»   » ರಾಣಿ ಮುಖರ್ಜಿ ಅಭಿನಯದ 'ಹಿಚ್ಕಿ' ಮೊದಲ ದಿನದ ಕಲೆಕ್ಷನ್ ಎಷ್ಟು.?

ರಾಣಿ ಮುಖರ್ಜಿ ಅಭಿನಯದ 'ಹಿಚ್ಕಿ' ಮೊದಲ ದಿನದ ಕಲೆಕ್ಷನ್ ಎಷ್ಟು.?

Posted By:
Subscribe to Filmibeat Kannada

ನಾಲ್ಕು ವರ್ಷಗಳ ಗ್ಯಾಪ್ ನಂತರ ನಟಿ ರಾಣಿ ಮುಖರ್ಜಿ ಮರಳಿ ಬಣ್ಣ ಹಚ್ಚಿರುವ 'ಹಿಚ್ಕಿ' ಸಿನಿಮಾ ತೆರೆಗೆ ಬಂದಿದೆ. ಸಿದ್ಧಾರ್ಥ್ ಮಲ್ಹೋತ್ರ ನಿರ್ದೇಶನದ 'ಹಿಚ್ಕಿ' ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

Tourette's syndrome ನಿಂದ ಬಳಲುತ್ತಿರುವ ಶಿಕ್ಷಕಿ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಸುತ್ತ ಹೆಣೆದಿರುವ ಕಥೆಯೇ 'ಹಿಚ್ಕಿ'. ತೆರೆಮೇಲೆ ಶಿಕ್ಷಕಿಯ ಪಾತ್ರವನ್ನ ನಿರ್ವಹಿಸಿರುವ ರಾಣಿ ಮುಖರ್ಜಿಯ ಆಕ್ಟಿಂಗ್ ನೋಡಿ ನಿಜವಾದ ಶಿಕ್ಷಕಿಯರೇ ಶಿಳ್ಳೆ ಹೊಡೆದಿದ್ದಾರೆ.

ಸದಭಿರುಚಿಯ ಸಿನಿಮಾ ಆಗಿರುವ 'ಹಿಚ್ಕಿ' ಉತ್ತಮ ಓಪನ್ನಿಂಗ್ ಪಡೆದುಕೊಂಡಿದ್ದು, ಮೊದಲ ದಿನವೇ 3.30 ಕೋಟಿ ಕಲೆಕ್ಷನ್ ಮಾಡಿದೆ. ಹಾಗ್ನೋಡಿದ್ರೆ, 'ಹಿಚ್ಕಿ' ಸಿನಿಮಾ 961 ಸ್ಕ್ರೀನ್ ಗಳಲ್ಲಿ ಮಾತ್ರ ಪ್ರದರ್ಶನ ಆಗುತ್ತಿದೆ. ಕಮ್ಮಿ ಸ್ಕ್ರೀನ್ ಗಳಿದ್ದರೂ, ಕಲೆಕ್ಷನ್ ಮಾತ್ರ ಜೋರಾಗಿದೆ.

Hichki First day Box office collection

ರಾಣಿ ಮುಖರ್ಜಿ 'ಹಿಚ್ಕಿ' ಚಿತ್ರವನ್ನು ಮೆಚ್ಚಿದ ಶಿಕ್ಷಕಿಯರು

'ಹಿಚ್ಕಿ' ಮಹಿಳಾ ಪ್ರಧಾನ ಸಿನಿಮಾ. ಹೀಗಾಗಿ, ದೊಡ್ಡ ಮಟ್ಟಕ್ಕೆ ಓಪನ್ನಿಂಗ್ ಪಡೆದುಕೊಳ್ಳದೇ ಇದ್ದರೂ, ಇತರೆ ಮಹಿಳಾ ಪ್ರಧಾನ ಚಿತ್ರಗಳಿಗೆ ಹೋಲಿಸಿದ್ರೆ ('ತುಮ್ಹಾರಿ ಸುಲು', 'ಮಾಮ್', 'ಸಿಮ್ರನ್', 'ಬೇಗಮ್ ಜಾನ್') 'ಹಿಚ್ಕಿ' ಕಲೆಕ್ಷನ್ ಚೆನ್ನಾಗಿದೆ. ಎರಡು ದಿನಗಳಲ್ಲಿ 'ಹಿಚ್ಕಿ' ಕಲೆಕ್ಷನ್ 8.65 ಕೋಟಿ ಎಂದು ಅಂದಾಜಿಸಲಾಗಿದೆ.

English summary
After the gap of 4 years, Rani Mukherjee is back on Silver Screen with 'Hichki'. According to the reports, Hichki has collected Rs.3.30 crores on Day 1.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X