For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್ ಗೆ 'ಭಾರತ ರತ್ನ' ಸಿಗಬೇಕು: ಪ್ರಧಾನಿ ಮೋದಿ ಬಳಿ ಅಭಿಮಾನಿಗಳ ಮನವಿ

  |

  ಬಹುಭಾಷಾ ನಟ ಸೋನು ಸೂದ್ ಅವರ ಸಾಮಾಜಿಕ ಸೇವೆಯನ್ನು ಯಾರು ಮರೆಯಲು ಸಾಧ್ಯವಿಲ್ಲ. ಲಾಕ್ ಡೌನಿ ಬಳಿಕ ವಲಸೆ ಕಾರ್ಮಿಕರ ಪಾಲಿಗೆ ದೇವರಾಗಿ ಬಂದ ಸೋನು ಸೂದ್ ಲಕ್ಷಾಂತರ ಬಡವರಿಗೆ ಸಹಾಯ ಮಾಡಿದ್ದಾರೆ. ಅಲ್ಲಿಗೆ ನಿಲ್ಲಿಸದೆ ಲಾಕ್ ಡೌನ್ ಬಳಿಕವೂ ಸೋನು ಸೂದ್ ಸಮಾಜ ಸೇವೆಯನ್ನು ಮುಂದುವರೆಸಿದ್ದಾರೆ.

  ಸೋನು ಸೂದ್ ಕೆಲಸಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ ಸೋನು ಸೂದ್ ಅವರನ್ನು ಮನ-ಮನದಲ್ಲಿ ದೇವರಂತೆ ಪೂಜೆ ಮಾಡುತ್ತಿದ್ದಾರೆ. ಬಡವರಿಗೆ, ಕೃಷಿಕರಿಗೆ, ವಯಸ್ಸಾದವರಿಗೆ, ಮಕ್ಕಳಿಗೆ ಸಹಾಯ ಮಾಡುತ್ತಿರುವ ಸೋನು ಸೂದ್ ಪರವಾಗಿ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

  ಸೋನು ಸೂದ್‌ ಗೆ ಶಿಲ್ಪಾ ಶೆಟ್ಟಿ ಮಗ ಸಲ್ಲಿಸಿದ ಗೌರವ ಅಭಿನಂದನಾರ್ಹ

  ಸೂನು ಸೂದ್ ಗೆ ಸೂಕ್ತ ಗೌರವ ಸಿಗಬೇಕು ಎನ್ನುವುದು ಅಭಿಮಾನಿಗಳ ಆಸೆ. ಹಾಗಾಗಿ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ನೀಡುವಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸೋನು ಸೂದ್ ಫೋಟೋ ಇಟ್ಟು, ಅದಕ್ಕೆ ಕುಂಕುಮ ಹಚ್ಚಿ, ಆರತಿ ಮಾಡುತ್ತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಈ ಫೋಟೋ ಜೊತೆಗೆ ಟ್ವಿಟ್ಟರ್ ಮೂಲಕ ಅಭಿಮಾನಿ ಮಾಡಿಕೊಂಡಿರುವ ಮನವಿಗೆ ಅನೇಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

  'ಪ್ರಧಾನ ಮಂತ್ರಿಗಳೇ. ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ, ವಲಸೆ ಕಾರ್ಮಿಕರಿಗೆ ಸಹಾಯ ಮಾಡಿರುವ ಸೋನು ಸೂದ್ ರಿಯಲ್ ಹೀರೋ ಎಂಬುದನ್ನು ಒಪ್ಪಲೇಬೇಕು. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ' ಅಭಿಮಾನಿಯೊಬ್ಬ ಬರೆದುಕೊಂಡಿದ್ದಾರೆ.

  ಲಾಕ್ ಡೌನ್ ನಲ್ಲಿ Puneet Raj Kumar ಮಾಡಿದ್ದು ಇದನ್ನೆ | Filmibeat Kannada

  ಅಭಿಮಾನಿಯ ಅಭಿಮಾನಕ್ಕೆ ಮನಸೋತ ಸೋನು ಸೂದ್, ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿ ಪೋಸ್ಟ್ ಅನ್ನು ಶೇರ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. ಸಮಾಜ ಸೇವೆ ಜೊತೆಗೆ ಸೋನು ಸೂದ್ ಸಿನಿಮಾ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾ ಸೆಟ್ ಗೆ ಆಗಮಿಸಿದ ಸೂನು ಸೂದ್ ಅವರಿಗೆ ಅದ್ದೂರಿ ಸ್ವಾಗತ ಮಾಡಲಾಗಿದೆ.

  English summary
  Fans request PM Narendra Modi to Honour Sonu Sood With Bharat Ratna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X