For Quick Alerts
  ALLOW NOTIFICATIONS  
  For Daily Alerts

  ಸಕ್ರಿಯ ರಾಜಕೀಯಕ್ಕೆ ಕಂಗನಾ: ಹೇಮಾ ಮಾಲಿನಿ ಗರಂ

  |

  ರಾಜಕೀಯ ವಿಷಯಗಳ ಬಗ್ಗೆ ಸದಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕುತ್ತಲೇ ಇರುವ ನಟಿ ಕಂಗನಾ ಸಕ್ರಿಯ ರಾಜಕಾರಣದಲ್ಲಿಲ್ಲದಿದ್ದರೂ ಪರೋಕ್ಷ ರಾಜಕಾರಣಿಯೇ ಆಗಿದ್ದರು. ಆದರೆ ಈಗ ಸಕ್ರಿಯ ರಾಜಕೀಯಕ್ಕೆ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಇದಕ್ಕೆ ಹಿರಿಯ ನಟಿ, ರಾಜಕಾರಣಿ ಹೇಮಾಮಾಲಿನಿಯ ವಿರೋಧ ವ್ಯಕ್ತವಾಗಿದೆ.

  ನಟಿ ಕಂಗನಾ ರನೌತ್ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿರುವ ಬಗ್ಗೆ ನಟಿ ಹೇಮಾಮಾಲಿನಿಯನ್ನು ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಆ ಬಗ್ಗೆ ಗರಂ ಆಗಿ ಮಾತನಾಡಿದ್ದಾರೆ ಹೇಮಾ ಮಾಲಿನಿ.

  ಸೀತಾರಾಮಮ್ ಚಿತ್ರದಲ್ಲಿ ಎಲ್ಲರಿಗಿಂತ ಇವರ ನಟನೆ ಅತ್ಯದ್ಭುತ ಎಂದು ಹೊಗಳಿದ ಕಂಗನಾ ರಣಾವತ್ ಸೀತಾರಾಮಮ್ ಚಿತ್ರದಲ್ಲಿ ಎಲ್ಲರಿಗಿಂತ ಇವರ ನಟನೆ ಅತ್ಯದ್ಭುತ ಎಂದು ಹೊಗಳಿದ ಕಂಗನಾ ರಣಾವತ್

  ''ನನ್ನ ನಂಬಿಕೆ ಎಲ್ಲ ಶ್ರೀಕೃಷ್ಣನ ಮೇಲಿದೆ ಆತ ಏನು ಮಾಡುತ್ತಾನೊ ಹಾಗೆ ಆಗಲಿದೆ'' ಎಂದಿದ್ದಾರೆ. ಮುಂದುವರೆದು, ''ಮಥುರಾ ಕ್ಷೇತ್ರದಿಂದ ಸಿನಿಮಾ ತಾರೆಯರೇ ಗೆಲ್ಲಬೇಕು ಎಂದು ನೀವು (ಮಾಧ್ಯಮಗಳಿಗೆ) ತಲೆಗೆ ತುಂಬಿಬಿಟ್ಟಿದ್ದೀರ. ಬರೀ ಸಿನಿಮಾ ತಾರೆಯರು ಮಾತ್ರವೇ ರಾಜಕೀಯಕ್ಕೆ ಬರಬೇಕ? ಇನ್ಯಾರು ರಾಜಕೀಯ ಮಾಡಬಾರದ. ಮುಂದೆ ರಾಖಿ ಸಾವಂತ್‌ ಸಹ ರಾಜಕೀಯಕ್ಕೆ ಬರಬಹುದೇನೋ. ಆಕೆಯೂ ನಟಿಯೇ ಅಲ್ಲವೆ'' ಎಂದು ಪರೋಕ್ಷವಾಗಿ ಕಂಗನಾಗೆ ಟಾಂಗ್ ನೀಡಿದ್ದಾರೆ ಹೇಮಾ ಮಾಲಿನಿ.

  ಹೇಮಾಮಾಲಿನಿ ಸತತ ಎರಡು ಬಾರಿ ಮಥುರಾ ಕ್ಷೇತ್ರದಿಂದ ಸಂಸದೆ ಆಗಿ ಆಯ್ಕೆ ಆಗಿದ್ದಾರೆ. ಈಗ ಕಂಗನಾ ಸಹ ಮಥುರಾದಿಂದಲೇ ರಾಜಕೀಯ ಪ್ರಾರಂಭಿಸುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ವರೆಗೆ ಅದು ಅಧಿಕೃತಗೊಂಡಿಲ್ಲ.

  ವಿಪರ್ಯಾಸವೆಂದರೆ, ಸಿನಿಮಾ ತಾರೆಯರು ರಾಜಕೀಯಕ್ಕೆ ಬರಬಾರದು ಎಂಬರ್ಥದಲ್ಲಿ ಮಾತನಾಡಿರುವ ಹೇಮಾಮಾಲಿ ಸ್ವತಃ ಚಿತ್ರನಟಿ, ಅವರ ಪತಿ ಧರ್ಮೇಂದ್ರ ಸಹ ಚಿತ್ರನಟ ಹಾಗೂ ರಾಜಕಾರಣಿ, ಮತಿಯ ಮೊದಲ ಹೆಂಡತಿಯ ಪುತ್ರ ಸನ್ನಿ ಡಿಯೋಲ್ ಸಹ ಚಿತ್ರನಟ ಹಾಗೂ ಸಂಸದ. ಇಡೀ ಕುಟುಂಬವೇ ರಾಜಕೀಯದಲ್ಲಿದ್ದರೂ ಸಹ ಈಗ ಹೊಸ ಚಿತ್ರನಟರು ರಾಜಕೀಯಕ್ಕೆ ಬರುವುದನ್ನು ವಿರೋಧಿಸುತ್ತಿದ್ದಾರೆ. ಇದು ಟ್ರೋಲ್‌ಗೆ ಕಾರಣವಾಗಿದೆ.

  English summary
  Bollywood actress and BJP MP Hemamalini upset about Kangana Ranaut entering politics from Mathura. She said Rakhi Sawant will also enter politics in future.
  Sunday, September 25, 2022, 12:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X