For Quick Alerts
  ALLOW NOTIFICATIONS  
  For Daily Alerts

  20 ವರ್ಷಗಳ ನಂತರ 'ಗದಾರ್' ಸಿಕ್ವೆಲ್‌ಗೆ ಚಾಲನೆ

  By ರವೀಂದ್ರ ಕೊಟಕಿ
  |

  'ಗದಾರ್', ಏಕ್ ಪ್ರೇಮ್ ಕಥಾ ಭಾರತ-ಪಾಕಿಸ್ತಾನದ ವಿಭಜನೆ, ದೇಶಭಕ್ತಿ ಮತ್ತು ಅದರೊಳಗೊಂದು ಸಾಂಸಾರಿಕ ಪ್ರೇಮಕಥೆಯನ್ನು ಕಾಣಬಹುದು. ಕಥೆಯ ವಿಷಯಕ್ಕೆ ಬರುವುದಾದರೆ 'ತಾರಾ ಸಿಂಗ್ ' ಸಿಖ್ ಸಮುದಾಯಕ್ಕೆ ಸೇರಿದ ಟ್ರಕ್ ಡ್ರೈವರ್. ಪಾಕಿಸ್ತಾನದ ಮುಸ್ಲಿಂ ಹುಡುಗಿ 'ಸಕಿನಾ' ಪ್ರೀತಿಯಲ್ಲಿ ಬೀಳುತ್ತಾನೆ.

  ಒಂದಡೆ ದೇಶದ ವಿಭಜನೆಯಿಂದ ಭಾರತ-ಪಾಕಿಸ್ತಾನ ದೇಶಗಳು ಏರ್ಪಟ್ಟು ಹಿಂದೂ, ಸಿಖ್ ಮೇಲೆ ಪಾಕಿಸ್ತಾನದಲ್ಲಿ ನರಮೇಧ ನಡೆಯುತ್ತಿರುತ್ತದೆ. ದಂಗೆ ನಡೆಯುವ ಈ ಸಮಯದಲ್ಲೇ ತನ್ನ ಕುಟುಂಬದಿಂದ ಬೇರೆಯಾಗುವ 'ಸಕಿನಾ'ನನ್ನು ಕಾಪಾಡಿ ಅವಳನ್ನು ಮದುವೆಯಾಗುತ್ತಾನೆ. ಇವರ ಪ್ರೀತಿಗೆ ಸಾಕ್ಷಿಯಾಗಿ ಒಂದು ಮಗು ಕೂಡ ಹುಟ್ಟುತ್ತದೆ. ಮುಂದೆ ಈಕೆಯ ತಂದೆ ಲಾಹೋರ್ ಮೇಯರ್ ಆಗುತ್ತಾನೆ. ಭಾರತದ ಸರಹದ್ದನ್ನು ದಾಟಿ ಪಾಕಿಸ್ತಾನಕ್ಕೆ ಹೋಗುವ ಸಕೀನಾ ಅಲ್ಲಿ ಅನುಭವಿಸುವ ಯಾತನೆ ನಂತರ ತಾರಾ ಅಲ್ಲಿಗೆ ಹೋಗಿ ತನ್ನ ಹೆಂಡತಿ ಮತ್ತು ಮಗುವನ್ನು ಪಾಕಿಸ್ತಾನದಿಂದ ಬಿಡಿಸಿಕೊಂಡು ಬರುವ ಸಾಹಸಮಯ ದೇಶಭಕ್ತಿಯ ಹಂದರವುಳ್ಳ ಕಥೆ 'ಗದಾರ್'.

