»   » 'ಮಹಾಭಾರತ' ಸೀರಿಯಲ್ ಖ್ಯಾತಿ ರವಿ ಛೋಪ್ರಾ ಇನ್ನಿಲ್ಲ

'ಮಹಾಭಾರತ' ಸೀರಿಯಲ್ ಖ್ಯಾತಿ ರವಿ ಛೋಪ್ರಾ ಇನ್ನಿಲ್ಲ

Posted By:
Subscribe to Filmibeat Kannada

ಹಿಂದಿ ಟೆಲಿವಿಷನ್ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಮಹಾಭಾರತ ಟೆಲಿ ಸೀರಿಯಲ್ ನಿರ್ದೇಶಕ ರವಿ ಛೋಪ್ರಾ ಅವರು ಮುಂಬೈನಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಬಿ.ಆರ್ ಛೋಪ್ರಾ ನಿರ್ಮಿಸಿದ್ದ 1988 ರಿಂದ 1990ರ ತನಕ ದೂರದರ್ಶನದಲ್ಲಿ ತೆರೆಕಂಡ ಮಹಾಭಾರತ್ ಧಾರಾವಾಹಿಯನ್ನು ರವಿ ಛೋಪ್ರಾ ಸಮರ್ಥವಾಗಿ ಭಾರತದ ಮೂಲೆ ಮೂಲೆಗೆ ತಲುಪಿಸಿದ್ದರು.

ಆಸ್ತಮಾ ತೊಂದರೆಯಿಂದ ಬಳಲುತ್ತಿದ್ದ ರವಿ ‍ಛೋಪ್ರಾ ಅವರನ್ನು ಕಳೆದ ಕೆಲ ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಹಿಂದಿ ಚಿತ್ರರಂಗದ ದಿಗ್ಗಜ ಚಿತ್ರಕರ್ಮಿ ಬಿ.ಆರ್ ಛೋಪ್ರಾ ಅವರ ಪುತ್ರ ರವಿ ಛೋಪ್ರಾ ಅವರು 2012ರಿಂದ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು.

Maharabhat TV Series fame Filmmaker Ravi Chopra Passes Away

ರವಿ ಛೋಪ್ರಾ ನಿರ್ದೇಶಿಸಿದ ಚಿತ್ರಗಳು:
* ಜಮೀರ್ (1975)
* ದಿ ಬರ್ನಿಂಗ್ ಟ್ರೈನ್
* ಮಜ್ದೂರ್
* ದಹ್ಲೀಜ್
* ಬಾಗ್ಬನ್
* ಬಾಬುಲ್

ಆಮಿತಾಬ್ ಬಚ್ಚನ್ ಅಭಿನಯದ ಭೂತ್ ನಾಥ್ ಹಾಗೂ ಭೂತ್ ನಾಥ್ ರಿಟರ್ನ್ಸ್ ಚಿತ್ರಗಳನ್ನು ನಿರ್ಮಿಸಿದ್ದರು. ಇದಲ್ಲದೆ ವಿಷ್ಣು ಪುರಾಣ, ಮಾ ಶಕ್ತಿ ಮುಂತಾದ ಪೌರಾಣಿಕ ಸರಣಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಸದ್ಯಕ್ಕೆ ವಾಸುದೇವ ಕೃಷ್ಣ ಸರಣಿ ನಿರ್ದೇಶನದಲ್ಲಿ ತೊಡಗಿದ್ದರು.

English summary
Filmmaker Ravi Chopra passed away in Mumbai today. He was 68 years old. He directed movies like The Burning Train, Baaghban and Babul. He also directed hit TV serial Mahabharata, produced by his father BR Chopra.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada