For Quick Alerts
  ALLOW NOTIFICATIONS  
  For Daily Alerts

  Breaking: ಎನ್‌ಸಿಬಿ ವಿಚಾರಣೆಗೆ ಹಾಜರಾದ ನಟಿ ದೀಪಿಕಾ ಪಡುಕೋಣೆ

  |

  ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ಎನ್‌ಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದ ಹಿನ್ನೆಲೆ ನಟಿ ದೀಪಿಕಾ ಪಡುಕೋಣೆ ಇಂದು ಬೆಳಗ್ಗೆ ಮುಂಬೈನ ನಾರ್ಕೋಟಿಕ್ಸ್ ಕಚೇರಿಗೆ ಆಗಮಿಸಿದ್ದಾರೆ.

  ಸೆಪ್ಟೆಂಬರ್ 26 ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಎನ್‌ಸಿಬಿಯ ವಿಶೇಷ ತನಿಖಾ ತಂಡ ನೋಟಿಸ್ ಜಾರಿ ಮಾಡಿತ್ತು. ಕೇವಲ ದೀಪಿಕಾ ಪಡುಕೋಣೆಗೆ ಮಾತ್ರವಲ್ಲ ರಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್‌ಗೂ ನೋಟಿಸ್ ನೀಡಲಾಗಿದೆ.

  ಡ್ರಗ್ಸ್ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್: ವಾಟ್ಸಾಪ್ ಗ್ರೂಪ್‌ಗೆ ದೀಪಿಕಾ ಅಡ್ಮಿನ್!ಡ್ರಗ್ಸ್ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್: ವಾಟ್ಸಾಪ್ ಗ್ರೂಪ್‌ಗೆ ದೀಪಿಕಾ ಅಡ್ಮಿನ್!

  ನಿನ್ನೆಯಷ್ಟೇ ರಕುಲ್ ಪ್ರೀತ್ ಸಿಂಗ್ ವಿಚಾರಣೆಯಲ್ಲಿ ಭಾಗಿಯಾಗಿದ್ದರು. ಇಂದು ದೀಪಿಕಾ ಪಡುಕೋಣೆ ಆಗಮಿಸಿದ್ದಾರೆ. ದೀಪಿಕಾ ಜೊತೆಯಲ್ಲಿ ನಾನು ಬರುತ್ತೇನೆ ಎಂದು ಪತಿ ರಣ್ವೀರ್ ಸಿಂಗ್ ಮನವಿ ಮಾಡಿದ್ದರು. ಆದ್ರೆ, ರಣ್ವೀರ್ ಮನವಿಯನ್ನು ಎನ್‌ಸಿಬಿ ತಿರಸ್ಕರಿಸಿದೆ. ಈ ಹಿನ್ನೆಲೆ ದೀಪಿಕಾ ಒಬ್ಬರೇ ಇಂದು ವಿಚಾರಣೆಗೆ ಒಳಪಟ್ಟಿದ್ದಾರೆ.

  ದೀಪಿಕಾ ಮ್ಯಾನೇಜರ್ ವಿಚಾರಣೆ ಆಗಿದೆ

  ದೀಪಿಕಾ ಮ್ಯಾನೇಜರ್ ವಿಚಾರಣೆ ಆಗಿದೆ

  ಸೆಪ್ಟೆಂಬರ್ 25 ರಂದು ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ವಿಚಾರಣೆ ಆಗಿದೆ. ಡ್ರಗ್ಸ್ ಜಾಲಕ್ಕೆ ಸಂಬಂಧಪಟ್ಟಂತೆ ದೀಪಿಕಾ ಹೆಸರು ತಳುಕು ಹಾಕಿಕೊಂಡಿದ್ದ ಕಾರಣ, ಅವರ ಮ್ಯಾನೇಜರ್‌ಗೂ ನೋಟಿಸ್ ನೀಡಲಾಗಿತ್ತು. ವಿಚಾರಣೆ ವೇಳೆ ದೀಪಿಕಾ ಕುರಿತು ಸಾಕಷ್ಟು ಮಾಹಿತಿ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ.