  ಸನ್ನಿ ಡಿಯೋಲ್ ಅಮಿಷ ಪಾಟೀಲ್ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ಅನಿಲ್ ಶರ್ಮ ನಿರ್ದೇಶನ ಮಾಡಿದ್ದರು. 2001ರಲ್ಲಿ ಬಿಡುಗಡೆಯಾದ ಈ ಚಿತ್ರವೂ ಭರ್ಜರಿ ಯಶಸ್ಸನ್ನು ಕೂಡ ಬಾಕ್ಸಾಫೀಸಿನಲ್ಲಿ ಕಂಡಿತು. ವಾಸ್ತವದಲ್ಲಿ ಅಮಿಷಾ ಪಟೇಲ್ ಅಥವಾ ಸನ್ನಿಡಿಯೋಲ್ ಸಿನಿಮಾ ಕೆರಿಯರ್ ನಲ್ಲಿ ಮತ್ತೆ ಇಂತಹ ದೊಡ್ಡ ಯಶಸ್ಸಿನ ಚಿತ್ರ ಮತ್ತೊಂದು ಇದುವರೆಗೂ ಬಂದಿಲ್ಲ. ನಿರ್ದೇಶಕ ಅನಿಲ್ ಶರ್ಮ ಕೂಡ ಮತ್ತೊಂದು ಯಶಸ್ಸಿನ ಚಿತ್ರವನ್ನು ನೋಡಲಿಲ್ಲ. ಚಿತ್ರ ಬಿಡುಗಡೆಯಾಗಿ ಆಗಿ 20 ವರ್ಷಗಳೇ ಕಳೆದಿದ್ದರೂ ಜನಮಾನಸದಲ್ಲಿ ಒಂದು ಅತ್ಯುತ್ತಮ ಚಿತ್ರವಾಗಿ 'ಗದಾರ್' ಉಳಿದುಕೊಂಡಿದೆ.

  'ಗದಾರ್' ಏಕ್ ಪ್ರೇಮ್ ಕಥಾ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಎರಡು ದಶಕಗಳ ಹಿಂದೆ ಚಿತ್ರ ಬಿಡುಗಡೆಯಾಯಿತು. ಆ ಸಮಯದಲ್ಲಿ ಭಾರತೀಯ ಚಿತ್ರರಂಗದ ಎಲ್ಲ ದಾಖಲೆಗಳನ್ನು ಮುರಿದ 'ಗದಾರ್' ಸಾರ್ವಕಾಲಿಕ ದೊಡ್ಡ ಹಿಟ್ ಚಿತ್ರವಾಗಿತ್ತು. ಈಗ 20 ವರ್ಷಗಳ ನಂತರ 'ಗದಾರ್' ಮುಂಚೂಣಿಗೆ ಬಂದಿದೆ. ಹಾಗಂತ ಚಿತ್ರವನ್ನು ರಿ-ರಿಲೀಸ್ ಮಾಡುತ್ತಿಲ್ಲ. 'ಗದಾರ್' ಐತಿಹಾಸಿಕ ಚಿತ್ರವನ್ನು ಮುಂದುವರಿಸಿ ಸಿಕ್ವೆಲ್ ಮಾಡಲು ನಿರ್ದೇಶಕ ಅನಿಲ್ ಶರ್ಮ ಮನಸ್ಸು ಮಾಡಿದ್ದಾರೆ. 'ಗದಾರ್-2' ಚಿತ್ರದಲ್ಲು ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಜೊತೆಗೂಡಿ ನಟಿಸಲಿದ್ದಾರೆ.

  ಇದು ದೇಶ ವಿಭಜನೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ತೆರಳಿದ ತನ್ನ ಪತ್ನಿ ಮತ್ತು ಮಗನನ್ನು ಮರಳಿ ಕರೆತರಲು ಹೋದ ವ್ಯಕ್ತಿಯೊಬ್ಬನ ಕಥೆ. ಅದರಲ್ಲಿನ ಭಾವನೆಗಳು ಮತ್ತು ಸಾಹಸ ದೃಶ್ಯಗಳು ಆ ಸಮಯದಲ್ಲಿ ಪ್ರೇಕ್ಷಕರನ್ನು ಸೆಳೆದವು. ಗದರ್ ಸನ್ನಿ ಡಿಯೋಲ್ ಮತ್ತು ಅಮೀಷಾ ಅವರ ವೃತ್ತಿಜೀವನದ ಅತ್ಯಂತ ಗಮನಾರ್ಹ ಚಿತ್ರಗಳಲ್ಲಿ ಗದಾರ್ ಒಂದಾಗಿದೆ. ಚಿತ್ರದ ಮುಂದುವರಿದ ಭಾಗವನ್ನು ಮಾಡಲು ಈಗ ಚಿತ್ರತಂಡ ಸಿದ್ಧಗೊಳ್ಳುತ್ತಿದೆ. 'ಗದಾರ್' ಸೀಕ್ವೆಲ್ ಅನ್ನು ಇತ್ತೀಚೆಗೆ ಅಧಿಕೃತವಾಗಿ ಘೋಷಿಸಲಾಗಿದೆ. ಅನಿಲ್ ಶರ್ಮಾ ನಿರ್ದೇಶನದ ಜೊತೆಗೆ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಸನ್ನಿ ಡಿಯೋಲ್ ಮತ್ತು ಅಮೀಷಾ ಪಟೇಲ್ ಕೂಡ ಸೀಕ್ವೆಲ್ ನಲ್ಲಿ ಕೈಜೋಡಿಸಿದ್ದಾರೆ.

