For Quick Alerts
  ALLOW NOTIFICATIONS  
  For Daily Alerts

  ಸುಶಾಂತ್‌ ಸಿಂಗ್‌ಗಾಗಿ ಡ್ರಗ್ಸ್ ಖರೀದಿಸಿದ್ದ ರಿಯಾ ಚಕ್ರವರ್ತಿ: ಎನ್‌ಸಿಬಿ ದೋಷಾರೋಪ ಪಟ್ಟಿ

  |

  ಸುಶಾಂತ್ ಸಿಂಗ್ ನಿಧನ ಹೊಂದಿ ಎರಡು ವರ್ಷಗಳ ಮೇಲಾದರೂ ಅವರ ಅಸಹಜ ಸಾವಿನ ಪ್ರಕರಣದ ಸಿಕ್ಕುಗಳಲ್ಲಿ ಸಿಲುಕಿಕೊಂಡವರಿಗೆ ಇನ್ನೂ ಬಿಡುಗಡೆ ಧಕ್ಕಿಲ್ಲ.

  ಸುಶಾಂತ್ ಸಿಂಗ್ ಸಾವಿನ ಬಳಿಕ ಹೊರಬಂದ ಡ್ರಗ್ಸ್ ಪ್ರಕರಣ ಬಾಲಿವುಡ್‌ ಅನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಹಲವಾರು ಮಂದಿ ಬಂಧನಕ್ಕೆ ಒಳಗಾದರು. ಖ್ಯಾತ ನಾಮ ನಟ-ನಟಿಯರು ವಿಚಾರಣೆ ಎದುರಿಸಬೇಕಾಯ್ತು. ಆ ಪ್ರಕರಣದ ತನಿಖೆ ಈಗಲೂ ಚಾಲ್ತಿಯಲ್ಲಿದ್ದು, ಇದೀಗ ತನಿಖಾ ಸಂಸ್ಥೆ ಎನ್‌ಸಿಬಿಯು ಕರಡು ದೋಷಾರೋಪ ಪಟ್ಟಿಯೊಂದನ್ನು ಸಲ್ಲಿಸಿದೆ.

  ಸುಶಾಂತ್ ಸಿಂಗ್ ಅಗಲಿ 2 ವರ್ಷ: ಟ್ರೆಂಡಿಂಗ್‌ನಲ್ಲಿ ಬಾಯ್‌ಕಾಟ್ ಬಾಲಿವುಡ್!ಸುಶಾಂತ್ ಸಿಂಗ್ ಅಗಲಿ 2 ವರ್ಷ: ಟ್ರೆಂಡಿಂಗ್‌ನಲ್ಲಿ ಬಾಯ್‌ಕಾಟ್ ಬಾಲಿವುಡ್!

  ಸುಶಾಂತ್ ಸಿಂಗ್ ಸಾವಿನ ಬಳಿಕ ಹೊರಬಿದ್ದ ಡ್ರಗ್ಸ್ ಪ್ರಕರಣದಲ್ಲಿ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಸಿಂಗ್ ಹಾಗೂ ಆಕೆಯ ಭಾಗಿಯಾಗಿದ್ದಾರೆ ಎಂದು ಎನ್‌ಸಿಬಿ ಪರ ವಕಾಲತ್ತು ವಹಿಸಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಸರ್ಪಾಂಡೆ, ಕರಡು ದೋಷಾರೋಪ ಪಟ್ಟಿಯನ್ನು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

  ಸುಶಾಂತ್‌ಗಾಗಿ ಡ್ರಗ್ಸ್ ಖರೀದಿಸಿದ್ದ ರಿಯಾ ಚಕ್ರವರ್ತಿ

  ಸುಶಾಂತ್‌ಗಾಗಿ ಡ್ರಗ್ಸ್ ಖರೀದಿಸಿದ್ದ ರಿಯಾ ಚಕ್ರವರ್ತಿ

  ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋವಿಕ್ ವಿರುದ್ಧ ಮಾದಕ ವಸ್ತು ಸೇವನೆ ಹಾಗೂ ಮಾದಕ ವಸ್ತು ಖರೀದಿ ಹಾಗೂ ವಿತರಣೆ ಪ್ರಕರಣ ದಾಖಲಿಸುವಂತೆ ಮನವಿ ಮಾಡಲಾಗಿದೆ. ಸುಶಾಂತ್ ಸಿಂಗ್‌ಗಾಗಿ ಇವರಿಬ್ಬರು ಮಾದಕ ವಸ್ತು ಖರೀದಿಸಿದ್ದರು ಹಾಗೂ ಸಂಗ್ರಹಿಸಿದ್ದರು ಎಂದು ಸಹ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

  ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿತ್ತು

  ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿತ್ತು

  ನಟ ಸುಶಾಂತ್ ಸಿಂಗ್ ಜೂನ್ 14, 2020 ರಂದು ಮುಂಬೈನ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮರಣದ ಬಳಿಕ ರಿಯಾ ಚಕ್ರವರ್ತಿಯ ಮೇಲೆ ಅನುಮಾನಗಳು ಎದ್ದಿದ್ದವು. ಅದೇ ಸಂದರ್ಭದಲ್ಲಿ ಹೊರಬಿದ್ದ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋವಿಕ್ ಹಾಗೂ ಇನ್ನೂ ಹಲವಾರು ಮಂದಿಯನ್ನು ಬಂಧಿಸಲಾಗಿತ್ತು. ಬಂಧನದ ಒಂದು ತಿಂಗಳ ಬಳಿಕ ರಿಯಾ ಚಕ್ರವರ್ತಿಗೆ ಜಾಮೀನು ದೊರಕಿತು. ಅದಾದ ಕೆಲವು ದಿನಗಳ ಬಳಿಕ ಶೋವಿಕ್‌ಗೂ ಜಾಮೀನು ದೊರಕಿತು.

