Don't Miss!
- Sports
ಕೆಎಲ್ ರಾಹುಲ್ಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ವಿರಾಟ್ ಕೊಹ್ಲಿ; ಧೋನಿಯಿಂದಲೂ ದುಬಾರಿ ಉಡುಗೊರೆ!
- News
ಹರಿಯಾಣ ಘಟಕ ವಿಸರ್ಜಿಸಿದ ಆಮ್ ಆದ್ಮಿ ಪಕ್ಷ
- Lifestyle
ಆರೋಗ್ಯಕರ ಸ್ತನದ ಲಕ್ಷಣಗಳೇನು? ಸ್ತನಗಳು ಹೇಗಿದ್ದರೆ ನಿರ್ಲಕ್ಷ್ಯ ಮಾಡಲೇಬಾರದು?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Salman Khan Birthday: ಲಕ್ಕಿ ಬ್ರೇಸ್ಲೈಟ್..ಜೈಲು ವಾಸ.. 2000 ಕೋಟಿ ಆಸ್ತಿ.. ದುಬಾರಿ ನಟ ಸಲ್ಲು ಇಂಟ್ರೆಸ್ಟಿಂಗ್ ಸಂಗತಿಗಳು
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜಗತ್ತಿನ ಬಹು ಜನಪ್ರಿಯ ನಟನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅದ್ಭುತ ನಟ ಅಲ್ಲದೇ ಇದ್ದರೂ ಸಲ್ಮಾನ್ ಖಾನ್‌ಗೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇದೆ. ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ.
ಸಲ್ಮಾನ್ ಖಾನ್ ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಸಾಕಷ್ಟು ನಟಿಯರ ಜೊತೆಗೆ ಸಲ್ಲು ಹೆಸರು ತಳುಕು ಹಾಕಿಕೊಂಡಿತ್ತು. ವಯಸ್ಸು 50 ದಾಟಿದರೂ ಬಾಕ್ಸಾಫೀಸ್ ಸುಲ್ತಾನ್ ಮದುವೆ ಮಾತ್ರ ಆಗಿಲ್ಲ. ಸಂಭಾವನೆ, ಲಾಭದಲ್ಲಿ ಪಾಲು ಅಂತ ಚಿತ್ರವೊಂದಕ್ಕೆ ಸಲ್ಲು ವರಮಾನ 100 ಕೋಟಿ ದಾಟಿಬಿಡುತ್ತದೆ. ಇನ್ನು ಜಾಹಿರಾತು ಒಂದಕ್ಕೆ 5ರಿಂದ 10 ಕೋಟಿ ಸಂಭಾವನೆ ಸಿಗುತ್ತದೆ. ಬಿಗ್‌ಬಾಸ್ ರಿಯಾಲಿಟಿ ಶೋ ನಿರೂಪಕನಾಗಿಯೂ ಸಲ್ಲು ಸಕ್ಸಸ್ ಕಂಡಿದ್ದಾರೆ. ಪ್ರತಿ ಎಪಿಸೋಡ್‌ಗೆ ಕೋಟಿ ಕೋಟಿ ಜೇಬಿಗಿಳಿಸುತ್ತಾರೆ.
ಸುಶಾಂತ್
ಸಿಂಗ್‌ನದ್ದು
ಆತ್ಮಹತ್ಯೆಯಲ್ಲ
ಕೊಲೆ!?
ಮರಣೋತ್ತರ
ಪರೀಕ್ಷೆ
ವೇಳೆ
ಮುಚ್ಚಿಟ್ರಾ
ಸತ್ಯ?
ಬಾಲಿವುಡ್‌ನಲ್ಲಿ ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಸಲ್ಮಾನ್ ಖಾನ್ ವಿವಾದಗಳಿಂದಲೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಜೈಲು ವಾಸ ಕೂಡ ಅನುಭವಿಸಿ ಬಂದಿದ್ದಾರೆ. ಇವತ್ತಿಗೂ ಬಾಲಿವುಡ್‌ನ ನಂಬರ್ ವನ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.

ಸಲ್ಲು ಲಕ್ಕಿ ಬ್ರೇಸ್ಲೈಟ್
ಸಲ್ಮಾನ್ ಖಾನ್ ಬರೀ ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಕೆಲ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದಾರೆ. ಸಲ್ಲು ಪೂರ್ಣ ಹೆಸರು ಅಬ್ದುಲ್ ರಶೀದ್ ಸಲೀಂ ಸಲ್ಮಾನ್ ಖಾನ್. ತಾತ ಅಬ್ದುಲ್ ರಶೀದ್ ಖಾನ್ ಹಾಗೂ ಸಲೀಂ ಖಾನ್ ಹೆಸರು ಸೇರಿಸಿ ಹೆಸರಿಟ್ಟಿದ್ದಾರೆ. ಸಲ್ಮಾನ್ ಖಾನ್ ಸದಾ ಕೈಯಲ್ಲಿ ಒಂದು ಬ್ರೇಸ್ಲೈಟ್ ಹಾಕಿಕೊಂಡಿರುತ್ತಾರೆ. ಕಳೆದ 20 ವರ್ಷಗಳಿಂದ ಇದನ್ನು ತಪ್ಪಿಸಿಲ್ಲ. ತಂದೆ ಸಲೀಂ ಖಾನ್ ಇದನ್ನು ಕೊಟ್ಟಿದ್ದರು. ಇದನ್ನು ತಮ್ಮ ಲಕ್ಕಿಚಾರ್ಮ್ ಎಂದೇ ಅವರು ಭಾವಿಸಿದ್ದಾರೆ.

