For Quick Alerts
  ALLOW NOTIFICATIONS  
  For Daily Alerts

  ಹೆಣ್ಮಕ್ಕಳಿಗೆ ಸುಳ್ಳು ಹೇಳಿ ಸಂಜಯ್ ದತ್ ಹೇಗೆಲ್ಲ ಮೋಸ ಮಾಡ್ತಿದ್ರು ಗೊತ್ತಾ.?

  By Harshitha
  |

  'ಖಳನಾಯಕ್' ಸಂಜಯ್ ದತ್ ಜೀವನಾಧಾರಿತ 'ಸಂಜು' ಚಿತ್ರದ ಟ್ರೈಲರ್ ನ ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಈ ಡೈಲಾಗ್ ಖಂಡಿತ ನಿಮಗೆ ನೆನಪಿರುತ್ತೆ :-

  ಲೇಖಕಿ - ''ನಿಮ್ಮ ಹೆಂಡತಿಯನ್ನು ಹೊರತು ಪಡಿಸಿ ಎಷ್ಟು ಹೆಣ್ಮಕ್ಕಳ ಜೊತೆಗೆ ನೀವು ಮಂಚ ಹಂಚಿಕೊಂಡಿದ್ದೀರಾ.?''

  ಸಂಜು - ''ವೇಶ್ಯೆಯರನ್ನು ಹೊರತು ಪಡಿಸಿ 308''

  ಸಂಜಯ್ ದತ್ ಪಾತ್ರಧಾರಿ ರಣ್ಬೀರ್ ಕಪೂರ್ ಬಾಯಿಂದ ಬಂದಿರುವ ಈ ಡೈಲಾಗ್ ಬಾಲಿವುಡ್ ನಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

  ಮಾಧುರಿ ದೀಕ್ಷಿತ್, ಟೀನಾ ಮುನಿಮ್ ಸೇರಿದಂತೆ ಕೆಲ ನಟಿಯರನ್ನ ಸಂಜಯ್ ದತ್ ಡೇಟ್ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ, ''308'' ಎಂಬ ಡೈಲಾಗ್ ಸಂಜಯ್ ದತ್ ಗೆ ಪ್ಲೇ ಬಾಯ್ ಇಮೇಜ್ ಕೊಟ್ಟಿದೆ. ಸಂಜಯ್ ದತ್ ನಿಜಕ್ಕೂ ಅಷ್ಟೊಂದು ಹೆಣ್ಮಕ್ಕಳ ಜೊತೆಗೆ ಮಂಚ ಹಂಚಿಕೊಂಡಿದ್ರಾ.?

  ಇದೇ ಪ್ರಶ್ನೆಯನ್ನ 'ಸಂಜು' ಚಿತ್ರದ ನಿರ್ದೇಶಕ ರಾಜಕುಮಾರ್ ಹಿರಾನಿ ಮುಂದೆ ಇಟ್ಟಾಗ ಒಂದು ರಹಸ್ಯ ಬಟಾ ಬಯಲಾಯಿತು. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

  ಸುಳ್ಳು ಹೇಳ್ತಿದ್ರಂತೆ ಸಂಜಯ್ ದತ್.!

  ಸುಳ್ಳು ಹೇಳ್ತಿದ್ರಂತೆ ಸಂಜಯ್ ದತ್.!

  ''ಡೇಟಿಂಗ್ ಮಾಡಲು ಆರಂಭಿಸುವ ಮುನ್ನ, ಹುಡುಗಿಯರನ್ನ ಸಂಜಯ್ ದತ್ ಮೊದಲು ಸ್ಮಶಾನಕ್ಕೆ ಕರೆದೊಯ್ಯುತ್ತಿದ್ದರು. ಸ್ಮಶಾನಕ್ಕೆ ಕರೆದುಕೊಂಡು ಹೋದ್ಮೇಲೆ, ''ನಾನು ನಿನ್ನನ್ನ ಇಲ್ಲಿಗೆ ಕರೆದುಕೊಂಡು ಬಂದಿರುವುದು ನನ್ನ ತಾಯಿಯನ್ನು ಭೇಟಿ ಮಾಡಿಸೋಕೆ'' ಅಂತ ಭಾವನಾತ್ಮಕವಾಗಿ ಹೆಣ್ಮಕ್ಕಳ ಜೊತೆ ಮಾತನಾಡುತ್ತಿದ್ದರು ಸಂಜಯ್ ದತ್'' ಎಂದು ನಿರ್ದೇಶಕ ರಾಜಕುಮಾರ್ ಹಿರಾನಿ 'ಇಂಡಿಯಾ ಟುಡೇ'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

  ಬಟಾ ಬಯಲಾಗಲಿದೆ ಸಂಜಯ್ ದತ್ ಬದುಕಿನ ರೋಚಕ ಸತ್ಯಗಳು.!ಬಟಾ ಬಯಲಾಗಲಿದೆ ಸಂಜಯ್ ದತ್ ಬದುಕಿನ ರೋಚಕ ಸತ್ಯಗಳು.!

