»   » ಗುಂಡಿನ ಗಮ್ಮತ್ತು ಸಿಗರೇಟ್ ಕಿಮ್ಮತ್ತಿನಲ್ಲಿ ತಾರೆ ಕರೀನಾ!

ಗುಂಡಿನ ಗಮ್ಮತ್ತು ಸಿಗರೇಟ್ ಕಿಮ್ಮತ್ತಿನಲ್ಲಿ ತಾರೆ ಕರೀನಾ!

Posted By:
Subscribe to Filmibeat Kannada
ಬಾಲಿವುಡ್ ಬೇಬಿ ಕರೀನಾ ಕಪೂರ್ ಗುಂಡಿನ ಗಮ್ಮತ್ತು, ಸಿಗರೇಟ್ ಕಿಕ್‌ನಲ್ಲಿ ತೇಲಾಡಿದ್ದಾರೆ. ಆದರೆ ರಿಯಲ್ ಆಗಿ ಅಲ್ಲ ರೀಲ್‌ಗಾಗಿ ಮಾಡಿದ ಬೋಲ್ಡ್ ಅಭಿನಯವಿದು. ತಮ್ಮ ಮುಂದಿನ 'ಹೀರೋಯಿನ್' ಚಿತ್ರಕ್ಕಾಗಿ ಒಂದು ಕೈಯಲ್ಲಿ ಹೊಗೆಯಾಡುತ್ತಿರುವ ಸಿಗರೇಟು ಮತ್ತೊಂದು ಕೈಯಲ್ಲಿ ನೊರೆಯುಕ್ಕಿಸುತ್ತಿರುವ ಮದ್ಯದ ಗ್ಲಾಸು ಹಿಡಿದು ಅಭಿನಯಿಸಿದ್ದಾರೆ.

ಮಧುರ್ ಭಂಡಾರ್‌ಕರ್ ಅವರ ಮಹತ್ವಾಕಾಂಕ್ಷಿ 'ಹೀರೋಯಿನ್‌' ಚಿತ್ರದ ಫಸ್ಟ್ ಲುಕ್ ಬಹಿರಂಗವಾಗಿದೆ. ಈ ಬಗ್ಗೆ ಟ್ವೀಟಿಸಿರುವ ಭಂಡಾರ್‌ಕರ್, "ನನ್ನ ಹೀರೋಯಿನ್ ಕರೀನಾ ಬೋಲ್ಡ್, ಸಿಡುಕುವ, ಸೆನ್ಸಾರ್‌ ಆಗದ ನೀವೆಂದೂ ನೋಡದ ಅವತಾರ" ಎಂದಿದ್ದಾರೆ.

ಅಭಿನೇತ್ರಿಯೊಬ್ಬಳ ಸಿನಿ ಪಯಣದ ಕಥಾವಸ್ತುವೇ 'ಹೀರೋಯಿನ್'. ಆಕೆಯ ವೃತ್ತಿಜೀವನದ ಏರಿಳಿತಗಳು, ಆಕೆಯ ಸಂಬಂಧ, ವಿವಾದಗಳ ಸುತ್ತ ಕತೆ ಸುತ್ತುತ್ತದೆ. ಸಮಕಾಲೀನ ಬಾಲಿವುಡ್ ಚಿತ್ರರಂದಗ ಮೇಲೆ ಬೆಳಕು ಚೆಲ್ಲುತ್ತದೆ ಎಂದಿದ್ದಾರೆ ಭಂಡಾರ್‌ಕರ್.

ಆರಂಭದಲ್ಲಿ ಈ ಚಿತ್ರಕ್ಕೆ ಐಶ್ವರ್ಯ ರೈ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಆಕೆ ಗರ್ಭಿಣಿ ಎಂದು ಗೊತ್ತಾಗಿದ್ದೇ ತಡ ಚಿತ್ರದಿಂದ ಹೊರದ್ದಿದ್ದರು. ತೆರೆವಾಗಿದ್ದ ಆಕೆಯ ಸ್ಥಾನಕ್ಕೆ ಕರೀನಾ ಕಪೂರ್ ಎಂಟ್ರಿಕೊಟ್ಟರು. ರಣದೀಪ್ ಹೂಡ ಹಾಗೂ ಅರ್ಜುನ್ ರಾಂಪಾಲ್ ಚಿತ್ರದ ತಾರಾಬಳಗದಲ್ಲಿದ್ದಾರೆ. (ಏಜೆನ್ಸೀಸ್)

English summary
The first look of the filmmaker Madhur Bhandarkar highly anticipated film ‘Heroine’ has been revealed. The scene shows Kareena Kapoor in a bold avatar. She holds the cigarette in one hand and holds a glass of wine on the other hand.
Please Wait while comments are loading...