For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಪತ್ನಿ ಗೌರಿ ಖಾನ್‌ಗೆ ಪ್ರತಿಷ್ಠಿತ ಪ್ರಶಸ್ತಿ

  |

  ಶಾರುಖ್ ಖಾನ್ ಪತ್ನಿ ಗೌರಿ ಖಾನ್‌ಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಒಳಾಂಗಣ ವಿನ್ಯಾಸಕ್ಕೆ ನೀಡಲಾಗುವ ಪ್ರತಿಷ್ಠಿತ ಎಡಿ-100 ಪಟ್ಟಿಗೆ ಗೌರಿ ಸೇರಿಕೊಂಡಿದ್ದಾರೆ, ಜೊತೆಗೆ ಟ್ರೋಫಿಯನ್ನು ಸಹ ಪಡೆದುಕೊಂಡಿದ್ದಾರೆ.

  ಈ ವಿಷಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಗೌರಿ ಖಾನ್, 'ಎಡಿ100 ನ ಭಾಗವಾಗುವುದಕ್ಕೆ ಹಾಗೂ ಈ ಸುಂದರ ಟ್ರೋಫಿಯನ್ನು ಪಡೆದುಕೊಂಡಿರುವುದಕ್ಕೆ ಬಹಳಾ ಸಂತೋಷವಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.

  ಶಾರುಖ್ ಖಾನ್ ಮನೆಯಲ್ಲಿ ಒಂದು ದಿನ ಅತಿಥಿಯಾಗುವ ಸುವರ್ಣಾವಕಾಶ!

  ತಮ್ಮ ಹಾಸ್ಯಪ್ರಜ್ಞೆಯಿಂದ ಸೆಳೆಯುವ ಶಾರುಖ್ ಖಾನ್, ಪತ್ನಿಗೆ ಪ್ರಶಸ್ತಿ ಬಂದ ಸಂದರ್ಭದಲ್ಲಿ ತಮ್ಮನ್ನು ತಾವೇ ತಮಾಷೆ ಮಾಡಿಕೊಂಡಿದ್ದಾರೆ.

  ಪತ್ನಿಯ ಟ್ವೀಟ್‌ಗೆ ಕಮೆಂಟ್ ಮಾಡಿರುವ ಶಾರುಖ್, 'ಸದ್ಯ, ಮನೆಯಲ್ಲಿ ಒಬ್ಬರಿಗಾದರೂ ಪ್ರಶಸ್ತಿ ಬಂತಲ್ಲ' ಎಂದಿದ್ದಾರೆ ಶಾರುಖ್. ಆ ಮೂಲಕ ತಮಗೆ ಪ್ರಶಸ್ತಿಗಳು ಬರುತ್ತಿಲ್ಲ ಎಂಬುದನ್ನು ತಮಾಷೆ ಧ್ವನಿಯಲ್ಲಿ ಹೇಳಿದ್ದಾರೆ.

  ಮೊದಲ ಬಾರಿಗೆ ಒಂದಾಗುತ್ತಿದ್ದಾರೆ ಖಾನ್ ತ್ರಯರು: ಸಿನಿಮಾ ಯಾವುದು?

  ಹದಿನೈದು ಫಿಲಂಫೇರ್ ಪಡೆದಿರುವ ಶಾರುಖ್

  ಹದಿನೈದು ಫಿಲಂಫೇರ್ ಪಡೆದಿರುವ ಶಾರುಖ್

  ಆದರೆ ಇದು ನಿಜವೇನೂ ಅಲ್ಲ, ಶಾರುಖ್ ಖಾನ್ ಹದಿನೈದು ಬಾರಿ ಫಿಲಂ ಫೇರ್‌ ಪ್ರಶಸ್ತಿ ಪಡೆದಿದ್ದಾರೆ. ಒಂಬತ್ತು ಸ್ಟಾರ್ ಸ್ಕ್ರೀನ್ ಅವಾರ್ಡ್, ನಾಲ್ಕು ಬಾರಿ ಅಂತರರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ ಪ್ರಶಸ್ತಿ, 12 ಜೀ ಸಿನಿಮಾ ಪ್ರಶಸ್ತಿ, ಎರಡು ಗ್ಲೋಬಲ್ ಇಂಡಿಯಾ ಫಿಲಂ ಪ್ರಶಸ್ತಿ ಪಡೆದಿದ್ದಾರೆ. ಕೇಂದ್ರದ ರಾಜೀವ್ ಗಾಂಧಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಶಾರುಖ್ ಖಾನ್‌ಗೆ ಈವರೆಗೆ ನಟನೆಗೆ ರಾಷ್ಟ್ರಪ್ರಶಸ್ತಿ ದೊರಕಿಲ್ಲ.

