚೆ ಅದೇ ಉತ್ಪನ್ನದ ಜಾಹೀರಾತಿಗಾಗಿ ಕತ್ರೀನಾ ಕೈಫ್ ಪಡೆದಿದ್ದು 4 ಕೋಟಿ ರು ಮಾತ್ರವಂತೆ.

  ಫಾರ್ ಹಿಮ್ ಮ್ಯಾಗಜೀನ್ ನಲ್ಲಿ

  ಫಾರ್ ಹಿಮ್ ಮ್ಯಾಗಜೀನ್ ಎನ್ನುವ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಈ ಮಾಸಿಕ ನಂತರದ ದಿನಗಳಲ್ಲಿ FHM ಎಂದು ಬದಲಾಯಿತು. ಈ ಮ್ಯಾಗಜೀನ್ 1985ರಲ್ಲಿ ಆರಂಭವಾಗಿತ್ತು. ಈ ಪತ್ರಿಕೆ ಸಮೀಕ್ಷೆಯಲ್ಲಿ ಕತ್ರೀನಾ ಕೈಫ್ ಅಪ್ರತಿಮ ಸುಂದರಿ ಎನಿಸಿದರೆ 3ನೇ ಸ್ಥಾನದಲ್ಲಿ ದೀಪಿಕಾ ಇದ್ದಾರೆ. ಏಳನೇ ಸ್ಥಾನದಲ್ಲಿ ಸೋನಂ ಕಪೂರ್, ಎಂಟನೇ ಸ್ಥಾನದಲ್ಲಿ ಕರಿನಾ ಕಪೂರ್ ಮತ್ತು ಹತ್ತನೇ ಸ್ಥಾನದಲ್ಲಿ ಲಾರಾ ದತ್ ಇದ್ದಾರೆ.

  ಮದ್ವೆ ಬಗ್ಗೆ ದೀಪಿಕಾ ಪಡುಕೋಣೆ

  ಈಗೆಲ್ಲ ಕಾಲ ಬದಲಾಗಿದೆ. ಭಾರತದ ಸಮಾಜದಲ್ಲಿ ಪೋಷಕರು ತಮ್ಮ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳ ಮದುವೆ ವಿಷಯದಲ್ಲಿ ಹೆಚ್ಚಿನ ಕಾಳಜಿ ಹಾಗೂ ಸ್ವತಂತ್ರ ನೀಡುತ್ತಿದ್ದಾರೆ. ಮಕ್ಕಳ ಸುಖದ ಮುಂದೆ, ಜಾತಿ, ಧರ್ಮ, ಮತಗಳು ಲೆಕ್ಕಕ್ಕೆ ಬರುವುದಿಲ್ಲ' ಎಂದಿದ್ದಾರೆ.

  ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು

  ಹುಡುಗಿಯರಿಗೆ ಸ್ವಾತಂತ್ರ್ಯ ಸಿಕ್ಕ ತಕ್ಷಣ ಅದು ಸ್ವೇಚ್ಛೆಯಾಗಬಾರದು, ಅಂತರ್ ಜಾತೀಯ, ಅಂತರ್ ಮತೀಯ ಮದುವೆಗಳು ಲೆಕ್ಕವಿಲ್ಲದಷ್ಟು ನಡೆದಿವೆ. ಆದರೆ, ಅದರಲ್ಲಿ ಎಷ್ಟು ಯಶಸ್ವಿಯಾಗಿ ಆದರ್ಶ ದಾಂಪತ್ಯಕ್ಕೆ ನಾಂದಿ ಹಾಡಿದೆ ಎಂಬುದನ್ನು ಕೂಡಾ ಗಮನಿಸಬೇಕಾಗುತ್ತದೆ.

  ಐಷಾರಾಮಿ ಬಂಗಲೆ

  ಮುಂಬೈನ ಪ್ರಭಾದೇವಿ ಎಂಬಲ್ಲಿ 16 ಕೋಟಿ ರು ಮೌಲ್ಯ ದ BeauMonde Towers ನಲ್ಲಿ ಐಷಾರಾಮಿ ಬಂಗಲೆಯನ್ನು ದೀಪಿಕಾ ಹೊಂದಿದ್ದಾರೆ. ಇದು ಹಳೆ ಗೆಳೆಯ ಸಿದ್ದಾರ್ಥ್ ಮಲ್ಯ ನೀಡಿದ ಉಡುಗೊರೆ.

