Don't Miss!
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- News
Budget 2023: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿಸುವವರಿಗೆ ಶುಭ ಸುದ್ದಿ
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Automobiles
ಸೇನೆಗೆ ಮಾರುತಿ ಜಿಪ್ಸಿ ಬದಲಿಗೆ ಅತ್ಯಾಧುನಿಕ ಹೊಸ ಜಿಮ್ನಿ ಸೇರ್ಪಡೆ ಹೇಗಿರಬಹುದು?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫುಟ್ಬಾಲ್ ವಿಶ್ವಕಪ್‌ನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಕ್ಕೆ ಪಾಕಿಸ್ತಾನದವರಿಗೆ ಉರಿ!
'ಪಠಾಣ್' ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಬಿಕಿನಿಯ ಬಣ್ಣದ ಬಗ್ಗೆ ಕೆಲವರು ವಿವಾದ ಹುಟ್ಟು ಹಾಕುತ್ತಿರುವ ವೇಳೆಯಲ್ಲಿಯೇ ನಟಿ ದೀಪಿಕಾ ಪಡುಕೋಣೆ, ಕತಾರ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫೀಫಾ ವಿಶ್ವಕಪ್ ಅನ್ನು ಅನಾವರಣಗೊಳಿಸಿದರು.
ವಿಶ್ವದಾದ್ಯಂತ ನೂರಾರು ಕೋಟಿ ಮಂದಿ ವೀಕ್ಷಿಸಿದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕೇಂದ್ರ ವ್ಯಕ್ತಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡರು. ಮಾಜಿ ಗೋಲ್ ಕೀಪರ್ ಇಕರ್ ಕೆಸಿಲಾಸ್ ಜೊತೆಗೂಡಿ ಈ ವರ್ಷದ ವಿಶ್ವಕಪ್ ಅನ್ನು ಅನಾವರಣ ಮಾಡಿದರು. ಇದು ಭಾರತೀಯರ ಪಾಲಿಗೆ ಬಹಳ ಹೆಮ್ಮೆಯ ಸಂಗತಿಯಾಗಿತ್ತು.
ಆದರೆ ದೀಪಿಕಾ ಪಡುಕೋಣೆಗೆ ಈ ಗೌರವ ಧಕ್ಕಿದ್ದಕ್ಕೆ ಪಾಕಿಸ್ತಾನದಲ್ಲಿ ಅಸಮಾಧಾನ ಶುರುವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪಾಕ್‌ನಲ್ಲಿ ಜೋರು ಚರ್ಚೆಗಳೂ ಆದವು ಅದಕ್ಕೆ ಕಾರಣವೂ ಇದೆ.

ಭದ್ರತೆಗೆ ಪಾಕಿಸ್ತಾನವನ್ನು ಬಳಸಿಕೊಂಡ ಕತಾರ್
ವಿಶ್ವಕಪ್ ಪಂದ್ಯಾವಳಿಗಳಿಗೆ ಭದ್ರತೆ ಆಯೋಜಿಸಲು ಕತಾರ್ ಪಾಕಿಸ್ತಾನದ ಸೇನೆ ಹಾಗೂ ಪೊಲೀಸರನ್ನು ಬಳಸಿಕೊಂಡಿತ್ತು. ಇದಕ್ಕಾಗಿ ಕತಾರ್, ಪಾಕಿಸ್ತಾನಕ್ಕೆ ಹಣ ನೀಡುವ ಜೊತೆಗೆ ಧನ್ಯವಾದಗಳನ್ನು ಹೇಳಿತ್ತು. ಆದರೆ ಭಾರತದ ದೀಪಿಕಾ ಪಡುಕೋಣೆಗೆ ವಿಶ್ವದ ಪ್ರಮುಖ ಟೂರ್ನಿಯ ಅತ್ಯಂತ ಪ್ರಮುಖ ಮ್ಯಾಚ್‌ನಲ್ಲಿ ವಿಶ್ವಕಪ್ ಅನ್ನು ಅನಾವರಣ ಮಾಡುವ ಗೌರವ ನೀಡಲಾಯಿತು ಇದು ಪಾಕಿಸ್ತಾನಿಯರ ಅಸಮಾಧಾನಕ್ಕೆ ಕಾರಣ.

ಭಾರತದವರು ಅತಿಥಿ, ಪಾಕಿಸ್ತಾನಿಯರಿಗೆ ಗೇಟ್ ಕಾಯುವ ಕೆಲಸ!
ಕತಾರ್, ಪಾಕಿಸ್ತಾನವನ್ನು ಕ್ರೀಡಾಂಗಣದ ಹೊರತೆ ಕಾವಲು ಕಾಯಲು ನಿಯೋಜಿಸಿಕೊಂಡು, ಭಾರತದ ದೀಪಿಕಾ ಪಡುಕೋಣೆಯನ್ನು ಅತಿಥಿಯಾಗಿ ಆಹ್ವಾನಿಸಿ ವಿಶ್ವಕಪ್ ಅನಾವರಣ ಮಾಡುವ ಗೌರವ ನೀಡಿದೆ ಎಂದು ಪಾಕಿಸ್ತಾನಿಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ದುಃಖ ತೋಡಿಕೊಂಡರು. ಕತಾರ್ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು. ಅಸಲಿಗೆ ನೋಡಿದರೆ ಪಾಕಿಸ್ತಾನಿಯರು ಕತಾರ್ ಮೇಲೆ ಕೋಪಗೊಳ್ಳುವುದು ಅಸಮಂಜಸ. ಏಕೆಂದರೆ ದೀಪಿಕಾ ಅವರನ್ನು ಆಹ್ವಾನಿಸಿದ್ದಿದ್ದು ಕತಾರ್ ಸರ್ಕಾರವಲ್ಲ!