  ಹೃತಿಕ್ ಮಾಜಿ ಪತ್ನಿ ಜೊತೆ ಸೇರಿ ಸಂಸ್ಥೆ ತೆರೆದಿದ್ದ ಗೌರಿ

  ಹೃತಿಕ್ ಮಾಜಿ ಪತ್ನಿ ಜೊತೆ ಸೇರಿ ಸಂಸ್ಥೆ ತೆರೆದಿದ್ದ ಗೌರಿ

  ಗೌರಿ ಖಾನ್ ಪ್ರಶಸ್ತಿಯ ವಿಷಯಕ್ಕೆ ಮರಳುವುದಾದರೆ, ಭಾರತದ ಖ್ಯಾತ ಒಳಾಂಗಣ ವಿನ್ಯಾಸಕರಲ್ಲಿ ಒಬ್ಬರು ಗೌರಿ ಖಾನ್. ಹೃತಿಕ್ ರೋಷನ್ ಮಾಜಿ ಪತ್ನಿ ಸೂಸನ್ ಖಾನ್ ಜೊತೆ ಸೇರಿ ಹಲವು ಪ್ರತಿಷ್ಠಿತ ಪ್ರಾಜೆಕ್ಟ್‌ಗಳನ್ನು ಕೆಲವು ವರ್ಷಗಳ ಹಿಂದೆ ನಿರ್ವಹಿಸಲಿದ್ದಾರೆ ಗೌರಿ ಖಾನ್. ಬಾಲಿವುಡ್‌ನ ಹಲವು ಸ್ಟಾರ್ ನಟ-ನಟಿಯರ ಮನೆ, ಕಚೇರಿಗಳನ್ನು ಗೌರಿ ವಿನ್ಯಾಸಗೊಳಿಸಿದ್ದಾರೆ. ಶಾರುಖ್ ಜೊತೆಗೆ ಸೇರಿ ಹಲವು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.

  ದೆಹಲಿ ಮನೆಯನ್ನು ವಿನ್ಯಾಸ ಮಾಡಿರುವ ಗೌರಿ

  ದೆಹಲಿ ಮನೆಯನ್ನು ವಿನ್ಯಾಸ ಮಾಡಿರುವ ಗೌರಿ

  ಶಾರುಖ್ ಖಾನ್-ಗೌರಿ ಅವರು ದೆಹಲಿಯಲ್ಲಿ ವಾಸವಿದ್ದ ಹಳೆಯ ಮನೆಯನ್ನು ಗೌರಿ ಖಾನ್ ಸ್ವತಃ ಮರಳಿ ವಿನ್ಯಾಸ ಮಾಡಿದ್ದು, ಆ ಮನೆಯಲ್ಲಿ ಒಂದು ದಿನ ಅತಿಥಿಯಾಗಿ ಉಳಿಯುವ ಅವಕಾಶವನ್ನು ಸಾರ್ವಜನಿಕರಿಗೆ ಒದಗಿಸಿದ್ದಾರೆ. ಸಾರ್ವಜನಿಕರು ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ ಆ ಅವಕಾಶ ಪಡೆಯಬೇಕಿದೆ.

  ರಿಲೀಸ್ ಆಯ್ತು ಇಂದ್ರಜಿತ್ ಲಂಕೇಶ್ Shakeela ಟ್ರೈಲರ್ | Filmebeat Kannada
  ನಿರ್ಮಾಪಕಿ ಆಗಿಯೂ ಗೌರಿಗೆ ಯಶಸ್ಸು

  ನಿರ್ಮಾಪಕಿ ಆಗಿಯೂ ಗೌರಿಗೆ ಯಶಸ್ಸು

  ನಿರ್ಮಾಪಕಿಯಾಗಿಯೂ ಗೌರಿ ಖಾನ್ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಪತಿ ಶಾರುಖ್ ಜೊತೆಗೆ ರೆಡ್ ಚಿಲ್ಲೀಸ್ ಸಿನಿಮಾ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿರುವ ಗೌರಿ, ಈವರೆಗೆ 17 ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಮೈ ಹೂ ನಾ ಸಿನಿಮಾದಲ್ಲಿ ಒಂದು ದೃಶ್ಯದಲ್ಲಿ ಕಾಣಿಸಿಕೊಳ್ಳುವ ಗೌರಿ, ಶಾರುಖ್ ಜೊತೆ ಕೆಲವು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ, ಹಾಗೂ ಫ್ಯಾಷನ್ ಶೋ ಒಂದರಲ್ಲಿ ಹೆಜ್ಜೆ ಹಾಕಿದ್ದಾರೆ.

  English summary
  Shah Rukh Khan's wife Gauri Khan got an award. Shah Rukh pulls his own leg in twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X