»   » 'ಮೊಹೆಂಜೋದಾರೊ' ನಟಿ ಪೂಜಾದ್ದು ರಣಬೀರ್ ದ್ದು ಹಳೇ ಪರಿಚಯ

'ಮೊಹೆಂಜೋದಾರೊ' ನಟಿ ಪೂಜಾದ್ದು ರಣಬೀರ್ ದ್ದು ಹಳೇ ಪರಿಚಯ

By: ಸೋನು ಗೌಡ
Subscribe to Filmibeat Kannada

'ಮೊಹೆಂಜೋದಾರೊ' ಚಿತ್ರದ ಮೂಲಕ ಸದ್ಯಕ್ಕೆ ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ಕನ್ನಡತಿ ಪೂಜಾ ಹೆಗ್ಡೆ, ಈಗಾಗಲೇ ಬಿಟೌನ್ ನಲ್ಲಿ ಟಾಕ್ ಆಫ್ ದ ಟೌನ್ ಆಗಿದ್ದಾರೆ. ಹೀಗಿರುವಾಗ ಇದೀಗ ನಟಿ ಪೂಜಾ ಹೆಗ್ಡೆ ಅವರ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರ ಹೊರಬಿದ್ದಿದೆ.

ದಕ್ಷಿಣ ಭಾರತದಲ್ಲಿ ಖ್ಯಾತಿ ಗಳಿಸಿದ್ದ ನಟಿ ಪೂಜಾ ಅವರು ಹೃತಿಕ್ ರೋಷನ್ ಅವರ ಜೊತೆ 'ಮೊಹೆಂಜೋದಾರೊ' ಚಿತ್ರದ ಮೂಲಕ ಮೊದಲ ಬಾರಿಗೆ ಬಿಟೌನ್ ಗೆ ಕಾಲಿಟ್ಟರೂ ಕೂಡ, ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ಮೊದಲೇ ಒಳ್ಳೆ ಪರಿಚಯ.[ರಿಲೀಸ್ ಗೂ ಮುನ್ನ ಕೋಟಿ-ಕೋಟಿ ಬಾಚಿದ 'ಮೊಹೆಂಜೋದಾರೊ']

Hidden connection between Actress Pooja Hegde and Ranbir Kapoor

ನಾವು ಹೀಗೆ ಹೇಳಿದ ತಕ್ಷಣ ನೀವು, ಅವರಿಬ್ಬರ ನಡುವೆ 'ಅಫೇರ್ ಚಲ್ತಾ ಹೈ ಕ್ಯಾ' ಅಂತ ಊಹೆ ಮಾಡಿಕೊಳ್ಳಬೇಡಿ. ಅಂದಹಾಗೆ ಇವರಿಬ್ಬರು ಫ್ರೆಂಡ್ಸ್ ಕೂಡ ಅಲ್ಲ, ಒಟ್ಟಿಗೆ ಸಿನಿಮಾ ಕೂಡ ಮಾಡಿಲ್ಲ. ಇವರಿಬ್ಬರು ಒಂದಾಗಿ ಕಾಣಿಸಿಕೊಂಡಿದ್ದು, ಒಂದು ಕಮರ್ಷಿಯಲ್ ಜಾಹೀರಾತಿನಲ್ಲಿ.

ಸ್ಕೂಟಿ ಮೆಸ್ಟ್ರೆಡ್ ಜಾಹೀರಾತಿನಲ್ಲಿ ನಟ ರಣಬೀರ್ ಕಪೂರ್ ಮತ್ತು ಪೂಜಾ ಹೆಗ್ಡೆ ಅವರು ಒಂದಾಗಿ ಕಾಣಿಸಿಕೊಂಡಿದ್ದರು. ಈ ಜಾಹೀರಾತು ಪೂಜಾ ಅವರಿಗೆ ಅದೃಷ್ಟ ದೇವತೆ ಆಗಿ ಒಲಿದು ಬಂದಿದ್ದಂತೆ.[ಡೆಂಗ್ಯೂ ಜ್ವರದಿಂದ ಬಳಲುತ್ತಿರುವ 'ಮೊಹೆಂಜೋದಾರೊ' ಬೆಡಗಿ]

Hidden connection between Actress Pooja Hegde and Ranbir Kapoor

ಜಾಹೀರಾತಿನಲ್ಲಿ ನಟಿ ಪೂಜಾ ಅವರು ರಣಬೀರ್ ಕಪೂರ್ ಜೊತೆ ನಟಿಸಿದ್ದನ್ನು ಕಂಡು ನಿರ್ದೇಶಕ ಅಶುತೋಶ್ ಗೌರಿಕರ್ ಅವರು ಪೂಜಾ ಅವರಿಗೆ ತಮ್ಮ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಕರೆ ನೀಡಿದ್ರಂತೆ. ಒಟ್ನಲ್ಲಿ ಒಂದು ಜಾಹೀರಾತು ಪೂಜಾ ಅವರ ನಸೀಬನ್ನೇ ಬದ್ಲಾಯಿಸಿ ಬಿಟ್ಟಿತು ಅಂದ್ರೆ ತಪ್ಪಾಗಲ್ಲ.['ಮೊಹೆಂಜೋದಾರೊ'ದಲ್ಲಿ ಹೃತಿಕ್ ಪಟ್ಟದರಸಿಯಾದ ಪೂಜಾ ಹೆಗ್ಡೆ]

Hidden connection between Actress Pooja Hegde and Ranbir Kapoor

ಹೃತಿಕ್ ರೋಷನ್ ಮತ್ತು ಪೂಜಾ ಒಂದಾಗಿ ಕಾಣಿಸಿಕೊಂಡಿರುವ ಅದ್ಧೂರಿ ಸಿನಿಮಾ ಮೊಹೆಂಜೋದಾರೊ ಇದೇ ಶುಕ್ರವಾರ (ಆಗಸ್ಟ್ 12) ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ರಣಬೀರ್ ಹಾಗೂ ಪೂಜಾ ಕಾಣಿಸಿಕೊಂಡಿದ್ದ ಜಾಹೀರಾತಿನ ವಿಡಿಯೋ ಇಲ್ಲಿದೆ ನೋಡಿ...

English summary
Actress Pooja Hegde who is making her Bollywood debut with upcoming movie 'Mohenjo Daro' with Hrithik Roshan, which has directed by Ashutosh Gowariker has a very strong relation with Actor Ranbir Kapoor. Actually before coming to Bollywood Pooja did a commercial with Ranbir Kapoor of a scooty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada