For Quick Alerts
  ALLOW NOTIFICATIONS  
  For Daily Alerts

  ಮಗನ ಹೆಸರು ಬಹಿರಂಗ ಪಡಿಸಿದ ಗೀತಾ ಬಸ್ರಾ- ಹರ್ಭಜನ್ ಸಿಂಗ್ ದಂಪತಿ; ಹೆಸರಿನ ವಿಶೇಷತೆ ಏನು?

  By ಫಿಲ್ಮಿಬೀಟ್ ಡೆಸ್ಕ್
  |

  ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಮತ್ತು ನಟಿ ಗೀತಾ ಬಸ್ರಾ ದಂಪತಿ ಜುಲೈ 10ರಂದು ಎರಡನೇ ಮಗುವನ್ನು ಸ್ವಾಗತಿಸಿದರು. ಗೀತಾ ಗಂಡು ಮಗುವಿಗೆ ಜನ್ಮ ನೀಡಿದ ಸಂತಸದ ವಿಚಾರವನ್ನು ಪತಿ ಹರ್ಭಜನ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, 'ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ' ಎಂದು ತಿಳಿಸಿದ್ದರು.

  ಅಂದಹಾಗೆ ಗೀತಾ ಮತ್ತು ಹರ್ಭಜನ್ ದಂಪತಿಗೆ ಈಗಾಗಲೇ 5 ವರ್ಷದ ಮಗಳಿದ್ದಾಳೆ. ಮಗಳಿಗೆ ಹಿನಾಯಾ ಎಂದು ಹೆಸರಿಟ್ಟಿದ್ದಾರೆ. ಇದೀಗ ಎರಡನೇ ಮಗನ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಜುಲೈ 26ರಂದು ಮುದ್ದಿನ ಮಗನ ಹೆಸರನ್ನು ಗೀತಾ ಬಸ್ರಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

  ಮಗನಿಗೆ 'ಜೋವನ್ ವೀರ್ ಸಿಂಗ್ ಪ್ಲಾಹಾ' ಎಂದು ನಾಮಕರಣ ಮಾಡಿದ್ದಾರೆ. ಮಗನಿಗೆ ಜೋವನ್ ಎಂದು ಹೆಸರಿಟ್ಟ ಹಿಂದಿನ ಕಾರಣ ಕಾರಣವನ್ನು ಗೀತಾ ಬಹಿರಂಗ ಪಡಿಸಿದ್ದಾರೆ. ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಗನ ಹೆಸರಿನ ಬಗ್ಗೆ ಮಾತನಾಡಿರುವ ಗೀತಾ ಈ ಹೆಸರನ್ನು ಮೊದಲ ಗರ್ಭಿಣಿಯಾಗಿದ್ದಾಗಲೇ ಆಯ್ಕೆ ಮಾಡಿರುವುದಾಗಿ ಹೇಳಿದ್ದಾರೆ. ಗಂಡು ಮಗುವಾಗುತ್ತೆ ಎಂದು ಈ ಹೆಸರನ್ನು ಆಯ್ಕೆ ಮಾಡಿದ್ದೆ ಎಂದು ಗೀತಾ ಹೇಳಿದ್ದಾರೆ.

  "ನಾನು ಹಿನಾಯಾ ಹೊಟ್ಟೆಯಲ್ಲಿ ಇದ್ದಾಗಲೇ ಈ ಹೆಸರನ್ನು ಆಯ್ಕೆ ಮಾಡಿದ್ದೆ. ಆಗ ನಾನು ಗಂಡು ಮಗುವಾಗುತ್ತೆ ಎಂದು ಯೋಚಿಸಿದ್ದೆ. ಆಗ ಹರ್ಭನ್ ಹೆಣ್ಣು ಮಗುವಾದರೆ ಏನು ಮಾಡುತ್ತೀಯಾ, ಹೆಣ್ಣು ಮಗುವಿನ ಹೆಸರನ್ನು ಆಯ್ಕೆ ಮಾಡು ಎಂದಿದ್ದರು. ನಾನು ಗಂಡು ಮಗುನೇ ಆಗೋದು ಎನ್ನುತ್ತಿದೆ. ಆದರೆ ಹೆಣ್ಣು ಮಗುವಾಯಿತು. ಹೆಸರಿಡಲು ಧಾರ್ಮಿಕ ವಿಧಾನವಿದೆ. ಜೆ ಹೆಸರು ಬಂದಿತ್ತು. ಜೋವನ್ ಎನ್ನುವ ಹೆಸರು ಆಯ್ಕೆ ಮಾಡಿದೆ. ಈ ಹೆಸರು ಹಿನಾಯಾ ಹುಟ್ಟಿದಾಗಿನಿಂದ ನನ್ನೊಂದಿಗೆ ಅಂಟಿಕೊಂಡಿತ್ತು" ಎಂದು ಹೇಳಿದ್ದಾರೆ.

  ಎರಡನೇ ಮಗುವಿನ ಮುಖವನ್ನು ತೋರಿಸದೆ ಫೋಟೋವನ್ನು ಗೀತಾ ಹಂಚಿಕೊಂಡಿದ್ದಾರೆ. ಮಗಳು ಹಿನಾಯಾ ಪುಟ್ಟ ತಮ್ಮ ಜೋವನ್ ನನ್ನು ಕಾಲಮೇಲೆ ಕೂರಿಸಿಕೊಂಡು ಹಣೆಗೆ ಮುತ್ತಿಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

  2006 ರಲ್ಲಿ ಇಮ್ರಾನ್ ಹಶ್ಮಿ ಅಭಿನಯದ "ದಿಲ್ ದಿಯಾ ಹೈ" ಚಿತ್ರದ ಮೂಲಕ ಗೀತಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಅನೇಕ ಸಿನಿಮಾಗಳಲ್ಲಿ ನಟಿಸಿರುವ ಗೀತಾ, ಅಕ್ಟೋಬರ್ 29, 2015ರಲ್ಲಿ ಹರ್ಭಜನ್ ಸಿಂಗ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪಂಜಾಬ್‌ನ ಜಲಂಧರ್ನಲ್ಲಿ ಇಬ್ಬರ ಮದುವೆ ನಡೆದಿತ್ತು. ಇಬ್ಬರು ಮುದ್ದಾದ ಮಕ್ಕಳ ತಾಯಿ ಗೀತಾ ಬಸ್ರಾ ಸದ್ಯ ಸಿನಿಮಾರಂಗದಿಂದ ದೂರ ಇದ್ದಾರೆ.

  ಇನ್ನು ಕ್ರಿಕೆಟ್ ಬಳಿಕ ಹರ್ಭಜನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜಾನ್ ಪೌಲ್ ರಾಜ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಫ್ರೆಂಡ್‌ಷಿಪ್ ಸಿನಿಮಾದಲ್ಲಿ ಹರ್ಭಜನ್ ಸಿಂಗ್ ನಟಿಸುತ್ತಿದ್ದಾರೆ. ಹರ್ಭಜನ್ ಜೊತೆ ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೂ ಮುಂಚೆ ಹಿಂದಿಯ ಆಲ್ಬಮ್ ಮತ್ತು ಕೆಲವು ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು.

  English summary
  Geeta Basra And Harbhajan Singh name their baby boy Jovan Veer Singh plaha. She reveals reason behind naming of Jovan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X