Just In
Don't Miss!
- Finance
ಸ್ಟಾರ್ಟ್ ಅಪ್ ಗಳಿಗೆ 1000 ಕೋಟಿ ರು. ಸೀಡ್ ಫಂಡ್ ಘೋಷಣೆ ಮಾಡಿದ ಪ್ರಧಾನಿ
- News
ಜ.18ರಂದು ಅಹ್ಮದಾಬಾದ್, ಸೂರತ್ ಮೆಟ್ರೋ ರೈಲು ಯೋಜನೆಗೆ ಭೂಮಿ ಪೂಜೆ
- Sports
ಐಎಸ್ಎಲ್: ಅಂಕ ಹಂಚಿಕೊಂಡ ಹೈದರಾಬಾದ್ ಮತ್ತು ಮುಂಬೈ ಸಿಟಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Automobiles
2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ನ್ಯೂ ಜನರೇಷನ್ ಕ್ರೆಟಾ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಯಸ್ಸಾದ ನಾಯಕರಿಗೆ ಎಳೆ ವಯಸ್ಸಿನ ನಾಯಕಿಯರು: ನಟಿಯ ತಕರಾರು
'ಸಿನಿಮಾ ನಾಯಕರಿಗೆ ವಯಸ್ಸೇ ಆಗುವುದಿಲ್ಲ' ನಾಯಕ ನಟರ ಕುರಿತು ಇರುವ ಹಳೆಯ ಜೋಕಿದು, ಈ ಜೋಕಿಗೆ ನಗುವುದನ್ನೂ ಬಿಟ್ಟಿದ್ದಾರೆ ಜನ, ಏಕೆಂದರೆ ಇದು ಜೋಕ್ ಆಗಿ ಉಳಿದಿಲ್ಲ!
ವಯಸ್ಸು 60 ಆದರೂ ಈಗಲೂ ತೆರೆ ಮೇಲೆ 30 ರ ಹರೆಯದ ಯುವಕನ ಪಾತ್ರಗಳಲ್ಲಿ ಅಭಿನಯಿಸುತ್ತಾರೆ ಕೆಲವು ನಾಯಕ ನಟರು. ಕೆಲವು 'ಹೀರೋ'ಗಳಂತೂ ಕಾಲೇಜು ಯುವಕನ ಪಾತ್ರಗಳಲ್ಲೂ ನಟಿಸಿದ್ದಾರೆ, ನಟಿಸುತ್ತಿದ್ದಾರೆ. ಈ ಸನ್ನಿವೇಶ ಭಾರತದ ಬಹುತೇಕ ಎಲ್ಲಾ ಚಿತ್ರರಂಗಗಳಲ್ಲೂ ಇದೆ.
ನಾಯಕನಿಗೆ ಎಷ್ಟೇ ವಯಸ್ಸಾಗಿದ್ದರೂ ಸಹ ಕಡಿಮೆ ವಯಸ್ಸಿನವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ. ಕೆಲವು ಬಾರಿ ನಾಯಕ, 'ಅದೇ ನಾಯಕಿ ಆಗಬೇಕು' ಎಂದು ಹಠ ಹಿಡಿದಿದ್ದ ಸಂದರ್ಭಗಳೂ ಚಿತ್ರರಂಗದಲ್ಲಿ ಇದೆ.
ಆದರೆ ಈ 'ಪುರುಷ ಕೇಂದ್ರಿತ' ವ್ಯವಸ್ಥೆ ಬಗ್ಗೆ ನಟಿಯೊಬ್ಬರು ಬಹುತೇಕ ಮೊದಲ ಬಾರಿಗೆ ಗಟ್ಟಿ ಧ್ವನಿ ಎತ್ತಿದ್ದಾರೆ. ಅವರೇ ಬಾಲಿವುಡ್ ನಟಿ ದಿಯಾ ಮಿರ್ಜಾ.