  ಸತ್ಯ ಏನು ಗೊತ್ತಾ.?

  ಸತ್ಯ ಏನು ಗೊತ್ತಾ.?

  ಸತ್ಯ ಏನಪ್ಪಾ ಅಂದ್ರೆ, ''ಹುಡುಗಿಯರನ್ನ ಸಂಜಯ್ ದತ್ ಕರೆದುಕೊಂಡು ಹೋಗುತ್ತಿದ್ದ ಸ್ಮಶಾನದಲ್ಲಿ ಅವರ ತಾಯಿಯ ಸಮಾಧಿ ಇರಲಿಲ್ಲ. ಯಾರದ್ದೋ ಸಮಾಧಿ ತೋರಿಸಿ ''ಇದು ನನ್ನ ತಾಯಿಯ ಸಮಾಧಿ'' ಅಂತ ಸುಳ್ಳು ಹೇಳುತ್ತಿದ್ದರು ಸಂಜಯ್ ದತ್'' ಅಂತಾರೆ ರಾಜಕುಮಾರ್ ಹಿರಾನಿ.

  'ಸಂಜು' ಮಾತುಗಳಿಗೆ ಕ್ಲೀನ್ ಬೌಲ್ಡ್ ಆಗುತ್ತಿದ್ದ ಹುಡುಗಿಯರು.!

  'ಸಂಜು' ಮಾತುಗಳಿಗೆ ಕ್ಲೀನ್ ಬೌಲ್ಡ್ ಆಗುತ್ತಿದ್ದ ಹುಡುಗಿಯರು.!

  ಸಮಾಧಿ ಮುಂದೆ ನಿಂತು ಭಾವನಾತ್ಮಕವಾಗಿ ಮಾತನಾಡುತ್ತಿದ್ದ ಸಂಜಯ್ ದತ್ ಗೆ ಅದೆಷ್ಟೋ ಹುಡುಗಿಯರು ಕ್ಲೀನ್ ಬೌಲ್ಡ್ ಆಗಿದ್ದರಂತೆ. ಆದ್ರೆ, ಅದೇ ಹುಡುಗಿಯರು ಸಂಜಯ್ ದತ್ ಗೆ ಕೈಕೊಟ್ಟಾಗ, ಅವರಿಗೆ ತಡೆಯಲಾರದಷ್ಟು ಕೋಪ ಬರ್ತಿತ್ತಂತೆ.

  ಒಮ್ಮೆ ನಡೆದ ಘಟನೆ

  ಒಮ್ಮೆ ನಡೆದ ಘಟನೆ

  ಒಮ್ಮೆ ಬ್ರೇಕಪ್ ಆದಾಗ, ಸಿಟ್ಟಲ್ಲಿದ್ದ ಸಂಜಯ್ ದತ್ ತಮ್ಮ ಸ್ನೇಹಿತರ ಕಾರು ತೆಗೆದುಕೊಂಡು ಮಾಜಿ ಗೆಳತಿಯ ಮನೆ ಮುಂದೆ ನಿಂತಿದ್ದ ಕಾರಿಗೆ ಗುದ್ದಿದ್ದರು. ಕಡೆಗೆ ಆ ಕಾರು ತಮ್ಮ ಮಾಜಿ ಗೆಳತಿಯ ಹೊಸ ಬಾಯ್ ಫ್ರೆಂಡ್ ನದ್ದು ಎಂಬ ಸತ್ಯ ಸಂಜಯ್ ದತ್ ಗೆ ಗೊತ್ತಾಯ್ತಂತೆ. ಹಾಗಂತ ರಾಜಕುಮಾರ್ ಹಿರಾನಿ 'ಇಂಡಿಯಾ ಟುಡೇ'ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

  ಇದೇ ವಾರ 'ಸಂಜು' ಬಿಡುಗಡೆ

  ಇದೇ ವಾರ 'ಸಂಜು' ಬಿಡುಗಡೆ

  ಸಂಜಯ್ ದತ್ ನಿಜ ಜೀವನದ ಈ ಸತ್ಯ 'ಸಂಜು' ಸಿನಿಮಾದಲ್ಲೂ ಇದ್ಯಾ.? ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಬೇಕು ಅಂದ್ರೆ ನೀವು ಜೂನ್ 29 ರವರೆಗೂ ಕಾಯಲೇಬೇಕು. ಯಾಕಂದ್ರೆ, 'ಸಂಜು' ಬಿಡುಗಡೆ ಆಗುತ್ತಿರುವುದು ಆಗಲೇ.!

  English summary
  Director Rajkumar Hirani reveals a shocking secret about Bollywood Actor Sanjay Dutt. Read the article to know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X