  ಇದರ ಜತೆಗೆ ದೀಪಿಕಾ ಮೂರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಬಿಎಂಡಬ್ಲ್ಯೂ ನೆಚ್ಚಿನ ವಾಹನ.

  ದೀಪಿಕಾ ಹುಟ್ಟೂರು

  ದೀಪಿಕಾ ಹುಟ್ಟಿದ್ದು ಡೆನ್ಮಾರ್ಕಿನ ಕೂಪನ್ ಹೇಗನ್ ನಲ್ಲಿ ಬೆಳೆದಿದ್ದು ಬೆಂಗಳೂರಿನಲ್ಲಿ ವೃತ್ತಿ ಕಂಡು ಕೊಂಡಿದ್ದು ಮುಂಬೈನಲ್ಲಿ. ಮನೆ ಮಾತು ಕೊಂಕಣಿ, ಕನ್ನಡ ಮಾತನಾಡಲು ಅಲ್ಪಸ್ವಲ್ಪ ಗೊತ್ತಿದೆ. ಹಿಂದಿ, ಇಂಗ್ಲೀಷ್ ನಿರರ್ಗಳ.

  ದೀಪಿಕಾ ಹವ್ಯಾಸ

  ಮಾಡೆಲಿಂಗ್, ಬಾಡ್ಮಿಂಟನ್ ನಂತರ 2009ರಲ್ಲಿ ದಿನಪತ್ರಿಕೆಯೊಂದರ ಸಾಪ್ತಾಹಿಕ ಪ್ರತಿಯಲ್ಲಿ ಲೈಫ್ ಸ್ಟೈಲ್ ವಿಭಾಗದಲ್ಲಿ ದೀಪಿಕಾ ಅಂಕಣಗಾರ್ತಿಯಾಗಿದ್ದರು.

  ನಟನೆ ಕಲಿಕೆ

  ಮಾಡೆಲಿಂಗ್ ಕ್ಷೇತ್ರದಲ್ಲಿ ಪಳಗಿದ್ದರೂ ದೀಪಿಕಾ ನಟನೆ ವಿಭಾಗದಲ್ಲಿ ಪರಿಣತಿ ಹೊಂದಲು ಅನುಪಮ್ ಖೇರ್ ಶಾಲೆ ಹಾಗೂ ನೃತ್ಯಕ್ಕಾಗಿ ಶೈಮಾಕ್ ದವಾರ್ ಶಾಲೆಯ ವಿದ್ಯಾರ್ಥಿನಿಯಾಗಿದ್ದರು.

  ಗ್ಲಾಮರ್ ಗೊಂಬೆ

  ಕಾಕ್ ಟೈಲ್ ಚಿತ್ರ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತುಂಡುಡುಗೆಯಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಮಿತಿಯೊಳಗೆ ಸುಂದರವಾಗಿ ಕಾಣಿಸಿಕೊಳ್ಳುವ ರೀತಿ ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

  ಮ್ತಾಗಜೀನ್ ಸುಂದರಿ

  ಮ್ಯಾಕ್ಸಿಮ್ ಸೇರಿದಂತೆ ಹತ್ತು ಹಲವು ಪ್ರಮುಖ ಪತ್ರಿಕೆ, ನಿಯತಕಾಲಿಕೆಗಳ ಮುಖಪುಟವನ್ನು ದೀಪಿಕಾ ಪಡುಕೋಣೆ ಅಲಂಕರಿಸಿದ್ದಾರೆ.

  ಬೆಕ್ಕಿನ ನಡಿಗೆ ಮರೆತಿಲ್ಲ

  ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು ಸ್ಟಾರ್ ಪಟ್ಟ ಪಡೆದ ಮೇಲೂ ದೀಪಿಕಾ ಪಡುಕೋಣೆ ಅವರು ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ನಗರಗಳ ವಸ್ತ್ರ ವಿನ್ಯಾಸಗಾರರ ಆಹ್ವಾನದ ಮೇರೆಗೆ ಬೆಕ್ಕಿನ ನಡಿಗೆ ಇಟ್ಟು ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡಿದ್ದಾರೆ

  ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು

  ದೀಪಿಕಾಗೆ ಹುಟ್ಟುಹಬ್ಬದ ಶುಭ ಹಾರೈಕೆ

  English summary
  Deepika Padukone, one of the most successful actress in Bollywood and celebrates her 28th birthday today. The beautiful lady had a wonderful year in 2013 with her films Race 2, Chennai Express and Ram Leela, Yeh Jawaani Hai Deewani did Grand business at the box office.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more