»   » ಏಕ್ತಾ ಕಪೂರ್ ತೆರಿಗೆ ವಂಚನೆ ರು.30 ಕೋಟಿ

ಏಕ್ತಾ ಕಪೂರ್ ತೆರಿಗೆ ವಂಚನೆ ರು.30 ಕೋಟಿ

Posted By:
Subscribe to Filmibeat Kannada
Ekta Kapoor
ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿ ಫಿಲಂಸ್ ಸಂಸ್ಥೆ ಹಾಗೂ ಅವರ ನಿವಾಸದ ಮೇಲೆ ಇತ್ತೀಚೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಖಲೆಗಳ ಪರಿಶೀಲಿಸಿದ ಬಳಿಕ ಅವರು ಕೋಟ್ಯಾಂತರ ರುಪಾಯಿ ತೆರಿಗೆ ವಂಚನೆ ಮಾಡಿರುವ ಅಂಶ ಬಯಲಾಗಿದೆ.

ಆದಾಯ ತೆರಿಗೆ ಅಧಿಕಾರಿಗಳ ಪ್ರಕಾರ, ಏಕ್ತಾ ಕಪೂರ್ ಅವರ ನಿರ್ಮಾಣ ಸಂಸ್ಥೆ ಬಾಲಾಜಿ ಟೆಲಿ ಫಿಲಂಸ್ ರು.30 ಕೋಟಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಈ ಸಂದರ್ಭದಲ್ಲಿ ಬಾಕಿ ತೆರಿಗೆಯನ್ನು ಪಾವತಿ ಮಾಡುವುದಾಗಿ ಏಕ್ತಾ ಕಪೂರ್ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಏಕ್ತಾ ಕಪೂರ್ ಅವರ ಕಚೇರಿ, ನಿವಾಸ, ಅವರ ತಂದೆ ಜಿತೇಂದ್ರ ಹಾಗೂ ಸೋದರ ತುಷಾರ್ ಕಪೂರ್ ಅವರ ನಿವಾಸಗಳ ಮೇಲೂ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಸರಿ ಸುಮಾರು 100 ಅಧಿಕಾರಿಗಳು ಪಾಲ್ಗೊಂಡಿದ್ದದ್ದು ವಿಶೇಷ.

ಬಾಲಾಜಿ ಟೆಲಿ ಫಿಲಂಸ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಕ್ರಿಯೇಟೀವ್ ಡೈರೆಕ್ಟರ್ ಆಗಿ ಏಕ್ತಾ ಕಪೂರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲಾಜಿ ಟೆಲಿ ಫಿಲಂಸ್ ಸಂಸ್ಥೆ ಹಲವಾರು ಬಾಲಿವುಡ್ ಚಿತ್ರಗಳನ್ನು ನಿರ್ಮಿಸಿದೆ.

ಅವುಗಳಲ್ಲಿ ಮುಖ್ಯವಾಗಿ ದಿ ಡರ್ಟಿ ಪಿಕ್ಚರ್, ರಾಗಿಣಿ ಎಂಎಂಎಸ್, ಏಕ್ ಥಿ ದಯಾನ್, ಶೂಟೌಟ್ ಅಟ್ ವಾದಲಾ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿದೆ. ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ. (ಒನ್ಇಂಡಿಯಾ ಕನ್ನಡ)

English summary
Ekta Kapoor's production house Balaji Telefilms evaded tax to the tune of Rs 30 crore by inflating bills, said the Income Tax Department sources on Friday. Ekta has, however, now agreed to pay the remaining amount, added the sources.
Please Wait while comments are loading...