  Gadar Movie Sequel Announced After 20 Years

  'ಗದಾರ್' ಚಿತ್ರ ನೋಡಿದ ಯಾರಿಗಾದರೂ ಖಂಡಿತ ಅನಿಸುವುದು ಇದು ಸಿಕ್ವೆಲ್ ಮಾಡುವ ಅವಕಾಶಗಳು ಇರುವಂತಹ ಚಿತ್ರ. ಏಕೆಂದರೆ ಚಿತ್ರ ಕೊನೆಯ ಹಂತದಲ್ಲಿ ಸುಖಾಂತ್ಯವಾಗುತ್ತದೆ ಮುಂದುವರಿಸುವುದಕ್ಕೆ ಅಲ್ಲಿ ನಿರ್ದೇಶಕರು ಹೆಚ್ಚಿನ ಅವಕಾಶಗಳನ್ನು ಕೂಡ ಬಿಟ್ಟುಕೊಟ್ಟಿಲ್ಲ. ಅದು ಅಲ್ಲದೆ, 2001 ರ ಹೊತ್ತಿಗೆ, ಅಮೀಷಾ ತನ್ನ ಉತ್ತುಂಗದಲ್ಲಿದ್ದಳು. ಸನ್ನಿಡಿಯೋಲ್ ಕೂಡ ಮಾಗಿದ ನಾಯಕನಾಗಿದ್ದರು. ಆದರೆ ಈಗ ಎರಡು ದಶಕಗಳ ಅವಧಿ ಮೀರಿದೆ. ಅಮೀಷಾ ಬಹುತೇಕ ಸಿನಿಮಾಗಳಿಂದ ದೂರ ಹೋಗಿದ್ದಾರೆ. ಸನ್ನಿ ನಾಮಮಾತ್ರವಾಗಿ ಮುಂದುವರಿದಿದ್ದಾರೆ. 'ಗದಾರ್' ನಂತರ ಅನಿಲ್ ಶರ್ಮಾ ಒಂದೇ ಒಂದು ಹಿಟ್ ಸಿನಿಮಾ ಮಾಡಿಲ್ಲ. ಈ ಸಂದರ್ಭಗಳಲ್ಲಿ 'ಗದಾರ್' ಸೀಕ್ವೆಲ್ ಸಿನಿಮಾದ ಮೇಕಿಂಗ್ ಮತ್ತು ಅದರ ಸಕ್ಸಸ್ ಬಗ್ಗೆ ಬಾಲಿವುಡ್ ಮಂದಿ ಚಿತ್ರೀಕರಣದ ಆರಂಭಕ್ಕೆ ಮೊದಲೇ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೆಲ್ಲ ಏನೇ ಇರಬಹುದು ಆದರೆ 'ಗದಾರ್ -2' ಚಿತ್ರ ತೆರೆಗೆ ಬರುವ ದಿನಗಳು ತುಂಬಾ ದೂರದಲ್ಲಿಲ್ಲ.

  English summary
  Gadar; Ek Prem Katha movie sequel announced after 20 years. Gadar movie released on June 15, 2001. It was a super hit movie back then. now its sequel getting ready.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X