ಪತ್ನಿ ಮುಂದೆಯೇ ಪರಸ್ತ್ರಿಗೆ ಕಿಸ್ ಮಾಡಿದ ರಿತೇಶ್: ಪತಿಗೆ ಕ್ಲಾಸ್ ತೆಗೆದುಕೊಂಡ ಜೆನಿಲಿಯಾ
ಪತ್ನಿ ಜೊತೆಯಲ್ಲೇ ಇರುವಾಗಲೇ ಪರಸ್ತ್ರಿಯರ ಜೊತೆ ಸಲುಗೆಯಿಂದ ನಡೆದುಕೊಳ್ಳುವ ಪತಿಯರನ್ನು ಯಾವ ಹೆಂಡತಿಯೂ ಸಹಿಸುವುದಿಲ್ಲ. ಮನೆಗೆ ಹೋದ ಮೇಲೆ ಗಂಡನನ್ನು ತರಾಟೆ ತೆಗೆದುಕೊಳ್ಳುವುದು ಪಕ್ಕಾ. ಇದೇ ವಿಚಾರಕ್ಕೆ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಮತ್ತು ನಟಿ ಜೆನಿಲಿಯಾ ದಂಪತಿಯ ಫೈಟಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೆನಿಲಿಯಾ ಮತ್ತು ರಿತೇಶ್ ದಂಪತಿ ಗಂಭೀರ ವಿಚಾರದ ಕುರಿತು ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾರ್ಯಕ್ರಮವೊಂದಕ್ಕೆ ನಟ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಎಂಟ್ರಿ ಕೊಡುತ್ತಿದ್ದಂತೆ ನಟಿ ಪ್ರೀತಿ ಜಿಂಟಾ ಎದುರಾಗುತ್ತಾರೆ. ರಿತೇಶ್, ಪ್ರೀತಿಯನ್ನು ಹಗ್ ಮಾಡಿ ಕಿಸ್ ಮಾಡುತ್ತಾರೆ.
ಪಕ್ಕದಲ್ಲೇ ನಿಂತಿದ್ದ ಜೆನಿಲಿಯಾ ಎಕ್ಸ್ ಪ್ರೆಷನ್ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಜೆನಿಲಿಯಾ ನಗುತ್ತಲ್ಲೇ ಇದ್ದರು ಪತಿಯ ಅವತಾರ ನೋಡಿ ಒಳಗೊಳಗೆ ಕೋಪ ಉಕ್ಕಿಬರುತ್ತಿರುವ ಹಾಗಿತ್ತು. ಈ ವಿಡಿಯೋವನ್ನು ಜೆನಿಲಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮನೆಗೆ ಹೋದಮೇಲೆ ಏನಾಯಿತು ಅಂತ ತಿಳ್ಕೋಬೇಕಾ? ಎಂದು ಕ್ಯಾಪ್ಷನ್ ನೀಡಿದ್ದಾರೆ. ವಿಡಿಯೋ ಮುಂದುವರೆದ ಭಾಗದಲ್ಲಿ ಜೆನಿಲಿಯಾ ಪತಿಗೆ ಸರಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಿತೇಶ್ ದೇಶ್ ಮುಖ್ ಕೈ ಮುಗಿದು ಕೇಳಿಕೊಳ್ಳುವಷ್ಟು ಪಂಚ್ ನೀಡಿದ್ದಾರೆ.
ಇದು ತಮಾಷೆಯ ವಿಡಿಯೋವಾಗಿದ್ದರು ಸಹ ಗಂಭೀರವಾದ ವಿಚಾರವಾಗಿದೆ. ರಿತೇಶ್ ಮತ್ತು ಜೆನಿಲಿಯಾ ಅವರ ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ಹರಿದುಬರುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಸಹ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