ಲೂಯಿ ವಿಟಾನ್ ಬ್ರ್ಯಾಂಡ್‌ನ ರಾಯಭಾರಿ
ಹೌದು, ದೀಪಿಕಾ ಪಡುಕೋಣೆಗೆ ವಿಶ್ವಕಪ್ ಟ್ರೋಫಿ ಅನಾವರಣ ಮಾಡುವಂತೆ ಕತಾರ್ ಸರ್ಕಾರ ಆಹ್ವಾನ ನೀಡಿರಲಿಲ್ಲ. ಆದರೆ ಈ ವರ್ಷದ ಫುಟ್‌ಬಾಲ್ ವಿಶ್ವಕಪ್‌ನ ಟ್ರಾವೆಲ್ ಪಾರ್ಟನರ್ ಆಗಿದ್ದಿದ್ದು ವಿಶ್ವದ ಐಶಾರಾಮಿ ಬ್ರ್ಯಾಂಡ್‌ಗಳಲ್ಲಿ ಒಂದಾದ ಲೂಯಿ ವಿಟಾನ್. ಇದೇ ಸಂಸ್ಥೆಯ ವಿಶೇಷ ಬ್ಯಾಗ್‌ನಲ್ಲಿ ವಿಶ್ವಕಪ್ ಅನ್ನು ಸಾಗಿಸಲಾಗಿತ್ತು. ಈ ಬ್ರ್ಯಾಂಡ್‌ನ ಏಕೈಕ ಭಾರತೀಯ ರಾಯಭಾರಿ ದೀಪಿಕಾ ಪಡುಕೋಣೆ. ಹಾಗಾಗಿ ಲೂಯಿ ವಿಟಾನ್ ಸಂಸ್ಥೆಯಿಂದ ತಮ್ಮ ಪ್ರತಿನಿಧಿಯಾಗಿ ದೀಪಿಕಾರನ್ನು ಕಳಿಸಲಾಗಿತ್ತು. ವಿಶ್ವಕಪ್ ಅನ್ನು ತಂದ ಲೂಯಿ ವಿಟಾನ್ ನ ರಾಯಭಾರಿಯಾಗಿ ದೀಪಿಕಾ ಹೋಗಿದ್ದರೇ ಹೊರತು ಟ್ರೋಫಿ ಅನಾವರಣ ಮಾಡಲು ಅಲ್ಲ. ಆ ಕಾರ್ಯ ಮಾಡಿದ್ದು ಮಾಜಿ ಗೋಲಿ, ಇಕರ್ ಕೆಸಿಲಾಸ್.

ಕ್ಯಾನ್ ಸಿನಿಮೋತ್ಸವದಲ್ಲಿ ಜ್ಯೂರಿ ಸದಸ್ಯೆಯಾಗಿದ್ದ ದೀಪಿಕಾ
ಏನೇ ಆದರೂ ದೀಪಿಕಾ ಪಡುಕೋಣೆ, ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಶ್ವಕಪ್ ಟ್ರೋಫಿ ಅನಾವಣ ಕಾರ್ಯಕ್ರಮದಲ್ಲಿ ಕೇಂದ್ರ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದು ಭಾರತಕ್ಕೆ ಹೆಮ್ಮೆಯ ವಿಷಯವೇ. ಭಾರತದ ಇನ್ಯಾವ ಸದಸ್ಯರೂ ಫುಟ್ಬಾಲ್ ವಿಶ್ವಕಪ್‌ನ ಇಷ್ಟು ಸನಿಹಕ್ಕೆ ಹೋಗಿದ್ದೇ ಇಲ್ಲ! ಇದೇ ವರ್ಷ ನಡೆದ ಕ್ಯಾನ್ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಜ್ಯೂರಿಯಾಗಿಯೂ ದೀಪಿಕಾ ಪಡುಕೋಣೆ ಭಾಗವಹಿಸಿದ್ದರು. ಈಗ ಫುಟ್ಬಾಲ್ ವಿಶ್ವಕಪ್‌ನಲ್ಲೂ ಭಾಗವಹಿಸಿದರು. ಒಟ್ಟಾರೆ ದೀಪಿಕಾರ ಅಂತರಾಷ್ಟ್ರೀಯ ಮೌಲ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗುತ್ತಿದೆ.