''50 ವರ್ಷ ದಾಟಿದ ನಟರ ಎದುರು 19 ರ ಹರೆಯದ ನಟಿ, ಛೇ''
'50 ವರ್ಷ ದಾಟಿದ ನಟರ ಎದುರು 19 ರ ಹರೆಯದವರನ್ನು ನಾಯಕಿಯನ್ನಾಗಿ ಮಾಡಲಾಗುತ್ತದೆ, ಇದನ್ನು ನೋಡಲು ವಿಲಕ್ಷಣ, ವಿಚಿತ್ರವೆನಿಸುತ್ತದೆ. ಇದೊಂದು ರೀತಿ ಕೆಟ್ಟ ಸಂಸ್ಕೃತಿಯಾಗಿ ಬೆಳೆಯುತ್ತಿದೆ. ಎಷ್ಟೋ ಮಂದಿ ನಡುವಯಸ್ಸಿನ ಪ್ರತಿಭಾವಂತ ನಟಿಯರು ಇದೇ ಕಾರಣಕ್ಕೆ ಅವಕಾಶದಿಂದ ವಂಚಿತರಾಗುತ್ತಿದ್ದಾರೆ' ಎಂದಿದ್ದಾರೆ ದಿಯಾ ಮಿರ್ಜಾ.

ನಟಿಯರ ಕುರಿತು ಕತೆಗಳೇ ರಚಿಸಲಾಗುತ್ತಿಲ್ಲ: ದಿಯಾ
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ದಿಯಾ ಮಿರ್ಜಾ, 'ನಟಿಯರ ಭಾವಾಭಿವ್ಯಕ್ತಿ ಸದಾ ತಾಜಾ ಆಗಿರುತ್ತದೆ, ದುರಂತವೆಂದರೆ 35 ದಾಟಿದ ನಟಿಯರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಕತೆಗಳೇ ರಚಿಸುವುದಿಲ್ಲ. ಬಾಲಿವುಡ್ ಕತೆಗಳೆಲ್ಲಾ ನಾಯಕ ಕೇಂದ್ರಿತವೇ ಆಗಿರುತ್ತವೆ. ವಯಸ್ಸಾದ ನಟ, ಯುವಕನ ಪಾತ್ರ ನಿರ್ವಹಿಸುವುದನ್ನು ನೋಡುವುದು ದುರಾದೃಷ್ಟಕರ' ಎಂದಿದ್ದಾರೆ ಅವರು.

ನಾಯಕರು ಬೇಕೆಂದೇ ಹೀಗೆ ಮಾಡುತ್ತಾರೆ: ದಿಯಾ
'50 ಕ್ಕೂ ಹೆಚ್ಚು ವಯಸ್ಸಾದ ನಟರು 19 ವರ್ಷದ ನಾಯಕಿಯರೊಂದಿಗೆ ನಟಿಸುವುದು ವಿಲಕ್ಷಣ. ಆದರೆ ನಾಯಕ ನಟರು ತಮ್ಮ ಸ್ವಂತ ಕರಿಷ್ಮಾ ಹೆಚ್ಚಿಸಿಕೊಳ್ಳಲೆಂದು ಹೀಗೆ ಕಡಿಮೆ ವಯಸ್ಸಿನ ನಟಿಯರೊಂದಿಗೆ ಸಿನಿಮಾ ಮಾಡಲು ಹಾತೊರೆಯುತ್ತಾರೆ' ಎಂದು ಬಾಲಿವುಡ್ ಗುಟ್ಟು ಹೊರಹಾಕಿದ್ದಾರೆ ದಿಯಾ ಮಿರ್ಜಾ.

'ಒಟಿಟಿಗಳಿಂದಾಗಿ ಮಹಿಳಾ ಪ್ರಧಾನ ಕತೆಗಳು ಬರುತ್ತಿವೆ'
'ಒಟಿಟಿಗಳಿಂದಾಗಿ ಮಹಿಳಾ ಪ್ರಾಧಾನ್ಯ ಕತೆಗಳಿಗೆ ಆಧ್ಯತೆ ಸಿಗುತ್ತಿದೆ. ಆ ಮೂಲಕ ಪ್ರತಿಭಾವಂತ ನಟಿಯರಿಗೆ ಹೆಚ್ಚು ಅವಕಾಶಗಳು ಸಹ ಒದಗಿ ಬರುತ್ತಿದೆ. ಒಟಿಟಿಗಳಿಂದಾಗಿ ಹೆಚ್ಚು ಮಹಿಳಾ ಪ್ರಧಾನ ವೆಬ್ ಸರಣಿಗಳು, ಸಿನಿಮಾಗಳು ಬರುತ್ತಿವೆ' ಎಂದಿದ್ದಾರೆ ದಿಯಾ ಮಿರ್ಜಾ.