ಆಸ್ತಿ ಮೌಲ್ಯ 2000 ಕೋಟಿ
ಬಾಲಿವುಡ್ ಭಾಯ್ಜಾನ್ ಬಹಳ ಶ್ರೀಮಂತ ನಟ ಎನಿಸಿಕೊಂಡಿದ್ದಾರೆ. 2000 ಕೋಟಿ ರೂ.ಗೂ ಅಧಿಕ ಆಸ್ತಿ ಸಲ್ಲು ಬಳಿ ಇದೆ ಎನ್ನುವ ಅಂದಾಜಿದೆ. ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಇನ್ನು ಜಾಹೀರಾತು, ಬಿಗ್‌ಬಾಸ್ ಶೋ ನಿರೂಪಣೆಯಿಂದಲೂ ನೂರಾರು ಕೋಟಿ ವರಮಾನ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಲ್ಲು ಸಿನಿಮಾಗಳು ಸೋತರೂ ಗೆದ್ದರೂ ಕ್ರೇಜ್ ಮಾತ್ರ ಕಮ್ಮಿ ಆಗ್ತಿಲ್ಲ. ಬಹುಕೋಟಿ ವೆಚ್ಚದ ಸಿನಿಮಾಗಳಲ್ಲಿ ಸಲ್ಲು ನಟಿಸುತ್ತಿದ್ದಾರೆ.

ಸಲ್ಮಾನ್ ಖಾನ್ ಜೈಲುವಾಸ
2002ರಲ್ಲಿ ಸಲ್ಮಾನ್ ಖಾನ್ ಬಳಿ ಇದ್ದ ಟೊಯೊಟೊ ಲ್ಯಾಂಡ್ ಕ್ರೂಸರ್ ಕಾರು ಮುಂಬೈನ ಅಮೆರಿಕಾ ಎಕ್ಸ್‌ಪ್ರೆಸ್ ಬೇಕರಿ ಪಕ್ಕದ ಫುಟ್‌ಪಾತ್‌ನಲ್ಲಿ ಮಲಗಿದ್ದವ ಮೇಲೆ ಹರಿದಿತ್ತು. ಪರಿಣಾಮ ಒಬ್ಬ ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು. ಪ್ರಕರಣದಲ್ಲಿ ಸಲ್ಲು ಮೇಲೆ ಭಾರತೀಯ ಗಂಡ ಸಂಹಿತೆ 304ರ ಅನ್ವಯ ಪ್ರಕರಣ ದಾಖಲಾಗಿತ್ತು. 2 ದಿನಗಳ ಜೈಲು ವಾಸ ಅನುಭವಿಸಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಅಪಘಾತ ಸಂಭವಿಸುವಾಗ ಸಲ್ಮಾನ್ ಅವರೇ ಕಾರನ್ನು ಚಾಲನೆ ಮಾಡುತ್ತಿದ್ದರು. ಆದರೆ ಸಲ್ಲು ವಿರುದ್ಧದ ಎಲ್ಲ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಹಿನ್ನಲೆಯಲ್ಲಿ ಆರೋಪಗಳಿಂದ ಖುಲಾಸೆ ಆಗಿದ್ದರು.

ಕೃಷ್ಣಮೃಗ ಬೇಟೆ ಪ್ರಕರಣ
1998, ಅಕ್ಟೋಬರ್ 2ರಂದು ಜೋಧಪುರದಲ್ಲಿ 'ಹಮ್ ಸಾಥ್ ಸಾಥ್ ಹೈ' ಸಿನಿಮಾ ಚಿತ್ರೀಕರಣದ ವೇಳೆ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 2 ದೂರು ದಾಖಲಾಗಿತ್ತು. 20 ವರ್ಷಗಳ ಕಾಲ ವಿಚಾರಣೆ ನಡೆದು 2018ರಲ್ಲಿ ಪ್ರಕರಣದಲ್ಲಿ ಸಲ್ಲು ಖುಲಾಸೆ ಆಗಿದ್ದರು. ಪ್ರಕರಣ ಸಂಬಂಧ 2006ರಲ್ಲಿ ಒಂದು ವಾರ ಸಲ್ಲು ಜೈಲು ಶಿಕ್ಷೆ ಅನುಭವಿಸಿದ್ದರು. 2018ರಲ್ಲಿ ಮತ್ತೆ 2 ದಿನ ಜೈಲಿನಲ್ಲಿ ಇದ್ದರು. ಜೋಧಪುರ ಸೆಶನ್ಸ್ ಕೋರ್ಟ್‌ನಲ್ಲಿ ಜಾಮೀನು ಪಡೆದು ಸಲ್ಮಾನ್ ಖಾನ್ ಹೊರ ಬಂದಿದ್ದರು.

ಅದ್ಧೂರಿ ಸಿನಿಮಾಗಳಲ್ಲಿ ಸಲ್ಲು
1988ರಲ್ಲಿ 'ಬೀವಿ ಹೋ ತೊ ಐಸಿ' ಸಿನಿಮಾ ಮೂಲಕ ಸಲ್ಮಾನ್ ಖಾನ್ ಬೆಳ್ಳಿಪರದೆಗೆ ಪರಿಚಿತರಾದರು. ಅದಕ್ಕೂ ಮುನ್ನು ಒಂದು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಸಿನಿಕರಿಯರ್‌ನಲ್ಲಿ ಸೋತಾಗಲೆಲ್ಲಾ ಸಲ್ಲು ಎದ್ದು ಬಂದಿದ್ದಾರೆ. ಸದ್ಯ ಶಾರುಕ್ ಖಾನ್ ನಟನೆಯ 'ಪಠಾಣ್' ಚಿತ್ರದಲ್ಲಿ ಸಲ್ಲು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್', 'ಟೈಗರ್'-3 ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. 'ಭಜರಂಗಿ ಭಾಯ್ಜಾನ್'- 2 ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.