  ಅರ್ಜಿ ಸಲ್ಲಿಸಿದ್ದ ರಿಯಾ ಚಕ್ರವರ್ತಿ ವಕೀಲರು

  ಅರ್ಜಿ ಸಲ್ಲಿಸಿದ್ದ ರಿಯಾ ಚಕ್ರವರ್ತಿ ವಕೀಲರು

  ಕೆಲವು ತಿಂಗಳ ಹಿಂದೆ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಪ್ರಕರಣದಲ್ಲಿ ಎನ್‌ಸಿಬಿಯು ತನಿಖಾ ಲೋಪ ಎಸಗಿ, ಎನ್‌ಸಿಬಿಯ ವಿಶೇಷ ತನಿಖಾದಳ ಆ ಪ್ರಕರಣವನ್ನು ಕೈಗೆತ್ತಿಕೊಂಡು, ಆರ್ಯನ್ ಹಾಗೂ ಇನ್ನೂ ಕೆಲವರ ಹೆಸರನ್ನು ಪ್ರಕರಣದಿಂದ ಕೈಬಿಟ್ಟಿತು. ಆಗ ರಿಯಾ ಚಕ್ರವರ್ತಿ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಆರ್ಯನ್ ಪ್ರಕರಣದಲ್ಲಿ ತನಿಖಾ ಲೋಪ ಎಸಗಿರುವ ಸಮೀರ್ ವಾಂಖೆಡೆಯೇ ರಿಯಾ ಪ್ರಕರಣದ ತನಿಖೆ ಮಾಡಿದ್ದು, ಆ ಪ್ರಕರಣದಲ್ಲಿಯೂ ತನಿಖಾ ಲೋಪ ಎಸಗಿರುವ ಸಾಧ್ಯತೆ ಇದೆ ಹಾಗಾಗಿ ಮರು ತನಿಖೆಗೆ ಆದೇಶಿಸುವಂತೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೆ ಈಗ ಕರಡು ದೋಷಾರೋಪ ಪಟ್ಟಿಯನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಸಲ್ಲಿಸಿದ್ದಾರೆ.

  ರಿಯಾ ವಿರುದ್ಧ ದೂಷಣೆ

  ರಿಯಾ ವಿರುದ್ಧ ದೂಷಣೆ

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ 2020ರ ಜೂನ್ 14 ರಂದು ನಿಧನ ಹೊಂದಿದ್ದರು. ಅವರ ಸಾವಿಗೆ ರಿಯಾ ಚಕ್ರವರ್ತಿಯೇ ಕಾರಣ ಎಂದು ದೂರಲಾಗಿತ್ತು. ಕೆಲವು ಮಾಧ್ಯಮಗಳಂತೂ ರಿಯಾ ವಿರುದ್ಧ ಸತತ ವಾಗ್ದಾಳಿ ಮಾಡಿದ್ದವು. ಸಾಮಾಜಿಕ ಜಾಲತಾಣದಲ್ಲಿ ಸಹ ರಿಯಾ ಚಕ್ರವರ್ತಿ ವಿರುದ್ಧ ತೀವ್ರ ದೂಷಣೆ ಮಾಡಲಾಯ್ತು. ಸುಶಾಂತ್ ಪೋಷಕರು ಸಹ ರಿಯಾ ಚಕ್ರವರ್ತಿಯೇ ಕೊಲೆಗಾರ್ತಿ ಎಂದು ಆರೋಪಿಸಿದರು. ಸುಶಾಂತ್ ಸಿಂಗ್ ಸಾವಿನ ಬಳಿಕ ಬಹಿರಂಗವಾದ ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ, ಅರ್ಜುನ್ ರಾಮ್‌ಪಾಲ್, ಕರಣ್ ಜೋಹರ್, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಇನ್ನೂ ಹಲವಾರು ಖ್ಯಾತ ನಾಮ ಬಾಲಿವುಡ್ಡಿಗರು ವಿಚಾರಣೆ ಎದುರಿಸಿದರು. ರಿಯಾ ಸೇರಿದಂತೆ ಸುಮಾರು 20 ಮಂದಿಯ ಬಂಧನವೂ ಆಗಿತ್ತು.

  English summary
  Draft charge sheet submitted against Rhea Chakraborthy in drugs case which came to light after death of Sushant Singh Rajput.
  Thursday, June 23, 2022, 16:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X