  ವಾಟ್ಸಾಪ್ ಗ್ರೂಪ್ ಅಡ್ಮಿನ್

  ವಾಟ್ಸಾಪ್ ಗ್ರೂಪ್ ಅಡ್ಮಿನ್

  ಇನ್ನು ಡ್ರಗ್ಸ್ ಗೆ ಸಂಬಂಧಿಸಿದಂತೆ ವಾಟ್ಸಾಪ್‌ನಲ್ಲಿ ಗ್ರೂಪ್ ಇದ್ದು, ಆ ಗ್ರೂಪ್‌ಗೆ ದೀಪಿಕಾ ಪಡುಕೋಣೆ ಅಡ್ಮಿನ್ ಆಗಿದ್ದಾರೆ ಎಂದು ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ಎನ್‌ಸಿಬಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಈ ಗ್ರೂಪ್‌ನಲ್ಲಿ ದೀಪಿಕಾ ಪಡುಕೋಣೆ, ಮ್ಯಾನೇಜರ್ ಕರೀಶ್ಮಾ ಪ್ರಕಾಶ್ ಹಾಗೂ ಈಗಾಗಲೇ ಬಂಧನವಾಗಿರುವ ಟ್ಯಾಲೆಂಟ್ ಮ್ಯಾನೇಜರ್ ಜಯ ಶಾ ಇದ್ದಾರೆ ಎಂದು ವರದಿಯಾಗಿದೆ.

  ವಾಟ್ಸಾಪ್ ಚಾಟ್ ಚರ್ಚೆಯಾಗಿತ್ತು

  ವಾಟ್ಸಾಪ್ ಚಾಟ್ ಚರ್ಚೆಯಾಗಿತ್ತು

  ಡ್ರಗ್ಸ್ ಸಂಬಂಧ ನಟಿ ದೀಪಿಕಾ ಪಡುಕೋಣೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ವಾಟ್ಸಾಪ್ ಚಾಟ್ ಸಹ ಇತ್ತೀಚಿಗಷ್ಟೆ ಬಹಿರಂಗವಾಗಿತ್ತು. ಮ್ಯಾನೇಜರ್ ಕರೀಶ್ಮಾ ಬಳಿ ''ಮಾಲ್ ಇದೆಯಾ'' ಎಂದು ಕೇಳಿರುವ ಸಂದೇಶ ವೈರಲ್ ಆಗಿತ್ತು. ಆ ಕಡೆ ಶ್ರದ್ಧಾ ಕಪೂರ್ ಸಹ ಡ್ರಗ್ಸ್ ಸಂಬಂಧ ಚಾಟ್ ಮಾಡಿದ್ದಾರೆ ಎನ್ನಲಾದ ಸಂದೇಶ ವೈರಲ್ ಆಗಿತ್ತು.

  ಅನುಶ್ರೀ ಹುಡುಕಿಕೊಂಡು ಮಂಗಳೂರಿನಿಂದ ಬೆಂಗಳೂರಿಗೆ ಬಂದ CCB ಪೊಲೀಸ್ | Filmibeat Kannada
  ಎಲ್ಲಾ ಶುರುವಾಗಿದ್ದು ಸುಶಾಂತ್ ಸಾವಿನಿಂದ!

  ಎಲ್ಲಾ ಶುರುವಾಗಿದ್ದು ಸುಶಾಂತ್ ಸಾವಿನಿಂದ!

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆ ಮಾಡುತ್ತಿದ್ದ ವೇಳೆ ಡ್ರಗ್ಸ್ ವಿಚಾರ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯನ್ನು ವಿಚಾರಣೆಗೆ ಒಳಪಡಿಸದ ವೇಳೆ ಉಳಿದ ನಟಿಯರ ಹೆಸರು ಬಹಿರಂಗವಾಗಿದೆ. ಹೀಗಾಗಿ, ರಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಹಾಗೂ ದೀಪಿಕಾ ವಿಚಾರಣೆ ಎದುರಿಸಬೇಕಾಗಿದೆ.

  'ದೀಪಿಕಾ ಜೊತೆ ನಾನು ವಿಚಾರಣೆಗೆ ಹಾಜರಾಗುತ್ತೇನೆ' ಎಂದು ರಣ್ವೀರ್ NCB ಬಳಿ ಮನವಿ ಮಾಡಿಕೊಂಡಿದ್ದೇಕೆ?'ದೀಪಿಕಾ ಜೊತೆ ನಾನು ವಿಚಾರಣೆಗೆ ಹಾಜರಾಗುತ್ತೇನೆ' ಎಂದು ರಣ್ವೀರ್ NCB ಬಳಿ ಮನವಿ ಮಾಡಿಕೊಂಡಿದ್ದೇಕೆ?

  English summary
  Actress Deepika Padukone arrived at Narcotics Control Bureau's (NCB) Special Investigation Team (SIT) office in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X