For Quick Alerts
  ALLOW NOTIFICATIONS  
  For Daily Alerts

  ರವಿಶಂಕರ್ ಗುರೂಜಿ ಆಶ್ರಮದ ಉತ್ಸವದಲ್ಲಿ ಹೇಮಮಾಲಿನಿ, ಸುಮಲತಾ!

  By ಫಿಲ್ಮಿಬೀಟ್ ಡೆಸ್ಕ್
  |

  ಬೆಂಗಳೂರಿನಲ್ಲಿರುವ ಶ್ರೀಶ್ರೀ ರವಿಶಂಕರ್ ಗುರೂಜಿ ಆಶ್ರಮದ ವರ್ಲ್ಡ್ ಫೋರಮ್ ಫಾರ್ ಆರ್ಟ್ ಅಂಡ್ ಕಲ್ಚರ್ (WFAC) ಭಾವ್ - ದಿ ಎಕ್ಸ್‌ಪ್ರೆಶನ್ಸ್ ಸಮ್ಮಿಟ್ 2023ಯನ್ನು ಹಮ್ಮಿಕೊಳ್ಳಲಾಗಿದೆ.2023ರ ಜನವರಿ 25 ರಿಂದ 28 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

  ಭಾರತೀಯ ಲಲಿತ ಕಲೆಗಳನ್ನು ಪ್ರದರ್ಶಿಸಲು ವಿಶ್ವದ ಅತ್ಯುತ್ತಮ ಕಲಾವಿದರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಹಾಗೇ ಬೆಂಗಳೂರಿನ ದಿ ಆರ್ಟ್ ಆಫ್ ಲಿವಿಂಗ್ ಇಂಟರ್ನ್ಯಾಷನಲ್ ಸೆಂಟರ್‌ನಲ್ಲಿ ಶ್ರೀ ಶ್ರೀ ರವಿಶಂಕರ್ ಉಪಸ್ಥಿತಿಯಲ್ಲಿ ಅಭಿವ್ಯಕ್ತಿ ಶೃಂಗಸಭೆ ಕೂಡ ಹಮ್ಮಿಕೊಳ್ಳಲಾಗಿದೆ.

  ಈ ಶೃಂಗಸಭೆಗೆ ಸಂಗೀತ, ನೃತ್ಯ ಮತ್ತು ರಂಗಭೂಮಿ ಕ್ಷೇತ್ರಗಳ ಸಾಧಕರಾದ ಪದ್ಮವಿಭೂಷಣ ಪಂ.ಹರಿಪ್ರಸಾದ್ ಚೌರಾಸಿಯಾ, ಪದ್ಮಭೂಷಣ ಪಂ.ಸಜನ್ ಮಿಶ್ರಾ, ಪದ್ಮಭೂಷಣ ಶ್ರೀಮತಿ.ಸುಧಾ ರಘುನಾಥನ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸುತ್ತಿದ್ದಾರೆ.

  ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಪ್ರಮುಖ ಗಣ್ಯರು ಆಗಮಿಸಲಿದ್ದಾರೆ. ಹಿರಿಯ ಬಾಲಿವುಡ್‌ ನಟಿ ಹೇಮಾ ಮಾಲಿನಿ, ನಟಿ ಹಾಗೂ ಎಂಪಿ ಸುಮಲತಾ, ಮಧ್ಯಪ್ರದೇಶದ ಸಾಂಸ್ಕೃತಿಕ ಸಚಿವೆ ಉಷಾ ಠಾಕೂರ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಲಿದ್ದಾರೆ.ಈ ಸಮಾವೇಶದಲ್ಲಿ ಭಾರತದಾದ್ಯಂತ ಸುಮಾರು 650 ಕಲಾವಿದರು ಭಾಗವಹಿಸುವ ನಿರೀಕ್ಷೆಯಿದೆ.

  Hema Malini, Sumalatha Will Be the Guest For Ravishankar Guruji Ashrama

  ಅಂದ್ಹಾಗೆ, ಈ ಕಾರ್ಯಕ್ರಮದಲ್ಲಿ ಸಂಗ್ರಹಿಸಲಾದ ಸಂಪೂರ್ಣ ಹಣವನ್ನು ಗಿಫ್ಟ್ ಎ ಸ್ಮೈಲ್‌ಗೆ ನೀಡಲಾಗುತ್ತೆ. ಗಿಫ್ಟ್ ಎ ಸ್ಮೈಲ್ ಮೂಲಕ, ಆರ್ಟ್ ಆಫ್ ಲಿವಿಂಗ್ ಭಾರತದ 2032 ಹಳ್ಳಿಗಳಲ್ಲಿ ಗ್ರಾಮೀಣ, ಬುಡಕಟ್ಟು ಮತ್ತು ಕೊಳೆಗೇರಿ ಪ್ರದೇಶಗಳಲ್ಲಿನ 1096 ಶಾಲೆಗಳ ಮೂಲಕ 82,000+ ಹಿಂದುಳಿದ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತೆ.

  English summary
  Hema Malini, Sumalatha Will Be the Guest For Ravishankar Guruji Ashrama, Know More.
  Monday, January 23, 2023, 23:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X