»   » ಅಗ್ನಿಸಾಕ್ಷಿಯಾಗಿ ಇಷಾ ಡಿಯೋಲ್ ಕೈಹಿಡಿದ ಭರತ್

ಅಗ್ನಿಸಾಕ್ಷಿಯಾಗಿ ಇಷಾ ಡಿಯೋಲ್ ಕೈಹಿಡಿದ ಭರತ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಬಾಲಿವುಡ್ ತಾರೆ ಇಷಾ ಡಿಯೋಲ್ ಮದುವೆಗೆ ಶುಕ್ರವಾರ (ಜೂ.19) ಹಿಂದು ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿತು. ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಅವರ ಪುತ್ರಿ ಉದ್ಯಮಿಯಾಗಿ ಕಾರ್ಯನಿರ್ವಹಿಸುತ್ತಿರುವ ಭರತ್ ತಕ್ತಾನಿ ಅವರ ಕೈಹಿಡಿದರು.

  ಮುಂಬೈನ ಬಾಂದ್ರಾ ಮೂಲದ ವರ ಶ್ವೇತವರ್ಣದ ಕುದುರೆ ಮೇಲೆ ಕಲ್ಯಾಣ ಮಂಟಪಕ್ಕೆ ಆಗಮಿಸಿದರು. ಬಳಿಕ ಅಗ್ನಿಸಾಕ್ಷಿಯಾಗಿ ಇಷಾ ಡಿಯೋಲ್ ಅವರನ್ನು ವರಿಸಿದರು. ವೇದಮಂತ್ರಳ ಸಾಕ್ಷಿಯಾಗಿ ಇಬ್ಬರೂ ಸಪ್ತಪದಿ ತುಳಿದರು.


  ಇವರಿಬ್ಬರ ಮದುವೆ ಜುಹು ಪ್ರದೇಶದಲ್ಲಿರುವ ಇಸ್ಕಾನ್ ಮಂದಿರದಲ್ಲಿ ಹಿರಿಯರು ಹಾಗೂ ಬಂಧುಮಿತ್ರರ ಸಮ್ಮುಖದಲ್ಲಿ ನೆರವೇರಿತು. ಒಂದು ಕಾಲದ ಕನಸಿನ ಕನ್ಯೆ ಹೇಮಾ ಮಾಲಿನಿ ಕಾಂಜಿವರಂ ಸೀರೆಯಲ್ಲಿ ಕಂಗೊಳಿಸುತ್ತಿದ್ದರೆ ಅವರ ಪತಿ ಧರ್ಮೇಂದ್ರ ಸೂಟು ಬೂಟು ಹಾಕಿಕೊಂಡು ಗಮನಸೆಳೆದರು.

  ದಕ್ಷಿಣ ಭಾರತದ ಶೈಲಿಯಲ್ಲಿ ನಡೆದ ಮದುವೆ ಹಿಂದು ಸಂಪ್ರದಾಯದಂತೆ ವಿಧಿವತ್ತಾಗಿ ನೆರವೇರಿತು. ಕೆಂಪು ಮತ್ತು ಚಿನ್ನದ ಕಾಂಜಿವರಂ ಸೀರೆಯಲ್ಲಿ ವಧು ಇಷಾ ಕಣ್ಮನ ಸೂರೆಗೊಂಡರು. ಫೆಬ್ರವರಿ 2012ರಲ್ಲೇ ಇವರಿಬ್ಬರು ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ನೆರವೇರಿತ್ತು.

  ಮೂರು ದಿನಗಳ ಕಾಲ ನಡೆಯುವ ಸಂಗೀತ, ಹಳದಿ ಹಾಗೂ ಮೆಹಂದಿ ಸಂಭ್ರಮಗಳ ಬಳಿಕ ಇಂದು ಇಷಾ ಹೊಸ ಬಾಳಿಗೆ ಅಡಿಯಿಟ್ಟರು. ಆರತಕ್ಷತೆ ಕಾರ್ಯಕ್ರಮ ಮುಂಬೈನ ಪಂಚತಾರಾ ಹೋಟೆಲ್ ನಲ್ಲಿ ಪಂಚಭಕ್ಷ್ಯ ಭೋಜ್ಯಗಳೊಂದಿಗೆ ಶನಿವಾರ (ಜೂ.30) ನಡೆಯಲಿದೆ.

  ವಿಧಿವತ್ತಾಗಿ ನಡೆದ ಈ ಮದುವೆಗೆ ಬಾಲಿವುಡ್ ಸಿನಿಮಾ ತಾರೆಗಳು ಸೇರಿದಂತೆ ರಾಜಕೀಯ ಧುರೀಣರು ಆಗಮಿಸಿದ್ದರು. ಇಷಾರ ಸಹೋದರಿ ಅಹಾನಾ, ಅಭಯ್ ಡಿಯೋಲ್ ಬಾಲಿವುಡ್ ತಾರೆಗಳಾದ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಮನೋಜ್ ಕುಮಾರ್, ವಿನೋದ್ ಖನ್ನಾ, ವೈಜಯಂತಿಮಾಲಾ, ರಮೇಶ್ ಸಿಪ್ಪಿ, ಫರ್ದೀನ್ ಖಾನ್, ಅನು ಮಾಲಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  ಇಷಾ ಹಾಗೂ ಭರತ್ ಕಳೆದ ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದರು. ಬಳಿಕ ಇವರಿಬ್ಬರ ಕುಟುಂಬಿಕರ ಕಣ್ಣಿಗೆ ಬಿದ್ದು ಎರಡೂ ಮನೆ ಕಡೆಯವರು ಮದುವೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಸರಳ ಸುಂದರವಾಗಿ ಇವರಿಬ್ಬರ ಮದುವೆ ಇಂದು ನೆರವೇರಿದೆ.

  'ಕೋಯಿ ಮೇರೆ ದಿಲ್ ಸೆ ಪೂಚೆ' ಎಂಬ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಇಷಾ ಅಡಿಯಿಟ್ಟಿದ್ದರು. ಈ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದರು. ಧೂಮ್, ನೋ ಎಂಟ್ರಿ, ದಸ್ ಚಿತ್ರಗಳು ಇಷಾಗೆ ಹೆಸರು ತಂದುಕೊಟ್ಟಂತಹವು. ಭರತನಾಟ್ಯ, ಒಡಿಸ್ಸಿ ನೃತ್ಯ ಪ್ರಕಾರಗಳ ನಾಟ್ಯ ಮಯೂರಿ ಇಷಾ ಡಿಯೋಲ್. (ಪಿಟಿಐ)

  English summary
  In a typical ''band baaja baraat'' style, veteran actors Hema Malini and Dharmendra's daughter Esha Deol tied the knot with businessman Bharat Takhtani on 29th Friday, 2012 in a traditional Hindu wedding ceremony.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more